Saturday, November 23, 2024
Google search engine
Homeಜಿಲ್ಲಾ ಸುದ್ದಿದೇವೇಗೌಡರ ಕುಟುಂಬದ ಸ್ವಾರ್ಥ ರಾಜಕಾರಣ ಅಂತ್ಯ ಹಾಡಿದ ಮತದಾರ: ಸಿಪಿ ಯೋಗೇಶ್ವರ್

ದೇವೇಗೌಡರ ಕುಟುಂಬದ ಸ್ವಾರ್ಥ ರಾಜಕಾರಣ ಅಂತ್ಯ ಹಾಡಿದ ಮತದಾರ: ಸಿಪಿ ಯೋಗೇಶ್ವರ್

ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸ್ವಾರ್ಥ ರಾಜಕಾರಣವನ್ನು ಮತದಾರರು ಅಂತ್ಯಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ 26,929 ಮತಗಳ ಮುನ್ನಡೆ ಪಡೆಯುವ ಮೂಲಕ ಸ್ಪಷ್ಟ ಗೆಲುವಿನ ಸೂಚನೆ ದೊರೆತ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿ ಯೋಗೇಶ್ವರ್, 30 ಸಾವಿರ ಮತಗಳ ಅಂತರದಿಂದ ಗೆಲ್ಲುವ ನನ್ನ ಭರವಸೆ ನಿಜವಾಗಿದೆ ಎಂದರು.

ದೇವೇಗೌಡರು ವಾರಗಳ ಕಾಲ ಚನ್ನಪಟ್ಟಣದಲ್ಲಿ ಹಳ್ಳಿ ಹಳ್ಳಿ ತಿರುಗಿ ಪ್ರಚಾರ ಮಾಡಿದರು. ಅವರ ಉದ್ವೇಗ ಹಾಗೂ ಆವೇಷ ಭರಿತ ಭಾಷಣ ನೋಡಿದಾಗ ಸೋಲಬಹುದು ಎಂದು ಭಾವಿಸಿದ್ದೆ. ಆದರೆ ಜನರು ದೇವೇಗೌಡರಿಗೆ ಇಳಿ ವಯಸ್ಸಿನಲ್ಲಿ ಸೋಲಿನ ರುಚಿ ತೋರಿಸಿದ್ದಾರೆ ಎಂದು ಅವರು ಹೇಳಿದರು.

ದೇವೇಗೌಡರಿಗೆ ಪ್ರಕೃತಿ ಸಹಜ ವಯಸ್ಸಾಗಿದೆ. ಈ ವಯಸ್ಸಿನಲ್ಲೂ ಮೊಮ್ಮಗನನ್ನು ಪಣಕ್ಕಿಟ್ಟರು. ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಲು ಕ್ಷೇತ್ರಬಿಟ್ಟುಕೊಟ್ಟರು. ಆದ್ದರಿಂದ ಜನರು ದೇವೇಗೌಡರ ಕುಟುಂಬದ ಸ್ವಾರ್ಥ ಹಾಗೂ ದುರಾಸೆ ರಾಜಕಾರಣಕ್ಕೆ ತಕ್ಕ ಬುದ್ದಿ ಕಲಿಸಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.

ಸಿಎಂ, ಡಿಸಿಎಂ ಅವರನ್ನು ಭೇಟಿ ಮಾಡಿ ೩೦ ಸಾವಿರ ಮತಗಳಿಂದ ಗೆಲ್ಲುತ್ತೇನೆ ಎಂದು ಹೇಳಿದ್ದೆ. ೨-೩ ಸಾವಿರ ಮತಗಳು ವ್ಯತ್ಯಾಸ ಆಗಬಹುದು. ಆದರೆ ನನ್ನ ಗೆಲುವು ಖಚಿತವಾಗಿದೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಮಂತ್ರ ಗೆಲುವಿಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಡಿಸಿಎಂ ಅವರ ನೇತೃತ್ವಕ್ಕೆ ಒಕ್ಕಲಿಗರು ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಒಕ್ಕಲಿಗರು ದೇವೇಗೌಡರ ಆಸ್ತಿ ಆಗಿದ್ದು ಈಗ ಕಾಂಗ್ರೆಸ್ ಕಡೆ ತಿರುಗಿದೆ. ಇನ್ನೂ ಜೆಡಿಎಸ್ ಅಂತ್ಯ ಸಮೀಪಿಸಿದೆ.  ಅಲ್ಲದೇ ಜೆಡಿಎಸ್-ಬಿಜೆಪಿ ಮೈತ್ರಿಯನ್ನೂ ಜನರು ತಿರಸ್ಕರಿಸಿದ್ದಾರೆ. ಕುಮಾರಸ್ವಾಮಿ ಮಗನನ್ನು ಗೆಲ್ಲಿಸಲು ಹಾಗೂ ಯಡಿಯೂರಪ್ಪ ಮಗ ವಿಜಯೇಂದ್ರನನ್ನು ಸಿಎಂ ಮಾಡಲು ಮಾಡಿಕೊಂಡ ಸ್ವಾರ್ಥ ರಾಜಕಾರಣಕ್ಕೆ ಜನರು ಬುದ್ದಿ ಕಲಿಸಿದ್ದಾರೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments