Monday, October 12, 2026
Google search engine
Homeದೇಶವಿಮಾನ ಹೈಜಾಕ್ ತಪ್ಪಿಸಿ 180 ಪ್ರಯಾಣಿಕರನ್ನು ರಕ್ಷಿಸಿದ ಭಾರತೀಯ ಪೈಲೆಟ್!

ವಿಮಾನ ಹೈಜಾಕ್ ತಪ್ಪಿಸಿ 180 ಪ್ರಯಾಣಿಕರನ್ನು ರಕ್ಷಿಸಿದ ಭಾರತೀಯ ಪೈಲೆಟ್!

ವಿಮಾನವನ್ನು ನಿಯಂತ್ರಣಕ್ಕೆ ಪಡೆಯಲು ಯತ್ನಿಸಿದಾಗ ನಡೆದ ಹೊಡೆದಾಟದ ವೇಳೆ ಸಹ ಪೈಲೆಟ್ ನಿಂದ ಚಾಕು ಇರಿತಕ್ಕೆ ಒಳಗಾದರೂ ಹೆದರದೇ ಹೋರಾಟ ನಡೆಸಿ 180 ಪ್ರಯಾಣಿಕರನ್ನು ರಕ್ಷಿಸಿದ ಪೈಲೆಟ್ ಭಾರತೀಯ ಮೂಲದ ವ್ಯಕ್ತಿ ಎಂಬುದು ತಿಳಿದು ಬಂದಿದೆ.

ಭಾರತೀಯ ಪೈಲೆಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಈಗ ಹೀರೋ ಆಗಿ ಜನಮನ್ನಣೆಗೆ ಪಾತ್ರರಾಗಿದ್ದು, ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಭಾರತೀಯ ಮೂಲದ ವ್ಯಕ್ತಿ ಆಗಿರು ಸ್ಮಿತ್ ಬೋಯಿಂಗ್ 737 ವಿಮಾನ ಹಾರಿಸಿದ ಅನುಭವ ಹೊಂದಿದ್ದು, 4 ವರ್ಷಗಳ ಹಿಂದೆ ಯುಎಇ ವಿಮಾನ ಸಂಸ್ಥೆಗೆ ಸೇರ್ಪಡೆ ಆಗಿದ್ದರು. 9 ಸಾವಿರಕ್ಕೂ ಅಧಿಕ ಗಂಟೆಗಳ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.

ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಕಾಕ್‌ಪಿಟ್‌ನಲ್ಲಿ ಇಬ್ಬರು ಪೈಲಟ್ ಗಳ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಇಬ್ಬರ ನಡುವೆ ರಕ್ತಸಿಕ್ತ ಮಾರಾಮಾರಿ ನಡೆದಿದೆ. ಈ ವೇಳೆ ಓರ್ವ ಪೈಲಟ್ ವಿಮಾನ ಹಾರಾಟದ ಸಂದರ್ಭದಲ್ಲಿ ‘7500’ ಎಮರ್ಜೆನ್ಸಿ ಕೋಡ್ ಒತ್ತಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

7500’ ಕೋಡ್ ಹೈಜಾಕ್‌ ಸೂಚಿಸುವ ಅಂತಾರಾಷ್ಟ್ರೀಯ ಎಚ್ಚರಿಕೆಯಾಗಿದೆ. ಬಳಿಕ ವಿಮಾನ ಸೌದಿ ಅರೇಬಿಯಾ ವಾಯುಪ್ರದೇಶದತ್ತ ಡೈವರ್ಟ್ ಮಾಡಲಾಗಿದ್ದು, ಅಂತಿಮವಾಗಿ ವಿಮಾನ ಸುರಕ್ಷಿತವಾಗಿ ಸೌದಿಯಲ್ಲಿ ಲ್ಯಾಂಡ್ ಆಗಿದೆ.

ಪೈಲಟ್ ಗಳ ಜಗಳಕ್ಕೆ ಕಾರಣವೇನೆಂದು ತಕ್ಷಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ವಿಮಾನವನ್ನು ಅದರ ನಿಗದಿತ ಮಾರ್ಗದಿಂದ ಬೇರೆಡೆಗೆ ತಿರುಗಿಸಿದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭದ್ರತಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಇಸ್ರೇಲ್ ಕೆಲಸ ಮಾಡುತ್ತಿದೆ ಎಂದು ನೆತನ್ಯಾಹು ಅವರ ಕಚೇರಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments