Saturday, November 23, 2024
Google search engine
HomeಅಪರಾಧCHEATING: 200 ಮಂದಿಗೆ ವಂಚಿಸಿದ 19 ವರ್ಷದ ಬಾಲಕ!

CHEATING: 200 ಮಂದಿಗೆ ವಂಚಿಸಿದ 19 ವರ್ಷದ ಬಾಲಕ!

ನಕಲಿ ಬಂಡವಾಳ ಹೂಡಿಕೆ ಯೋಜನೆ ಮೂಲಕ  ರಾಜಸ್ಥಾನದ ಅ್ಜಮೀರ್ ಮೂಲದ 11ನೇ ತರಗತಿ ವಿದ್ಯಾರ್ಥಿ 200 ಮಂದಿಗೆ ವಂಚಿಸಿ ಸಿಕ್ಕಿಬಿದ್ದಿದ್ದಾನೆ.

ಯೂಟ್ಯೂಬ್ ಇನ್ಫೂಯೆನ್ಸರ್ ಆಗಿರುವ 19 ವರ್ಷದ ಬಾಲಕ ಕಾಸಿಫ್ ಮಿಶ್ರಾ ಆನ್ ಲೈನ್ ಮೂಲಕ ಬಂಡವಾಳ ಹೂಡಿಕೆ ಮೂಲಕ 200 ಮಂದಿಗೆ ವಂಚಿಸಿ ಸುಮಾರು 42 ಲಕ್ಷ ರೂ. ವಸೂಲಿ ಮಾಡಿದ್ದಾನೆ.

ಇನ್ ಸ್ಟಾಗ್ರಾಂನಲ್ಲಿ ಭಾರೀ ಪ್ರಮಾಣದಲ್ಲಿ ಫಾಲೋಫರ್ಸ್ ಹೊಂದಿರುವ ಕಾಸಿಫ್ ಮಿಶ್ರಾ ತನ್ನ ಚಾನೆಲ್ ಮೂಲಕ ಬಂಡವಾಳ ಹೂಡಿಕೆಗೆ ಆಮೀಷವೊಡ್ಡಿದ್ದಾನೆ.

ಆರಂಭದಲ್ಲಿ ಸಣ್ಣ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದರವರಿಗೆ ಹೆಚ್ಚು ಹಣ ನೀಡಿ ನಿಮ್ಮ ಸ್ನೇಹಿತರು ಮತ್ತು ಪರಿಚಿತರಿಗೆ ಹೇಳಿ ಎಂದು ಕೇಳಿಕೊಂಡಿದ್ದಾನೆ. ನಂತರ 99,999 ರೂ. ಬಂಡವಾಳ ಹೂಡಿದರೆ 13 ತಿಂಗಳಲ್ಲಿ 13,99,999 ರೂ. ಗಳಿಸುತ್ತೀರಿ ಎಂದು ಬಾಲಕನ ಆಮೀಷದ ಬಲೆಗೆ ಸುಮಾರು 200 ಮಂದಿ ಬಿದ್ದಿದ್ದಾರೆ.

ದಾಳಿ ಮಾಡಿದ ಪೊಲೀಸರು ಬಾಲಕನ ಮನೆಯಲ್ಲಿ ಹಣ ಎಣಿಸುವ ಯಂತ್ರ, ಕಾರು, ಲ್ಯಾಪ್ ಟಾಪ್, ಮೊಬೈಲ್ ಮುಂತಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಬಾಲಕನನ್ನು ಎರಡು ದಿನಗಳ ಕಾಲ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments