ಮಂಗಳೂರಿನ ಜನದಟ್ಟಣೆಯ ರಸ್ತೆ ಮಧ್ಯದಲ್ಲೇ ಚೇರ್ ಗಳನ್ನು ಹಾಕಿ ಇಫ್ತಾರ್ ಕೂಟ ಹಮ್ಮಿಕೊಂಡ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಚುನಾವಣಾ ಆಯೋಗ ಸಂಘಟಕರಿಗೆ ನೋಟಿಸ್ ಜಾರಿ ಮಾಡಿದೆ.
ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಮ್ ಸಮುದಾಯ ಪ್ರತಿ ದಿನ ಇಫ್ತಾರ್ ಕೂಟವನ್ನು ಸಂಜೆ ಹೊತ್ತಿನಲ್ಲಿ ಆಚರಿಸುತ್ತಿದ್ದು, ಇಫ್ತಾರ್ ಕೂಟದಲ್ಲಿ ಆಹಾರ ಉಚಿತವಾಗಿ ಹಂಚಲಾಗುತ್ತದೆ. ನಂತರ ಉಪವಾಸನ್ನು ಅಂತ್ಯಗೊಳಿಸಲಾಗುತ್ತದೆ.
ಮುಡಿಪು ಜಂಕ್ಷನ್ ಬಳಿ ರಸ್ತೆ ಮಧ್ಯದಲ್ಲಿ ನೂರಾರು ಚೇರ್ ಗಳನ್ನು ಹಾಕಿ ಇಫ್ತಾರ್ ಕೂಟ ಹಮ್ಮಿಕೊಂಡಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿವರವನ್ನು ಕೇಳಿ ಸಂಘಟಕರಿಗೆ ನೋಟಿಸ್ ಜಾರಿ ಮಾಡಿದೆ.