ನೆಲ್ಲಿಕಾಯಿ ರಸವನ್ನು ನೀರಿನಲ್ಲಿ ಕದಡಿ, ಶೋಧಿಸಿ, ಸಕ್ಕರೆ ಸೇರಿಸಿ ಪಾನಕ ಮಾಡಿಕೊಂಡು ಕುಡಿದರೆ ಮೂತ್ರದೊಂದಿಗೆ ರಕ್ತ ಹೋಗುತ್ತಿದ್ದರೆ ಬಹುಬೇಗ ಗುಣವಾಗುತ್ತದೆ. ನೆಲ್ಲಿಕಾಯಿಯ ಎಲೆಗಳ ಕಷಾಯ ತಯಾರಿಸಿಕೊಂಡು ಬಾಯಿ ಮುಕ್ಕಳಿಸುತ್ತಿದ್ದರೆ ಹೊಟ್ಟೆ ದೂರವಾಗುವುದು.
ನೆಲ್ಲಿಕಾಯಿಯ ರಸವನ್ನು ಸಕ್ಕರೆಯೊಂದಿಗೆ ಸೇವಿಸುವುದರಿಂದ ಪಿತ್ತ, ಹೊಟ್ಟೆನೋವು ಶಮನವಾಗುತ್ತದೆ. ಕೆರೆತ, ತುರಿಕೆ, ಕಜ್ಜಿಯಂತಹ ಸಾಮಾನ್ಯ ಚರ್ಮದ ಸಮಸ್ಯೆಗಳಲ್ಲಿ ಕಿರುನೆಲ್ಲಿಗಿಡವನ್ನು ಜಜ್ಜಿ ಅದರ ರಸವನ್ನು ಹಚ್ಚಿಬೇಕು ಅಲ್ಲದೆ ಗಿಡದ ರಸವನ್ನು ಎರಡು ಚಮಚ ಕುಡಿಯಬೇಕು.
ಹಸಿವು ಆಗದಿರುವಿಕೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಲು ಕಿರುನೆಲ್ಲಿ ಗಿಡದ ರಸವನ್ನು ಸೇವಿಸಬೇಕು. ಬಲಿತ ನೆಲ್ಲಿಕಾಯಿಯ ಚೂರ್ಣವನ್ನು ಬಿಸಿನೀರಿನಲ್ಲಿ ಚೆನ್ನಾಗಿ ಕಿವುಚಿ ಅದಕ್ಕೆ ಸಕ್ಕರೆಯನ್ನು ಸೇರಿಸಿ, ಶೋಧಿಸಿದ ನಂತರ ಸೇವಿಸಿದರೆ ಬಾಯಿ, ಮೂಗು ಮತ್ತು ಗುದದ್ವಾರದಿಂದ ಹೊರಬೀಳುವ ರಕ್ತ ತಟ್ಟನೆ ನಿಲ್ಲುತ್ತದೆ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ನೆಗಡಿ, ಉಬ್ಬಸ, ಕ್ಷಯ, ಜ್ಞಾಪಕಶಕ್ತಿ ಇಲ್ಲದಿರುವಿಕೆ, ಅಕಾಲಿಕ ಮುಪ್ಪು, ಮಧುಮೇಹ, ಕೂದಲು ಉದುರುವಿಕೆ ಮುಂತಾದ ರೋಗಗಳು ದೂರವಾಗುತ್ತದೆ. ನೆಲ್ಲಿಕಾಯಿಯ ಎಲೆಯನ್ನು ಮಜ್ಜಿಗೆಯಲ್ಲಿ ಅರೆದು ಅದರಲ್ಲೇ ಕದಡಿ, ಸೋಸಿ ದಿನಕ್ಕೆರಡು ಬಾರಿ ಕುಡಿದರೆ ಬೇಧಿ ನಿಲ್ಲುತ್ತದೆ. ನೆಲ್ಲಿಕಾಯಿಯ ಬೀಜ ತೆಗದು ರುಬ್ಬಿ ತಲೆಗೆ ಸವರಿ ಎರಡು ಗಂಟೆ ಬಿಟ್ಟು ಸ್ನಾನ ಮಾಡಲು ಒಳಕೂದಲು ಕಪ್ಪಾಗುವುದು.
ಒಂದು ಚಮಚ ನೆಲ್ಲಿಕಾಯಿಯ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪದೊಂದಿಗೆ ಪ್ರತಿದಿನ ಬೆಳಗಿನ ಸಮಯದಲ್ಲಿ ಸೇವಿಸುದರಿಂದ ‘ಸೀ’ ಜೀವಸತ್ವದ ಕೊರತೆಯಿಂದ ಉಂಟಾಗುವ ಸಮಸ್ಯೆ ನಿವಾರಣೆಯಾಗುತ್ತದೆ. ಕೂದಲು ಸೋಂಪಾಗಿ ಬೆಳೆಯಲು ನೆಲ್ಲಿಕಾಯಿಯ ರಸದೊಡನೆ ಎಲಚಿ ಎಲೆಗಳನ್ನು ಅರೆದು ಅದನ್ನು ತಲೆಗೆ ಹಚ್ಚಿಕೊಳ್ಳಿ.