Sunday, December 7, 2025
Google search engine
Homeಅಪರಾಧಬೆಂಗಳೂರಿನಲ್ಲಿ ಹೆಂಡತಿ ಕಾಟ ತಾಳಲಾರದೇ 8 ತಿಂಗಳಿಗೆ ಗಂಡ ಆತ್ಮಹತ್ಯೆ

ಬೆಂಗಳೂರಿನಲ್ಲಿ ಹೆಂಡತಿ ಕಾಟ ತಾಳಲಾರದೇ 8 ತಿಂಗಳಿಗೆ ಗಂಡ ಆತ್ಮಹತ್ಯೆ

ಮದುವೆ ಆಗಿ 8 ತಿಂಗಳಲ್ಲೇ ಪತ್ನಿಯ ಕಾಟ ತಾಳಲಾರದೇ ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಗಿರಿನಗರದ ಮನೆಯಲ್ಲಿ ಬ್ಯಾಂಕ್ ಉದ್ಯೋಗಿ ಪತಿ ಗಗನ್ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಂಟು ತಿಂಗಳ ಹಿಂದೆ ಮೇಘನ ಜಾಧವ್‌ ಜೊತೆ ಗಗನ್ ಮದುವೆಯಾಗಿತ್ತು. ಮದುವೆಯಾಗಿ ಎಂಟು ತಿಂಗಳಲ್ಲಿ ಪತ್ನಿ ವಿನಾಕಾರಣ ಜಗಳವಾಡಲು ಶುರು ಮಾಡಿದ್ದಳು ಎಂದು ಆರೋಪಿಸಲಾಗಿದೆ.

ಮದುವೆಯ ನಂತರ ಪತ್ನಿ-ಪತಿಯ ನಡುವೆ ಜಗಳ ಆರಂಭವಾಗಿ ಗಗನ್ ರಾವ್ ಮಾನಸಿಕವಾಗಿ ನೊಂದಿದ್ದ. ಪತ್ನಿಯ ಕಿರುಕುಳವೇ ಆತ್ಮಹತ್ಯೆಗೆ ಕಾರಣವೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ಸಸಂಬಂಧ ಗಗನ್‌ ತಂಗಿ ದೂರು ನೀಡಿದ್ದಾರೆ.

ಹಿಂದಿನ ರಾತ್ರಿ ಮನೆಯಲ್ಲಿ ಪತಿ-ಪತ್ನಿ ಜಗಳ ಮಾಡಿಕೊಂಡಿದ್ದಾರೆ. ಗಗನ್ ರಾವ್ ತೀವ್ರ ನೊಂದುಕೊಂಡು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅಣ್ಣನ ಸಾವಿಗೆ ಪತ್ನಿಯೇ ಕಾರಣ ಎಂದು ತಂಗಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆರೋಪ ತಳ್ಳಿ ಹಾಕಿದ ಮೇಘನಾ!

ಆದರೆ ಪತ್ನಿ ಮೇಘನಾ ಜಾದವ್ ಈ ಆರೋಪಗಳನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಅವರು ನೀಡಿದ ಹೇಳಿಕೆಯಂತೆ, “ಮದುವೆಯಾದ ಎರಡೇ ದಿನಕ್ಕೆ ಗಗನ್‌ಗೆ ಬೇರೆ ಯುವತಿಯೊಂದಿಗೆ ಅನೈತಿಕ ಸಂಬಂಧವಿತ್ತು ಎಂಬ ವಿಚಾರ ಗೊತ್ತಾಗಿತ್ತು. ಆದರೂ ನಾವಿಬ್ಬರೂ ತುಂಬಾ ಚೆನ್ನಾಗಿದ್ದೆವು. ಅವರ ಕುಟುಂಬದಲ್ಲಿ ಅಕ್ಕ ನಮ್ಮ ಮದುವೆಗೇ ಬಂದಿರಲಿಲ್ಲ. ಬಲವಂತವಾಗಿ ಅವರ ಕುಟುಂಬದವರು ನನ್ನ ಜೊತೆ ಮದುವೆ ಮಾಡಿಸಿದ್ದರು ಎಂದು ಹೇಳಿದ್ದಾರೆ.

“ನಾನು ಅವರಿಗೆ ‘ಬೇರೆಯವರ ಸಹವಾಸ ಬಿಟ್ಟುಬಿಡಿ, ನಾವಿಬ್ಬರೂ ಚೆನ್ನಾಗಿರೋಣ’ ಎಂದು ಹೇಳಿದ್ದೆ. ನಿನ್ನೆ ಮನೆಗೆ ಬಂದವರು ‘ನೀನು ಚೆನ್ನಾಗಿರು’ ಎಂದು ಹೇಳಿ ರೂಮ್ ಬಾಗಿಲು ಹಾಕಿಕೊಂಡರು. ಸ್ವಲ್ಪ ಹೊತ್ತಿನಲ್ಲೇ ಲಾಕ್ ಮಾಡಿ ನೇಣು ಹಾಕಿಕೊಂಡಿದ್ದರು. ಕೆಳಗಿಳಿಸುವಾಗ ಸ್ಲಿಪ್ ಆಗಿ ಬಿದ್ದು ಹಣೆಗೆ ಗಾಯವಾಗಿತ್ತು ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments