Wednesday, May 20, 2026
Google search engine
Homeದೇಶಹರಿದ್ವಾರ ಮಾನಸ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ 7 ಮಂದಿ ದುರ್ಮರಣ, 55 ಮಂದಿಗೆ ಗಾಯ

ಹರಿದ್ವಾರ ಮಾನಸ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ 7 ಮಂದಿ ದುರ್ಮರಣ, 55 ಮಂದಿಗೆ ಗಾಯ

ಉತ್ತರಾಖಂಡದ ಹರಿದ್ವಾರ ಮಾನಸ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, 55ಕ್ಕೂ ಹೆಚ್ಚ ಮಂದಿ ಗಾಯಗೊಂಡಿದ್ದಾರೆ.

ದೇವಸ್ಥಾನಕ್ಕೆ ತೆರಳುವ ಪ್ರಮುಖ ಮಾರ್ಗದ ಮೆಟ್ಟಿಲಗಳ ಬಳಿ ಈ ದುರಂತ ಸಂಭವಿಸಿದ್ದು, ವಿದ್ಯುತ್‌ ತಂತಿ ತಗುಲಿ ಕರೆಂಟ್‌ ಹೊಡೆಯಬಹುದು ಎಂಬ ವದಂತಿ ಈ ದುರಂತಕ್ಕೆ ಕಾರಣ ಆಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಕಾಲ್ತುಳಿತಕ್ಕೂ ಮುನ್ನ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು. ಕಾಲ್ತುಳಿತದ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಾಯಗೊಂಡಿರುವ 55ಕ್ಕೂ ಅಧಿಕ ಮಂದಿಯನ್ನು ಸಮೀಪದ ಆಸ್ಪತ್ರೆಗಈಗೆ ದಾಖಲಿಸಲಾಗಿದೆ.

ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, 35 ಮಂದಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, 6 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ಪ್ರಮೇಂದ್ರ ಸಿಂಗ್‌ ದಯಾಳ್‌ ತಿಳಿಸಿದ್ದಾರೆ.

ಶ್ರಾವಣ ಮಾಸದ ಮೊದಲ ದಿನ ಶಿವನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಿನ್ನೆಲೆಯಲ್ಲಿ ಕನ್ವಾರಿಸ್‌ ಭಕ್ತರು ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ದುರಂತ ಸಂಭವಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments