Sunday, July 12, 2026
Google search engine
Homeದೇಶಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದಿಂದ ಗಡಿಯಲ್ಲಿ ಭಾರೀ ದಾಳಿ!

ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದಿಂದ ಗಡಿಯಲ್ಲಿ ಭಾರೀ ದಾಳಿ!

ಕದನ ವಿರಾಮ ಘೋಷಣೆಯಾದ 2 ಗಂಟೆಯಲ್ಲೇ ಉಲ್ಲಂಘನೆ ಮಾಡಿರುವ ಪಾಕಿಸ್ತಾನದ ಭಾರತದ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮೆಸ್ರಿ ಶನಿವಾರ ನಡೆಸಿದ ತುರ್ತು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಘೋರ ತಪ್ಪು ಮಾಡುತ್ತಿದೆ. ಶೀಘ್ರದಲ್ಲೇ ಗಡಿಯಲ್ಲಿ ದಾಳಿ ನಿಲ್ಲಿಸದೇ ಇದ್ದರೆ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪಾಕಿಸ್ತಾನದ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರ ಸೇರಿದಂತೆ ಗಡಿಯಲ್ಲಿರುವ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಶೆಲ್ ದಾಳಿ ನಡೆಸಿದೆ. ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ದಾಳಿಗಳನ್ನು ವಿಫಲಗೊಳಿಸಿದ್ದಾರೆ ಎಂದರು.

ಭಾರತ ಮತ್ತು ಪಾಕಿಸ್ತಾನ ಸಂಜೆ 5 ಗಂಟೆಯಿಂದ ಕದನ ವಿರಾಮ ಘೋಷಿಸಿದ್ದವು. ಆದರೆ ಕೆಲವೇ ಗಂಟೆಗಳ ನಂತರ ಕದನ ವಿರಾಮ ಉಲ್ಲಂಘಿಸಿ ಘೋರ ತಪ್ಪು ಮಾಡಿದೆ. ಶೀಘ್ರದಲ್ಲೇ ನಿಯಮ ಪಾಲಿಸುವಂತೆ ಅವರು ಸೂಚಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments