ದೇಶದ ಮೊದಲ ಪೂರ್ಣ ಪ್ರಮಾಣದ ಯುಪಿಐ (UPI) ಬ್ಯಾಂಕ್ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಇಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿದ್ದು, ನಿಮ್ಮ ನೆರವಿಗೆ ಅಥವಾ ಕೆಲಸ ಮಾಡಲು ಯಾವುದೇ ಉದ್ಯೋಗಿಗಳು ಇಲ್ಲ!
ಹೌದು, ಫಿನ್‌ಟೆಕ್ ಕಂಪನಿಯಾದ ಸ್ಲೈಸ್ ಬೆಂಗಳೂರಿನ ಕೋರಮಂಗಲದಲ್ಲಿ ಯುಪಿಐ ಬ್ಯಾಂಕನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಇಲ್ಲಿ ನೀವು ಯಾವುದೇ ಕಾಗದ ಪತ್ರಗಳು ಅಥವಾ ಕಾರ್ಡ್‌ಗಳ ಅಗತ್ಯವಿಲ್ಲದೇ ಸಂಪೂರ್ಣವಾಗಿ ಡಿಜಿಟಲ್ ಬ್ಯಾಂಕಿಂಗ್ ಬಳಸಬಹುದು.
ಖಾತೆ ತೆರೆಯುವಿಕೆಯಿಂದ ಹಿಡಿದು ನಗದು ಠೇವಣಿ, ಹಿಂಪಡೆಯುವಿಕೆ ಮತ್ತು ಇತರ ಸೇವೆಗಳವರೆಗೆ ಎಲ್ಲವನ್ನೂ ಯುಪಿಐ ಮೂಲಕವೇ ಮಾಡಬಹುದಾಗಿದೆ. ಯುಪಿಐ ಸಂಯೋಜಿತ ATMಗಳು ಮತ್ತು ಕಿಯೋಸ್ಕ್‌ಗಳ ಸಹಾಯದಿಂದ ಕಾರ್ಡ್ ಗಳಿಲ್ಲದೇ ವಹಿವಾಟುಗಳನ್ನು ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಮಾನವರ ಹಸ್ತಕ್ಷೇಪ ಅಥವಾ ಸಹಾಯವಿಲ್ಲದೇ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುವ ಪ್ರಯೋಗ ಮಾಡಲಾಗಿದ್ದು, ಬ್ಯಾಂಕ್‌ಗೆ ಬರುವ ಗ್ರಾಹಕರಿಗೆ ರೋಬೋಟಿಕ್ ಸಹಾಯ ಮಾಡಲಿದೆ.
UPI ನಲ್ಲಿ QR ಕೋಡ್ ಸಹಾಯದಿಂದ ಸೇವೆಗಳನ್ನು ಪಡೆಯಬಹುದು. ಹುಮನಾಯ್ಡ್ ರೋಬೋಟ್ ಸಹಾಯದಿಂದ ಬಳಕೆದಾರರಿಗೆ UPI ಬ್ಯಾಂಕಿಂಗ್ ಪ್ರಕ್ರಿಯೆಯನ್ನು ನಾವು ವಿವರಿಸುತ್ತೇವೆ ಎಂದು ಸ್ಲೈಸ್ ಹೇಳಿಕೊಂಡಿದೆ.
ಬಡ್ಡಿ ಇಲ್ಲದೇ ಮೂರು ಕಂತುಗಳಲ್ಲಿ ಸಾಲ ಮರುಪಾವತಿಸ್ಲೈಸ್ UPI ಲಿಂಕ್ಡ್ ಕ್ರೆಡಿಟ್ ಕಾರ್ಡ್ ಕೂಡಾ ಬಿಡುಗಡೆ ಮಾಡಿದ್ದು, ಇದಕ್ಕೆ ಯಾವುದೇ ವಾರ್ಷಿಕ ಅಥವಾ ಸೇರ್ಪಡೆ ಶುಲ್ಕ ಇಲ್ಲದೇ ಪಡೆಯಬಹುದಾಗಿದೆ.
ಕಾರ್ಡ್ ಪ್ರತಿ ವಹಿವಾಟಿನ ಮೇಲೆ ಸುಮಾರು 3 ಪ್ರತಿಶತ ಕ್ಯಾಶ್ ಬ್ಯಾಕ್ ಕೂಡಾ ನೀಡುತ್ತಿದೆ. ಯಾವುದೇ ಬಡ್ಡಿಯಿಲ್ಲದೆ ಮೂರು ಕಂತುಗಳಲ್ಲಿ ಸಾಲವನ್ನು ಪಾವತಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.


