Sunday, December 7, 2025
Google search engine
Homeಅಪರಾಧಸಲಿಂಗ ಕಾಮಕ್ಕಾಗಿ 5 ತಿಂಗಳ ಹಸುಗೂಸು ಬಲಿ ಕೊಟ್ಟ ಮೂರು ಮಕ್ಕಳ ತಾಯಿ!

ಸಲಿಂಗ ಕಾಮಕ್ಕಾಗಿ 5 ತಿಂಗಳ ಹಸುಗೂಸು ಬಲಿ ಕೊಟ್ಟ ಮೂರು ಮಕ್ಕಳ ತಾಯಿ!

ಸಲಿಂಗ ಕಾಮಕ್ಕೆ ಅಡ್ಡಿ ಎಂಬ ಕಾರಣಕ್ಕೆ ಮೂರು ಮಕ್ಕಳ ತಾಯಿ 5 ತಿಂಗಳ ಹಸುಗೂಸನ್ನೇ ಕೊಂದ ಹೃದಯವಿದ್ರಾವಕ ಘಟನೆ ಕರ್ನಾಟಕದ ಗಡಿ ಭಾಗದಲ್ಲಿರುವ ತಮಿಳುನಾಡಿನ ಕೆಳಮಂಗಲಂನಲ್ಲಿ ನಡೆದಿದೆ.

ಕೆಳಮಂಗಲಂ ಸಮೀಪದ ಚಿನ್ನಟ್ಟಿ ಗ್ರಾಮದ ನಿವಾಸಿ 26 ವರ್ಷದ ಭಾರತಿ ಹೆತ್ತಮಗಳನ್ನೇ ಕೊಂದಿದ್ದು, ಭಾರತಿ ಹಾಗೂ ಸಲಿಂಗ ಕಾಮದ ಸ್ನೇಹಿತೆ ಸುಮಿತ್ರಾ (22) ಅವರನ್ನು ಕೆಳಮಂಗಲಂ ಪೊಲೀಸರು ಬಂಧಿಸಿದ್ದಾರೆ.

ಚಿನ್ನಟ್ಟಿಯ ಸುರೇಶ್ ಮತ್ತು ಭಾರತಿಗೆ ಮದುವೆಯಾಗಿ 5 ವರ್ಷವಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗುವಿದೆ.

ಅದೇ ಏರಿಯಾದ ಯುವತಿ ಸುಮಿತ್ರಾ ಜೊತೆಗೆ ಭಾರತಿ ಸ್ನೇಹ ಬೆಳೆಸಿದ್ದಳು. ಸ್ನೇಹ ಸಲಿಂಗ ಕಾಮಕ್ಕೆ ತಿರುಗಿತ್ತು. ಪತಿ ಇಲ್ಲದೆ ಇದ್ದಾಗ ಇಬ್ಬರೂ ಸೇರಿಕೊಳ್ಳುತ್ತಿದ್ದರು. ನಾಲ್ಕು ವರ್ಷಗಳಿಂದ ಭಾರತಿ- ಸುಮಿತ್ರಾ ಸಲಿಂಗ ಕಾಮಿಗಳಾಗಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ನಗ್ನ ವಿಡಿಯೋ ಕಾಲ್ ಮಾಡಲು ಮತ್ತು ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವುದಕ್ಕೆಂದೇ ಬೇರೆಯದೇ ಮೊಬೈಲ್ ಕೂಡ ಇಟ್ಟುಕೊಂಡಿದ್ದರು. ಸ್ನಾನ ಮಾಡುವಾಗ ನಗ್ನವಾಗಿ ವಿಡಿಯೋ ಕಾಲ್ ಮಾಡುವುದು, ಇಬ್ಬರೂ ಕಿಸ್ ಮಾಡುತ್ತಾ ಪೋಟೋ ಕ್ಲಿಕ್ಲಿಸಿಕೊಳ್ಳುತ್ತಿದ್ದರು. ಭಾರತಿ ತನ್ನ ಎದೆ ಮೇಲೆ ‘sumi’ ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಳು. ಇಬ್ಬರೂ ಪರಸ್ಪರ ಚಾಕುವಿನಿಂದ ಕೈಕೊಯ್ದುಕೊಂಡಿದ್ದರು. ಪೋಟೋಗಳನ್ನು ಹಾಕಿ ರೀಲ್ಸ್ ವಿಡಿಯೋ ಕೂಡ ಮಾಡಿದ್ದರು.

ಐದು ತಿಂಗಳ ಹಿಂದೆಯಷ್ಟೇ ಭಾರತಿ ಗಂಡು ಮಗುವಿಗೆ ಜನ್ಮ‌ ನೀಡಿದ್ದಳು. ಮಗು ನಂತರ ಭಾರತಿ ತನ್ನನ್ನು ದೂರು ಮಾಡುತ್ತಿದ್ದಾಳೆ ಎಂದು ಭಾವಿಸಿದ್ದ ಸುಮಿತ್ರಾ ತಗಾದೆ ತೆಗೆದಿದ್ದಳು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು. ಮಗುವಿನಿಂದಾಗಿ ನಮಗೆ ಸೇರಲು ಆಗುತ್ತಿಲ್ಲ. ಮಗುವಿನ ಕೊಲೆಗೆ ಸುಮಿತ್ರಾ ಪ್ರಚೋದನೆ ನೀಡಿದ್ದಳು.

ಸುಮಿತ್ರಾಗಾಗಿ ಭಾರತಿ 5 ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮಗು ಹಾಲು ಕುಡಿಯುವಾಗ ಗಂಟಲಲ್ಲಿ ಸಿಕ್ಕಿ ನೆತ್ತಿಗೇರಿ ಮೃತಪಟ್ಟಿದೆ ಎಂದು ಕಥೆ ಕಟ್ಟಿದಳು.

ಭಾರತೀ ಮಾತು ನಂಬಿದ ಕುಟುಂಬಸ್ಥರು ಮಗುವಿನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು. ಇತ್ತೀಚೆಗೆ ಭಾರತಿ ಮತ್ತು ಸುಮಿತ್ರಾ ಬಳಸುತ್ತಿದ್ದ ಪ್ರತ್ಯೇಕ ಮೊಬೈಲ್ ಭಾರತೀ ಪತಿ ಸುರೇಶ್ ಕೈಗೆ  ಸಿಕ್ಕಿತ್ತು.

ಇಬ್ಬರ ಸಲಿಂಗ ಕಾಮದ ವಿಷಯ ಮತ್ತು ಮಗುವಿನ ಕೊಲೆ ರಹಸ್ಯ ಬಯಲಾಯಿತು. ಕೂಡಲೇ ಸುರೇಶ್ ಪೋಲಿಸರಿಗೆ ದೂರು ನೀಡುವುದಾಗಿ ತೆರಳುತ್ತಿದ್ದ ವೇಳೆ ಪೋನ್ ಮಾಡಿದ ಭಾರತಿ, ಮಗುವನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಸುರೇಶ್ ಪೊಲೀಸರಿಗೆ ಮೊಬೈಲ್ ನಲ್ಲಿದ್ದ ಸಾಕ್ಷ್ಯಗಳ ಜೊತೆ ದೂರು ನೀಡಿದ್ದು, ಕೆಳಮಂಗಲಂ ಪೊಲೀಸರು ತಹಶೀಲ್ದಾರ್ ಗಂಗೈ ರವರ ಸಮ್ಮುಖದಲ್ಲಿ ಮಗುವಿನ ಶವವನ್ನು ಮತ್ತೆ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅಲ್ಲದೇ ಭಾರತಿ ಮತ್ತು ಸುಮಿತ್ರಾಳನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments