ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಎಸ್ ಐಟಿ ವಶದಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ 30 ಪ್ರಶ್ನೆಗಳನ್ನು ಕೇಳಲಾಗಿದೆ.
ಶನಿವಾರ ಸಂಜೆ 5 ಗಂಟೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬೆಂಗಳೂರು ಮನೆಯಿಂದ ವಶಕ್ಕೆ ಪಡೆದಿದ್ದ ಎಚ್.ಡಿ. ರೇವಣ್ಣ ಅವರನ್ನು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರಪಡಿಸಲಾಗುವುದು.
ರಾತ್ರಿ ಪೂರ್ತಿ ಎಸ್ ಐಟಿ ಕಚೇರಿಯಲ್ಲೇ ಕಳೆದ ಎಚ್.ಡಿ.ರೇವಣ್ಣ ಯಾವುದೇ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿಲ್ಲ. ಪ್ರಕರಣದ ಕುರಿತು ಎಸ್ ಐಟಿ 30 ಪ್ರಶ್ನೆಗಳನ್ನು ಸಿದ್ದಪಡಿಸಿದ್ದು, ಅವುಗಳಿಗೆ ಗೊತ್ತಿಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದೇ ಉತ್ತರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ರೇವಣ್ಣ ಅವರನ್ನು ಕಸ್ಟಡಿಗೆ ನೀಡಿದರೆ ಸಂತ್ರಸ್ತೆಗೂ ನಿಮಗೂ ಏನು ಸಂಬಂಧ? ಸಂತ್ರಸ್ತೆ ಎಷ್ಟು ಸಮಯದಿಂದ ನಿಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ? ಸತೀಶ್ ಬಾಬಣ್ಣ ನಿಮಗೆ ಗೊತ್ತಾ? ಸತೀಶ್ ಬಾಬಣ್ಣ ನಿಮ್ಮ ಜೊತೆ ಯಾವ ರೀತಿ ಸಂಬಂಧ ಹೇಗಿದೆ? ಸೇರಿದಂತೆ ಸುಮಾರು 30 ಪ್ರಶ್ನೆಗಳಿಗೆ ಎಸ್ ಐಟಿ ಪ್ರಶ್ನೆ ಕೇಳಲಿದೆ ಎಂದು ಮೂಲಗಳು ತಿಳಿಸಿವೆ.