ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಆರಂಭವಾಗಿ ಕೆಲವೇ ದಿನಗಳು ಕಳೆಯುವ ಮುನ್ನವೇ ಸಂಕಷ್ಟಕ್ಕೆ ಗುರಿಯಾಗಿದ್ದು, ಬಾಗಿಲು ಮುಚ್ಚುವ ಭೀತಿ ಎದುರಿಸುತ್ತಿದೆ.
ಬಿಗ್ ಬಾಸ್ 12ನೇ ಆವೃತ್ತಿಯ ಪ್ರಸಾರ ಆರಂಭವಾಗಿ ಒಂದು ವಾರವಷ್ಟೇ ಕಳೆದಿದೆ. ಆದರೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಂದ್ ಮಾಡುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದೆ.
ಬಿಗ್ ಬಾಸ್ ರಿಯಾಲಿಟಿ ಶೋಗಾಗಿ ನಿರ್ಮಾಣವಾಗಿರುವ ಬೃಹತ್ ಸೆಟ್ ನಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸದ ಕಾರಣ ರಿಯಾಲಿಟಿ ಶೋ ಬಂದ್ ಮಾಡುವಂತೆ ವಾಣಿಜ್ಯ ನಿಯಂತ್ರಣ ಮಂಡಳಿ ಸೂಚಿಸಿದೆ.
ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡದ ರಿಯಾಲಿಟಿ ಶೋ ಪ್ರಸಾರ ಆರಂಭಿಸಿ ಒಂದು ವಾರವಷ್ಟೇ ಕಳೆದಿದ್ದು, ಆರ್ ಜೆ ಅಮಿತ್ ಮತ್ತು ಬಾಡಿ ಬಿಲ್ಡರ್ ಕರಿಬಸಪ್ಪ ಎಲಿಮಿನೇಟ್ ಆಗಿದ್ದರೆ, ಮೊದಲ ದಿನವೇ ಹೊರಹೋಗಿದ್ದ ಮಂಗಳೂರಿ ರಕ್ಷಿತಾ ಶೆಟ್ಟಿ ಮರಳಿದ್ದಾರೆ.


