Sunday, December 7, 2025
Google search engine
Homeರಾಜ್ಯಪರಿಸರಕ್ಕೆ ಹಾನಿ ಕಾರಣಕ್ಕೆ ಬಳ್ಳಾರಿಯ 36 ಜೀನ್ಸ್ ಘಟಕಗಳಿಗೆ ಬೀಗ!

ಪರಿಸರಕ್ಕೆ ಹಾನಿ ಕಾರಣಕ್ಕೆ ಬಳ್ಳಾರಿಯ 36 ಜೀನ್ಸ್ ಘಟಕಗಳಿಗೆ ಬೀಗ!

ಜೀನ್ಸ್ ವಾಷಿಂಗ್ ಘಟಕಗಳಿಂದ ಪರಿಸರಕ್ಕೆ ಹಾನಿ ಆಗುತ್ತದೆ ಎಂಬ ವರದಿ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಮೇರೆಗೆ ಬಳ್ಳಾರಿಯ 36 ಘಟಕಗಳಿಗೆ ಬೀಗ ಜಡಿಯಲಾಗಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಮರ್ಮಾಘಾತ ಆಗಿದೆ.

ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಳ್ಳಾರಿ ಜೀನ್ಸ್ ಉದ್ಯಮ ನಂಬಿ 2 ಲಕ್ಷಕ್ಕೂ ಅಧಿಕ ಜನ ಕೆಲಸ ಮಾಡುತ್ತಿದ್ದಾರೆ. ಇದೀಗ ಘಟಕಗಳು ಮುಚ್ಚಿದ್ದರಿಂದ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜೀನ್ಸ್ ಘಟಕದಿಂದ ನೀರು ಶುದ್ದೀಕರಿಸದೇ ರಾಸಾಯನಿಕ ಮಿಶ್ರಿತ ನೀರನ್ನು ಯಥಾವತ್ತಾಗಿ ಹರಿ ಬಿಡಲಾಗುತ್ತಿತ್ತು. ಈ ಕುರಿತು ಹಲವು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿ ಎಚ್ಚರಿಸಿತ್ತು.

ರಾಸಾಯನಿಕ ನೀರು ಸಂಸ್ಕರಿಸದೇ ಬಿಡುವ ಕಾರಣ 36 ಘಟಕಗಳಿಗೆ ನೋಟಿಸ್‌ ನೀಡಿ ಜೆಸ್ಕಾಂನಿಂದಲೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬಾಗಿಲು ಹಾಕಲಾಗಿದೆ. ಜೀನ್ಸ್ ಉದ್ಯಮಿಗಳು ಮೌನಕ್ಕೆ ಶರಣವಾಗಿದ್ದು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments