Sunday, December 7, 2025
Google search engine
Homeಅಪರಾಧಬೆಂಗಳೂರಿನಲ್ಲಿ ರೆಡಿಮೇಡ್ ಬಟ್ಟೆಗಳಲ್ಲಿ ಡ್ರಗ್ಸ್ ಮಾರುತ್ತಿದ್ದ ಇಬ್ಬರು ವಿದೇಶೀಯರು ಅರೆಸ್ಟ್

ಬೆಂಗಳೂರಿನಲ್ಲಿ ರೆಡಿಮೇಡ್ ಬಟ್ಟೆಗಳಲ್ಲಿ ಡ್ರಗ್ಸ್ ಮಾರುತ್ತಿದ್ದ ಇಬ್ಬರು ವಿದೇಶೀಯರು ಅರೆಸ್ಟ್

ಬೆಂಗಳೂರು: ರೆಡಿಮೇಡ್ ಬಟ್ಟೆಗಳ ಪ್ಯಾಕ್​ಗಳಲ್ಲಿ ಡ್ರಗ್ಸ್ ಇರಿಸಿ ಮಾರಾಟ ಮಾಡುತ್ತಿದ್ದ ನೈಜೀರಿಯಾ  ಪ್ರಜೆಗಳಿಬ್ಬರನ್ನು ಬೆಂಗಳೂರಿನ ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 4.50 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಲಾಸೊನ್ಯೆ ಪೀಟರ್ ಒಬಿಯೋಮಾ ಹಾಗೂ ಸಂಡೇ ವಿನ್​​ಡಮ್​ ಎಂದು ಗುರುತಿಸಲಾಗಿದೆ. ಇವರು ಮೆಡಿಕಲ್ ವಿಸಾದಲ್ಲಿ ದೆಹಲಿಗೆ ಬಂದಿದ್ದರು.

ದೆಹಲಿಯಿಂದ ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದು ನೆಲೆಸಿದ್ದರು. ಬೇರೆಯವರ ಹೆಸರಲ್ಲಿ ಮನೆ ಬಾಡಿಗೆ ಪಡೆದು ಏರ್ಪೋರ್ಟ್ ಬಳಿ ಸೆಕ್ಯೂರಿಟಿಗಳು ಹಾಕುವಂತೆ ಮನೆ ಬಳಿ ಬಟ್ಟೆ ಹಾಕಿಕೊಂಡು ತಿರುಗಾಡುತಿದ್ದರು. ಅಲ್ಲದೆ, ಡ್ರಗ್ ಪೆಡ್ಲಿಂಗ್ ಮಾಡಬೇಕು ಎಂದು ಬಂದಿದ್ದ ಐನಾತಿಗಳು ನಂತರ ತಮ್ಮ ಅಸಲಿ ವರಸೆ ಶುರುವಿಟ್ಟುಕೊಂಡಿದ್ದರು.

ಮನೆಯಲ್ಲಿಯೇ ಡ್ರಗ್ ಶೇಖರಿಸಿಕೊಟ್ಟು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಡ್ರಗ್ ಮಾರಾಟ ಮಾಡಲು ಹಾಗೂ ಶೇಖರಿಸಿಡಲು ಆರೋಪಿಗಳು ಸಖತ್ ಪ್ಲಾನ್ ಮಾಡಿಕೊಂಡಿದ್ದರು.

ರೆಡಿಮೇಡ್ ಬಟ್ಟೆಗಳು, ಅದರಲ್​ಲೂ ಮಹಿಳೆಯರ ಚೂಡಿದಾರದಂತಹ ಬಟ್ಟೆಗಳಲ್ಲಿ, ಹೊಸ ಶರ್ಟ್ , ಪ್ಯಾಂಟ್​ಗಳ ಪ್ಯಾಕ್ ಮಾಡುವಾಗ ನಡುವೆ ಬಳಸುವ ಕಾರ್ಡ್ ಬೋರ್ಡ್ ಮಧ್ಯೆ ಮಾದಕ ವಸ್ತು ತುಂಬಿ ಇಟ್ಟು ಮಾರಾಟ ಮಾಡುತ್ತಿದ್ದರು.

ಪೊಲೀಸರಿಗೆ ಈ ಆರೋಪಿಗಳ ಕಳ್ಳಾಟದ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಅದರಂತೆ, ಒಬ್ಬರು ಪೊಲೀಸ್ ಸಿಬ್ಬಂದಿ ಆರೋಪಿಗಳ ಬೆನ್ನು ಹತ್ತಿದ್ದರು. ಇದೇ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸುವ ಸಾದ್ಯತೆ ಕಂಡುಬಂದಿದ್ದು, ತಕ್ಷಣವೇ 112 ಗೆ ಕರೆ ಮಾಡಿ ಇಆರ್​​ಸ್​​​ಎಸ್ ವಾಹನವನ್ನು ಕರೆಸಿಕೊಂಡಿದ್ದಾರೆ. ಈ ವೇಳೆ ಎಎಸ್​ಐ ತಮ್ಮ ಬಳಿ ಇದ್ದ ಸರ್ವಿಸ್ ಪಿಸ್ತೂಲ್ ತೋರಿಸಿ ಬೆದರಿಸಿ ಆರೋಪಿಗಳು ತಪ್ಪಿಸಿಕೊಳ್ಳದಂತೆ ಲಾಕ್ ಮಾಡಿದ್ದಾರೆ. ಬಳಿಕ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು ನೈಜೀರಿಯಾದವರ ತಂಡದ ಸಹಿತ ಇತರ ಡ್ರಗ್ ಪೆಡ್ಲರ್​​ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments