Saturday, November 23, 2024
Google search engine
HomeUncategorizedBengaluru: ‘ಲಾಂಗ್‌ ಡ್ರೈವ್‌’ಗೆ ವೈಟ್ ಬೋರ್ಡ್ ವಾಹನ ನೀಡಿ ವಂಚನೆ: 7 ವಾಹನಗಳ ವಶ

Bengaluru: ‘ಲಾಂಗ್‌ ಡ್ರೈವ್‌’ಗೆ ವೈಟ್ ಬೋರ್ಡ್ ವಾಹನ ನೀಡಿ ವಂಚನೆ: 7 ವಾಹನಗಳ ವಶ

ವೈಟ್ ಬೋರ್ಡ್ [ಸಾರಿಗೇತರ] ವಾಹನಗಳನ್ನು ಯೆಲ್ಲೋ ಬೋರ್ಡ್ [ಸಾರಿಗೆ] ವಾಹನಗಳನ್ನು ನೀಡಿ ಪ್ರಯಾಣಿಕರಿಗೆ ವಂಚಿಸುತ್ತಿದ್ದ ಲಾಂಗ್ ಡ್ರೈವ್ ಸಂಸ್ಥೆಯ ೭ ವಾಹನಗಳನ್ನು ಸಾರಿಗೆ ಇಲಾಖೆ ವಶಪಡಿಸಿಕೊಂಡಿದೆ.

ಸಾರಿಗೆ ಇಲಾಖೆಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಆರ್‌ಟಿಓ ಶ್ರೀನಿವಾಸ ಪ್ರಸಾದ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ‘ಲಾಂಗ್ ಡ್ರೈವ್’ ಎಂಬ ಅನಧಿಕೃತ ಅಗ್ರಿಗೇಟ‌ರ್ ಸಂಸ್ಥೆಯ ಅಡಿಯಲ್ಲಿ ಆಚರಣೆ ಮಾಡುತ್ತಿದ್ದ 7 ವಾಹನಗಳನ್ನು ವಶಪಡಿಸಿಕೊಂಡಿದೆ.

ವಾಹನ ಮಾಲೀಕರು ತಮ್ಮ ಸಾರಿಗೇತರ (ವೈಟ್ ಬೋರ್ಡ್) ವಾಹನಗಳನ್ನು ಅನಧಿಕೃತ ಆಪ್ ಅಡಿಯಲ್ಲಿ ವಾಣಿಜ್ಯ ಬಳಕೆಗೆ (ಯೆಲ್ಲೋ ಬೋರ್ಡ್) ನೀಡುವುದು ಕಾನೂನಿಗೆ ವಿರುದ್ದವಾಗಿದೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ವ್ಯಾಪಕವಾದ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

ವಾಹನ ಮಾಲೀಕರು ತಮ್ಮ ಸಾರಿಗೇತರ (ವೈಟ್ ಬೋರ್ಡ್) ವಾಹನಗಳನ್ನು ಅನಧಿಕೃತ ಆಪ್ ಅಡಿಯಲ್ಲಿ ವಾಣಿಜ್ಯ ಬಳಕೆಗೆ (ಯೆಲ್ಲೋ ಬೋರ್ಡ್) ನೀಡಬಾರದೆಂದು ಈ ಮೂಲಕ ಎಚ್ಚರಿಕೆ ನೀಡುತ್ತಾ, ತಪಾಸಣಾ ಸಮಯದಲ್ಲಿ ಇಂತಹ ವಾಹನಗಳು ಕಂಡುಬಂದಲ್ಲಿ, ಅಂತಹ ವಾಹನಗಳನ್ನು ವಶಪಡಿಸಿಕೊಂಡು, ಮೋಟಾರು ವಾಹನ ಕಾಯ್ದೆ 1988 ರ ಕಲಂ 53 (1) (b) (ii) ಪ್ರಕಾರ ವಾಹನಗಳ ನೋಂದಣಿ ಪ್ರಮಾಣ ಪತ್ರವನ್ನು 3-4 ತಿಂಗಳ ಕಾಲಾವಧಿಗೆ ಅಮಾನತು ಪಡಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಆಯುಕ್ತರಾದ ಎಎಂ ಯೋಗೀಶ್‌ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments