Kannadavahini

ಬಾರಿಸು ಕನ್ನಡ ಡಿಂಡಿಮವ

Month: March 2025

ಡಿಕೆ ಶಿವಕುಮಾರ್ ಕನಸಿಗೆ ತಣ್ಣೀರು: ಬೆಂಗಳೂರು ದಕ್ಷಿಣ ಹೆಸರು ಮರನಾಮಕರಣ ಪ್ರಸ್ತಾಪಕ್ಕೆ ಕೇಂದ್ರ ತಿರಸ್ಕಾರ

ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಕನಸಿಗೆ ಕೇಂದ್ರ ತಣ್ಣೀರು ಎರಚಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಪತ್ರ ಬರೆದಿದ್ದು, ಇನ್ನು ಮುಂದಿನ ದಿನಗಳಲ್ಲಿ…

ಗಂಡನನ್ನು ಕೊಂದು ಡ್ರಮ್ ನಲ್ಲಿ ಸೀಮೆಂಟ್ ನಿಂದ ಶವ ಮುಚ್ಚಿದ ಪತ್ನಿ!

ಪ್ರಿಯಕರನ ಜೊತೆ ಸೇರಿ ಪತಿಯನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದು ಶವವನ್ನು ಡ್ರಮ್ನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬ್ರಹ್ಮಪುರಿಯ ಇಂದಿರಾ ನಗರದಲ್ಲಿ ಖಾಸಗಿ ಹಡಗು ಕಂಪನಿಯ ಉದ್ಯೋಗಿ ಸೌರಭ್ ರಜಪೂತ್ (29) ಕೊಲೆಯಾದ ದುರ್ದೈವಿ ಪತಿ. ಪತ್ನಿ ಮುಸ್ಕಾನ್ (27) ಮತ್ತು ಪ್ರಿಯಕರ ಸಾಹಿಲ್ (25) ನನ್ನು ಪೊಲೀಸರು…

ಕುಂಭ ಮೇಳದ ದುರಂತ ಪ್ರಸ್ತಾಪಿಸದ ಪ್ರಧಾನಿ ಮೋದಿ: ಪ್ರತಿಪಕ್ಷಗಳ ಆಕ್ರೋಶಕ್ಕೆ ಕಲಾಪ ಬಲಿ

ನವದೆಹಲಿ: ಮಹಾಕುಂಭದಲ್ಲಿ ಸಂಭವಿಸಿದ ದುರಂತಗಳನ್ನು ಪ್ರಸ್ತಾಪಿಸದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ ಕಾರಣ ಲೋಕಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಮಹಾಕುಂಭದ ಕುರಿತು ಪ್ರಧಾನಿ ಮೋದಿ ಹೇಳಿಕೆ ನೀಡಿದ ಕೂಡಲೇ ಪ್ರತಿಪಕ್ಷಗಳ ಸದಸ್ಯರು ತಮ್ಮ ಆಸನದಿಂದ ಎದ್ದುನಿಂತು ಪ್ರತಿಭಟನೆಗೆ ಮುಂದಾದರು. ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಲ್ಲಿ ಕಾಲ್ತುಳಿತದಿಂದ…

ಜಾಮೀನಿಗೆ ಮೀನಾಮೇಷ ಏಕೆ? ಅಧೀನ ನ್ಯಾಯಾಲಯಗಳಿಗೆ ಸುಪ್ರೀಂ ಚಾಟಿ

ನವದೆಹಲಿ: ತನಿಖೆ ಮುಗಿದಿರುವ ಗಂಭೀರವಲ್ಲದ ಪ್ರಕರಣಗಳಲ್ಲಿ ಆರೋಪಿಗಳಗೆ ಜಾಮೀನು ನೀಡಲು ಹಿಂಜರಿಕೆ ಏಕೆ ಎಂದು ಸುಪ್ರೀಂ ಕೋರ್ಟು ಅಧೀನ ನ್ಯಾಯಾಲಯಗಳನ್ನು ಪ್ರಶ್ನಿಸಿದೆ. ಈಗಾಗಲೇ ತನಿಖೆ ಪೂರ್ಣಗೊಂಡಿದ್ದರೂ ಕೂಡ ವಿಚಾರಣಾ ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು,…

ಎಪಿಕ್ ನಕಲು ಗುರುತಿಗೆ ಆಪ್: ಚುನಾವಣಾ ಆಯೋಗದ ನಿರ್ಧಾರ

ನವದೆಹಲಿ: ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಿರಂತರ ಪ್ರಯತ್ನದ ಫಲವಾಗಿ ನಕಲಿ ಎಪಿಕ್ ಸಂಖ್ಯೆಗಳ ಸಮಸ್ಯೆಯನ್ನು ಗುರುತಿಸಲು ಚುನಾವಣಾ ಆಯೋಗ ಮುಂದಾಗಿದೆ. ನಕಲಿ ಎಪಿಕ್ ಸಂಖ್ಯೆಗಳನ್ನು ಪತ್ತೆಹಚ್ಚಲು ಚುನಾವಣಾ ಆಯೋಗವು ತನ್ನ ಆಪ್‌ನಲ್ಲಿ ಹೊಸ ಆಯ್ಕೆಯನ್ನು ಪರಿಚಯಿಸಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮತದಾರರ ಗುರುತಿನ ಚೀಟಿಗಳು ಒಂದೇ ರೀತಿಯ `ಎಪಿಕ್’ ಸಂಖ್ಯೆಗಳನ್ನು ಹೊಂದಿರುವ…

ಪಶ್ಚಿಮ ಬಂಗಾಳ ಬಿಜೆಪಿಗೆ ಮಹಿಳಾ ಸಾರಥಿ?

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕತ್ವದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದ್ದು, ಇಬ್ಬರು ಪ್ರಮುಖ ಮಹಿಳಾ ನಾಯಕರನ್ನು ಪಕ್ಷ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಸಂಸದೆ ಲಾಕೆಟ್ ಚಟರ್ಜಿ ಮತ್ತು ಬಂಗಾಳದ ಶಾಸಕಿ ಅಗ್ನಿಮಿತ್ರ ಪಾಲ್ ಈ ಹುದ್ದೆಗೆ ಮುಂಚೂಣಿಯಲ್ಲಿರುವ ನಾಯಕಿಯರಾಗಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಇಬ್ಬರೂ ನಾಯಕರನ್ನು…

ಗಂಟೆಗೆ 1000 ಕಿ.ಮೀ. ವೇಗದಲ್ಲಿ ಸಂಚರಿಸುವ ಹೈಪರ್ ಲೂಪ್ ಅಭಿವೃದ್ಧಿ!

ಚೆನ್ನೈ: ಗಂಟೆಗೆ ಸಾವಿರ ಕಿಮಿ ವೇಗದಲ್ಲಿ ಸಂಚರಿಸುವ ಹೈಪರ್‌ಲೋಪ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಐಐಟಿ ಮದ್ರಾಸ್ ಮಾಡುತ್ತಿದೆ. ಹೈಪರ್ಲೂಪ್ನ ವಾಣಿಜ್ಯ ಕಾರ್ಯಾಚರಣೆ ಒಪ್ಪಂದಕ್ಕೆ ಸಹಿ ಹಾಕಲು ಯೋಜಿಸಲಾಗಿದೆ ಎಂದು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವೀಜಿನಾಥನ್ ಕಾಮಕೋಟಿ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಭಾರತೀಯ ರೈಲ್ವೇಯ ಧನಸಹಾಯದೊಂದಿಗೆ ಪ್ರಾರಂಭವಾದ ಹೈಪರ್ಲೂಪ್ ತಂತ್ರಜ್ಞಾನ ಸಂಶೋಧನೆ ಈಗ ಒಂದು…

ಮುಂದಿನ ಬಾರಿ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ವಿಶ್ವಾಸ

ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದರೆ ಬಿಜೆಪಿಯನ್ನು ಜನರು ಆಶೀರ್ವಾದವೇ ಮಾಡಿಲ್ಲ. ಮುಂದಿನ ಬಾರಿ ಬಿಜೆಪಿಯವರನ್ನು ಧೂಳಿಪಟ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಮಂಗಳವಾರ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿಯವರು ಹಾಗೂ ರಾಜ್ಯದ ಬಿಜೆಪಿಯವರು ಸುಳ್ಳು ಸುಳ್ಳೆ ಟೀಕಿಸಿದರು. ಗ್ಯಾರಂಟಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿ ರಾಜ್ಯ ದಿವಾಳಿಯಾಗುತ್ತದೆ…

ಇಸ್ರೇಲ್ ಭೀಕರ ವಾಯುದಾಳಿ: ಗಾಜಾ ಭದ್ರತಾ ಮುಖ್ಯಸ್ಥ ಸೇರಿ 413 ಮಂದಿ ಸಾವು

ಕದನ ವಿರಾಮದ ನಂತರ ಗಾಜಾ ಮೇಲೆ ಇಸ್ರೇಲ್ ಸೇನೆ ನಡೆಸಿದ ಭಾರೀ ಪ್ರಮಾಣದ ವಾಯುದಾಳಿಯಲ್ಲಿ ಗಾಜಾ ಆಂತರಿಕ ಭದ್ರತಾ ಮುಖ್ಯಸ್ಥ ಸೇರಿ ೪೧೩ ಮಂದಿ ಅಸುನೀಗಿದ್ದಾರೆ. ಜನವರಿ 19ರಿಂದ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆ ಆಗಿತ್ತು. ಇದಾದ ನಂತರ ಇದೇ ಮೊದಲ ಬಾರಿಗೆ ಇಸ್ರೇಲ್ ಭಾರೀ ಪ್ರಮಾಣದ ದಾಳಿ ನಡೆಸಿದೆ. ಇದರಿಂದ ಗಾಜಾದ…

4347 ಕೋಟಿ ರೂ.ವೆಚ್ಚದಲ್ಲಿ ಟೆನಿಸ್ ಗ್ರ್ಯಾನ್ ಸ್ಲಾಮ್ ಮಾದರಿ ಟಿ-20 ಲೀಗ್ ನಡೆಸಲು ಸೌದಿ ಸಿದ್ಧತೆ!

ಟೆನಿಸ್ ಗ್ರ್ಯಾನ್ ಸ್ಲಾಮ್ ಟೂರ್ನಿ ಮಾದರಿ ಜಾಗತಿಕ ಮಟ್ಟದಲ್ಲಿ ಟಿ-20 ಕ್ರಿಕೆಟ್ ಲೀಗ್ ಟೂರ್ನಿ ಆಯೋಜಿಸಲು ಸಿದ್ಧತೆ ನಡೆಸಿರುವ ಸೌದಿ ಅರೆಬಿಯಾ ಇದಕ್ಕಾಗಿ 500 ದಶಲಕ್ಷ ಡಾಲರ್ (ಅಂದಾಜು 4347 ಕೋಟಿ ರೂ.) ಹೂಡಿಕೆ ಮಾಡಲು ಸಿದ್ಧವಾಗಿದೆ. ವರ್ಷದಲ್ಲಿ ನಾಲ್ಕು ದೇಶಗಳಲ್ಲಿ ಟಿ-20 ಕ್ರಿಕೆಟ್ ಲೀಗ್ ನಡೆಸುವ ಬೃಹತ್ ಯೋಜನೆ ಇದಾಗಿದ್ದು, ಈ ರೀತಿಯ ಟೂರ್ನಿ…