Saturday, November 23, 2024
Google search engine
HomeಅಪರಾಧBengaluru: ಮೊಬೈಲ್ ರಿಪೇರಿ ಮಾಡಿಸಿಕೊಡ ಕೇಳಿದ ಮಗನನ್ನೇ ಕೊಂದ ತಂದೆ!

Bengaluru: ಮೊಬೈಲ್ ರಿಪೇರಿ ಮಾಡಿಸಿಕೊಡ ಕೇಳಿದ ಮಗನನ್ನೇ ಕೊಂದ ತಂದೆ!

ಮೊಬೈಲ್ ರಿಪೇರಿ ಮಾಡಿಸಿಕೊಂಡು ಎಂದು ಕೇಳಿದ್ದಕ್ಕೆ ಹೆತ್ತ ಮಗನನ್ನೇ ತಂದೆ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಂದೆ ರವಿ ಕುಮಾರ್ ೧೪ ವರ್ಷದ ಮಗ ತೇಜಸ್ ನನ್ನು ಕೊಂದಿದ್ದಾರೆ.

ಸರಿಯಾಗಿ ಕೆಲಸ ಮಾಡುತ್ತಿಲ್ಲ ಮೊಬೈಲ್ ರಿಪೇರಿ ಮಾಡಿಸಿಕೊಂಡು ಎಂದು ತೇಜಸ್ ತಂದೆಯ ಬಳಿ ಕೇಳಿದ್ದಾನೆ. ಈ ವಿಷಯದ ಮೇಲೆ ತಂದೆ ಮತ್ತು ಮಗನ ನಡುವೆ ಜಗಳ ನಡೆದಿದ್ದು ಮಗನನ್ನೇ ತಂದೆ ಹೊಡೆದು ಕೊಂದಿದ್ದಾನೆ.

ಕುಮಾರಸ್ವಾಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.  ರವಿಕುಮಾರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments