Sunday, December 7, 2025
Google search engine
Homeವಾಣಿಜ್ಯಕನ್ನಡ ಸೇರಿ 9 ಪ್ರಾದೇಶಿಕ ಭಾಷೆಗಳಲ್ಲಿ ಸ್ಪ್ಯಾಮ್ ಅಲರ್ಟ್ ಡಿಸ್ ಪ್ಲೇ ಪರಿಚಯ

ಕನ್ನಡ ಸೇರಿ 9 ಪ್ರಾದೇಶಿಕ ಭಾಷೆಗಳಲ್ಲಿ ಸ್ಪ್ಯಾಮ್ ಅಲರ್ಟ್ ಡಿಸ್ ಪ್ಲೇ ಪರಿಚಯ

ಬೆಂಗಳೂರು: ಸುಮಾರು 27.5 ಬಿಲಿಯನ್ ಕರೆಗಳನ್ನು ಸ್ಪ್ಯಾಮ್ ಎಂದು ಫ್ಲಾಗ್ ಮಾಡಿದ ತನ್ನ ಎಐ-ಚಾಲಿತ ಸ್ಪ್ಯಾಮ್ ಪತ್ತೆಹಚ್ಚುವಿಕೆ ಸಾಧನವನ್ನು ಆರಂಭಿಸಿದ ಬೆನ್ನಲೇ, ಏರ್‌ಟೆಲ್ ಇಂದು ಸ್ಪ್ಯಾಮರ್ ಗಳಿಗೆ ಮೂಗುದಾರ ಕಟ್ಟಲು ಎರಡು ಗಮನಾರ್ಹ ಸುಧಾರಣೆಗಳನ್ನು ಪರಿಚಯಿಸಿದೆ.

ಗ್ರಾಹಕರು ಈಗ ಕರೆಗಳು ಮತ್ತು ಎಸ್ಎಂಎಸ್ ಸಂದೇಶಗಳಿಗೆ ಸ್ಪ್ಯಾಮ್ ಎಚ್ಚರಿಕೆಗಳನ್ನು ತಮ್ಮ ಆದ್ಯತೆಯ ಭಾರತೀಯ ಭಾಷೆಗಳಲ್ಲಿ ಸ್ವೀಕರಿಸುತ್ತಾರೆ. ಈ ಹೊಸ ವೈಶಿಷ್ಟ್ಯತೆಯು ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದ್ದು, ಭವಿಷ್ಯದಲ್ಲಿ ಇನ್ನೂ ಅನೇಕ ಭಾಷೆಗಳಲ್ಲಿ ಬರುವ ಯೋಜನೆಗಳನ್ನು ಸಹ ಹೊಂದಿದೆ. ಏರ್‌ಟೆಲ್ ನ ಎಐ-ಚಾಲಿತ ಸಾಧನವು ಗ್ರಾಹಕರು ಸ್ವೀಕರಿಸುವ ಅಂತರರಾಷ್ಟ್ರೀಯ ನೆಟ್ವರ್ಕ್ ಗಳಿಂದ ಬರುವ ಎಲ್ಲಾ ಸ್ಪ್ಯಾಮ್ ಕರೆಗಳು ಮತ್ತು ಎಸ್ಎಂಎಸ್ ಗಳಿಗೆ ಸ್ಕ್ರೀನ್ ಮೇಲೆ ಎಚ್ಚರಿಕೆಯನ್ನು ತೋರಿಸುತ್ತದೆ.

ಒಮ್ಮೆ ಏರ್‌ಟೆಲ್ ದೇಶೀ ಸ್ಪ್ಯಾಮ್ ಕರೆಗಳ ವಿರುದ್ಧ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದಾಗ ವಂಚಕರು ಮತ್ತು ಸ್ಪ್ಯಾಮರ್ ಗಳು ಭಾರತದಲ್ಲಿ ಕರೆ ಮಾಡಲು ವಿದೇಶಿ ನೆಟ್ವರ್ಕ್ ಗಳನ್ನು ಬಳಸಲು ಆರಂಭಿಸಿದರು. ಈ ಎಚ್ಚರಿಕೆಯ ಪ್ರವೃತ್ತಿಯು ಕಳೆದ ಆರು ತಿಂಗಳುಗಳಲ್ಲಿ ಸಾಗರೋತ್ತರ ಸ್ಪ್ಯಾಮ್ ಕರೆಗಳ ಪ್ರಮಾಣದಲ್ಲಿ ಶೇಖಡಾ 12% ಏರಿಕೆಯನ್ನು ಹೆಚ್ಚಿಸಿತು. ಈ ಹೊಸ ವೈಶಿಷ್ಟ್ಯದೊಂದಿಗೆ ಏರ್‌ಟೆಲ್ ಈ ಬೆಳೆಯುತ್ತಿರುವ ಸವಾಲನ್ನು ಮೀರುವುದನ್ನು ನಿರೀಕ್ಷಿಸುತ್ತಿದೆ.

ಈ ಉಪಕ್ರಮದ ಬಗ್ಗೆ ಮಾತಾಡಿದ ಭಾರತಿ ಏರ್‌ಟೆಲ್ ನ ಮಾರ್ಕೆಟಿಂಗ್ ನಿರ್ದೇಶಕರು ಮತ್ತು ಕನೆಕ್ಟೆಡ್ ಹೋಮ್ಸ್ ಸಿಇಒ ಆದ, ಸಿದ್ಧಾರ್ಥ್ ಶರ್ಮಾ ಅವರು, “ನಾವು ಮಾಡುವ ಪ್ರತಿಯೊಂದು ಕೆಲಸದ ಮುಖ್ಯ ಕಾರಣ ನಮ್ಮ ಗ್ರಾಹಕರು ಮತ್ತು ಅವರ ಅನಿಸಿಕೆಗಳು. ಗ್ರಾಹಕರ ಪ್ರತಿಕ್ರಿಯೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ನಂತರ, ನಾವು ಭಾರತದ ಭಾಷಾ ವೈವಿಧ್ಯತೆಗೆ ಉತ್ತಮ ಸೇವೆಗಳನ್ನು ಒದಗಿಸಲು ನಮ್ಮ ಪರಿಹಾರ ಕ್ರಮಗಳನ್ನು ಹೆಚ್ಚಿಸಿದ್ದೇವೆ.

ಸ್ಪ್ಯಾಮರ್ ಗಳು ವಿದೇಶಿ ನೆಟ್ವರ್ಕ್ ಗಳನ್ನು ಬಳಸುತ್ತಿರುವ ಪ್ರಮಾಣವು ಹೆಚ್ಚುತ್ತಿರುವುದರಿಂದ, ನಾವು ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬರುವ ಎಲ್ಲಾ ದೂರವಾಣಿ ಕರೆಗಳು ಮತ್ತು ಎಸ್ಎಂಎಸ್ ಸಂದೇಶಗಳನ್ನು ಸ್ಕ್ಯಾನ್ ಮಾಡಲು ನಮ್ಮ ಎಐ-ಚಾಲಿತ ಸಾಧನವನ್ನು ಮತ್ತಷ್ಟು ವಿಸ್ತರಣೆ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಸಮರ್ಪಿತ ಇಂಜಿನಿಯರುಗಳ ತಂಡ ಮತ್ತು ಡೇಟಾ ವಿಜ್ಞಾನಿಗಳ ತಂಡವು ನಮ್ಮ ಈ ಕೊಡುಗೆಗಳನ್ನು ಮತ್ತಷ್ಟು ಸುಧಾರಿತ ಹಾಗೂ ಸಂಸ್ಕರಿಸುವುದನ್ನು ಮುಂದುವರಿಸುತ್ತಾ, ಗ್ರಾಹಕರು ಯಾವುದೇ ಮತ್ತು ಎಲ್ಲಾ ಬೆದರಿಕೆಗಳ ಬಲೆಗೆ ಬೀಳದಂತೆ ಖಚಿತಪಡಿಸಿಕೊಳ್ಳುತ್ತಾರೆ ಎಂದರು.

ಈ ನವೀನ ಎಐ-ಚಾಲಿತ ಸ್ಪ್ಯಾಮ್ ಪರಿಹಾರವು ಈಗ ದೇಶೀ ಮತ್ತು ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬರುವ ಕರೆಗಳು ಮತ್ತು ಸಂದೇಶಗಳ ಬಗ್ಗೆ ಬಳಕೆದಾರರಿಗೆ ಹಿಂದಿ, ಮರಾಠಿ, ಬಂಗಾಳಿ, ಗುಜರಾತಿ, ತಮಿಳು, ಕನ್ನಡ, ಮಲಯಾಳಂ, ತೆಲುಗು, ಪಂಜಾಬಿ ಮತ್ತು ಉರ್ದು ಸೇರಿದಂತೆ ಹತ್ತು ಭಾರತೀಯ ಭಾಷೆಗಳಲ್ಲಿ ಸೂಚನೆಯನ್ನು ನೀಡುತ್ತದೆ.

ಸದ್ಯ ಆಂಡ್ರಾಯ್ಡ್ ಸಾಧನಗಳನ್ನು ಬಳಸುವ ಗ್ರಾಹಕರಿಗೆ ಮಾತ್ರ ಸ್ಪ್ಯಾಮ್ ಎಚ್ಚರಿಕೆ ಅಧಿಸೂಚನೆಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರಲಿದೆ. ಈ ಎಲ್ಲಾ ವೈಶಿಷ್ಟ್ಯತೆಗಳು ಗ್ರಾಹಕರಿಗೆ ಈ ಮೊದಲಿನ ರೀತಿಯಾಗಿಯೇ ಉಚಿತವಾಗಿರುತ್ತವೆ ಮತ್ತು ಗ್ರಾಹಕರು ಈ ಸೇವೆಗಳನ್ನು ಪಡೆಯಲು ಯಾವುದೇ ಸೇವಾ ವಿನಂತಿಯನ್ನು ಕಳುಹಿಸುವ ಅಗತ್ಯವಿರುವುದಿಲ್ಲ. ಇದು ಎಲ್ಲಾ ಏರ್‌ಟೆಲ್ ಬಳಕೆದಾರರಿಗೆ ಸ್ವಯಂ-ಸಕ್ರಿಯಗೊಳ್ಳುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments