ರಷ್ಯಾ ಮೇಲೆ ಉಕ್ರೇನ್ ಅಮೆರಿಕದ ದೂರಗಾಮಿ ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಿದ ಬೆನ್ನಲ್ಲೇ 3ನೇ ಮಹಾಯುದ್ಧ ಆರಂಭದ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ, ನೀರು ಶೇಖರಿಸಿಟ್ಟುಕೊಳ್ಳಲು ಯುರೋಪ್ ದೇಶಗಳು ನಾಗರಿಕರಿಗೆ ಸೂಚಿಸಿದೆ.
ಅಮರಿಕದ ಅಧ್ಯಕ್ಷ ಬೋ ಬಿಡೈನ್ ದೂರದವರೆಗೆ ದಾಳಿ ನಡೆಸಬಲ್ಲ ಖಂಡಾಂತರ ಕ್ಷಿಪಣಿ ದಾಳಿಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಇದರ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪರಮಾಣು ಸಿದ್ದತೆ ಆರಂಭಿಸುವುದಾಗಿ ಘೋಷಿಸಿ ಎಚ್ಚರಿಕೆ ನೀಡಿದ್ದರು.
ರಷ್ಯಾ ಎಚ್ಚರಿಕೆ ನಡುವೆಯೂ ಅಮೆರಿಕದ 6 ಖಂಡಾಂತರ ಕ್ಷಿಪಣಿಗಳನ್ನು ರಷ್ಯಾದ ಮೇಲೆ ದಾಳಿ ನಡೆಸಿದ್ದು, ಇದು ಯಶಸ್ವಿಯಾಗಿದೆ ಎಂದು ಹೇಳಿಕೊಂಡಿತು. ಇದರಿಂದ ನ್ಯಾಟೋ ರಾಷ್ಟ್ರಗಳು ಮೂರನೇ ಮಹಾಯುದ್ಧಕ್ಕೆ ತಯಾರಾಗಿವೆ ಎಂಬ ಸಂದೇಶ ನೀಡಿದೆ.
ಪರಮಾಣು ದಾಳಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕಾ ಕ್ರಮವಾಗಿ ಸಾಧ್ಯವಾದಷ್ಟು ಮನೆಯಲ್ಲೇ ಇರುವಂತೆ ಹಾಗೂ ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸ್ವೀಡನ್ ತನ್ನ ನಾಗರಿಕರಿಗೆ ಸೂಚನೆ ನೀಡಿದೆ.
ಡೆನ್ಮಾರ್ಕ್, ಫಿನ್ ಲ್ಯಾಂಡ್ ಸೇರಿದಂತೆ ನ್ಯಾಟೋದ ಬಹುತೇಕ ರಾಷ್ಟ್ರಗಳು ನಾಗರಿಕರಿಗೆ ಯುದ್ಧದಿಂದ ಆಗುವ ಪರಿಣಾಮಗಳನ್ನು ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ನಾಗರಿಕರಿಗೆ ಸೂಚಿಸಿದೆ.