Sunday, December 7, 2025
Google search engine
Homeಆರೋಗ್ಯಮೊಳಕೆ ಬಂದ ಆಲೂಗಟ್ಟೆ ಸೇವನೆ ಆರೋಗ್ಯಕ್ಕೆ ಅಪಾಯಕಾರಿ!

ಮೊಳಕೆ ಬಂದ ಆಲೂಗಟ್ಟೆ ಸೇವನೆ ಆರೋಗ್ಯಕ್ಕೆ ಅಪಾಯಕಾರಿ!

ಭಾರತೀಯ ಅಡುಗೆಗಳಲ್ಲಿ ಸಾಮಾನ್ಯವಾಗಿ ಅತೀ ಹೆಚ್ಚು ಬಳಸಲಾಗುವ ಆಲೂಗಡ್ಡೆ ಪೌಷ್ಠಿಕಾಂಶ ಹೊಂದಿದ್ದರೂ ಮೊಳಕೆ ಒಡೆಯುವ ಅಥವಾ ಹಸಿರು ಬಣ್ಣ ಹೊತ್ತ ಆಲೂಗಡ್ಡೆ(Potato) ಯನ್ನು ಸೇವಿಸುವುದು ಆರೋಗ್ಯಕ್ಕೆ ಗಂಭೀರ ಅಪಾಯಕಾರಿ ಆಗಿದೆ.

ಆಲೂಗಡ್ಡೆ ಬಳಸುವಾಗಲೂ ಸಾಕಷ್ಟು ಎಚ್ಚರಿಕೆ ವಹಿಸದೇ ಇದ್ದರೂ ಅದು ನಾನಾ ಅನಾರೋಗ್ಯಗಳಿಗೆ ದಾರಿ ಮಾಡಿಕೊಡಬಹುದು. ಆದ್ದರಿಂದ ಮೊಳಕೆ ಒಡೆಯುವ ಅಥವಾ ಹಸಿರು ಬಣ್ಣ ಹೊತ್ತ ಆಲೂಗಡ್ಡೆ(Potato) ಸೇವನೆಯಿಂದ ದೂರು ಇರಬೇಕು.

ಆಲೂಗಡ್ಡೆಯಲ್ಲಿ ಸಹಜವಾಗಿ ಕೆಲವು ಗ್ಲೈಕೋಆಲ್ಕಲಾಯ್ಡ್‌ಗಳು (ಸೋಲನೈನ್ ಮತ್ತು ಚಾಕೋನೈನ್) ಇರಬಹುದು.

ಕಡಿಮೆ ಪ್ರಮಾಣದಲ್ಲಿ ಈ ವಿಷಕಾರಿ ಸಂಯುಕ್ತಗಳು ಅಪಾಯಕಾರಿಯಲ್ಲದಿದ್ದರೂ, ಮೊಳಕೆ ಒಡೆಯುವ ಅಥವಾ ಸಿಪ್ಪೆ ಹಸಿರಾಗುವ ಗಡ್ಡೆಯಲ್ಲಿ ಈ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಹೆಚ್ಚಿನ ಬೆಳಕು, ತೇವಾಂಶ ಮತ್ತು ದೀರ್ಘಾವಧಿ ಸಂಗ್ರಹಣೆ ಕೂಡ ಇದನ್ನು ಹೆಚ್ಚಿಸುತ್ತದೆ.

ಅಪಾಯಗಳ ಲಕ್ಷಣಗಳು :

ವಾಂತಿ, ಅತಿಸಾರ, ಹೊಟ್ಟೆನೋವು

ತಲೆತಿರುಗು, ಜ್ವರ

ಹೃದಯ ಬಡಿತ ವೇಗವಾಗುವುದು

ಗರ್ಭಿಣಿಯರು ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿರುವವರು ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕು. ಗಂಭೀರ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯಕೀಯ ನೆರವು ಅವಶ್ಯಕವಾಗುತ್ತದೆ.

ಮೊಳಕೆ ಒಡೆಯುವ ಆಲೂಗಡ್ಡೆ ಗುರುತುಗಳು :

ಸಿಪ್ಪೆಯ ಮೇಲೆ ಹಸಿರು ಬಣ್ಣ ಕಾಣುವುದು.

ಮೊಳಕೆಗಳು ಉಬ್ಬಿ ಬೆಳೆದಿರುವುದು.

ಗಡ್ಡೆಯ ಮೃದುತ್ವ.

ಕಹಿ ರುಚಿ.

ಇಂತಹ ಲಕ್ಷಣಗಳು ಕಂಡುಬಂದರೆ ಆಲೂಗಡ್ಡೆ (Potato) ಯನ್ನು ಕತ್ತರಿ ತೆಗೆದು ಬಳಸುವುದು ಸುರಕ್ಷಿತವಲ್ಲ, ವಿಷಕಾರಿ ಪದಾರ್ಥಗಳು ಗಡ್ಡೆಯ ಒಳಗೂ ಹರಡಿರುತ್ತವೆ.

ಆಲೂಗಡ್ಡೆ ಶೇಖರಣೆ ಸಲಹೆಗಳು :

ತಂಪಾದ, ಒಣ ಮತ್ತು ಕತ್ತಲಿರುವ ಸ್ಥಳದಲ್ಲಿ ಇಡಬೇಕು.

ಫ್ರಿಜ್‌ನಲ್ಲಿ ನೇರವಾಗಿ ಇಡುವುದನ್ನು ತಪ್ಪಿಸಿ.

ಗಾಳಿ ಹರಿಯುವ ಪೇಪರ್ ಅಥವಾ ಬಟ್ಟೆ ಚೀಲಗಳಲ್ಲಿ ಇಡುವುದು ಉತ್ತಮ.

ಈರುಳ್ಳಿ ಅಥವಾ ಸೇಬಿನೊಂದಿಗೆ ಇಟ್ಟರೆ ಮೊಳಕೆ ಒಡೆಯುವುದನ್ನು ತಡೆಹಿಡಿಯಬಹುದು.

ಆರೋಗ್ಯ ತಜ್ಞರು ಎಚ್ಚರಿಕೆ : “ಪೌಷ್ಟಿಕಕರವಾದ ಆಲೂಗಡ್ಡೆ ಕೂಡ, ಹಸಿರು ಬಣ್ಣದ ಅಥವಾ ಮೊಳಕೆ ಒಡೆಯುವ ಗಡ್ಡೆ ಸೇವನೆಯಿಂದ ಉಂಟಾಗುವ ಅಪಾಯ ಗಂಭೀರ. ಅನುಮಾನಾಸ್ಪದ ಗಡ್ಡೆಗಳನ್ನು ಬಳಸದೇ, ಸುರಕ್ಷತೆ ಮುಖ್ಯವಾಗಿರಬೇಕು ಎಂದು ತಜ್ಞರು ಹೇಳುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments