2024ರಲ್ಲಿ ಉತ್ತಮ ಅರ್ಹ ವ್ಯಕ್ತಿಯ ಮರ್ದನ ಆಕೈತಿ, ಉತ್ತಮ ವ್ಯಕ್ತಿಯ ಗೆಲುವೂ ಆಕೈತಿ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿಯ ಚಂದ್ರಗಿರಿ ಶ್ರೀ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಶ್ರೀಮಠದ ಮಠಾಧೀಶರಾದ ಸಿದ್ರಾಮಯ್ಯ ಕಾಲಜ್ಞಾನದ ಭವಿಷ್ಯ.ನುಡಿದಿದ್ದಾರೆ.
ಸದಾಶಿವ ಮುತ್ಯಾನ ಮಠದಲ್ಲಿ ಈವರೆಗೆ ನುಡಿರುವ ಕಾಲಜ್ಞಾನದ ಭವಿಷ್ಯ ಸುಳ್ಳಾಗಿಲ್ಲ ಎಂಬುದು ಈ ಭಾಗದ ಜನರ ನಂಬಿಕೆ. ಹೀಗಾಗಿ ಸಿದ್ರಾಮಯ್ಯ ಶ್ರೀಗಳು ನುಡಿದ ಈ ಬಾರಿಯ ಕಾಲಜ್ಞಾನವನ್ನೂ ಹಲವರು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.
ಗಡಿ ಕಾಯುವ ಯೋಧರಿಗೆ ನೋವು ಉಂಟಾಕೈತಿ, ಧರ್ಮ ಧರ್ಮಗಳ ಮಧ್ಯೆ ಕಿತ್ತಾಟ ಐತಿ. ರಾಜಕೀಯ ಗೊಂದಲ ಉಂಟಾಗಲಿದೆ. ರಾಜಕೀಯ ಸಂಘರ್ಷ ಹೆಚ್ಚಲಿದ್ದು, ಅವರವರಲ್ಲೇ ಕಾಲು ಎಳೆಯುವ ಜನರು ಹೆಚ್ಚಾಗುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಈ ವರ್ಷ ಸಾಧಾರಣ ಮಳಿ ಐತಿ, ಬೆಳಿಗೆ ಕೀಟಬಾಧೆ ಹೆಚ್ಚೈತಿ, ಮಕ್ಕಳಿಗೆ ರೋಗಬಾಧೆ ಹೆಚ್ಚು, ಕಣ್ಣಿನ ಕಾಯಿಲೆ ಕಾಡುತ್ತದೆ. ಬರವೂ ಇದೆ, ಕೇಡೂ ಇದೆ. ಭಯೋತ್ಪಾದನೆ, ನೈಸಗಿರ್ಕ ವಿಕೋಪವೂ ಇರಲಿದೆ. ಜೇಷ್ಠ ಮಾಸದಲ್ಲಿ ಲಿಂಗ ಸಮಾನತೆ ಇರಲಿದೆ ಎಂದು ಸಿದ್ರಾಮಯ್ಯ ಭವಿಷ್ಯ ನಡಿದಿದ್ದಾರೆ.
ಮಾರ್ಚ್ ನಂತರ ಆರಂಭವಾಗುವ ಸಂವತ್ಸರ ಕ್ರೋಧಿನಾಮ ಸಂವತ್ಸರದಲ್ಲಿ ಕೋಪ ಹೆಚ್ಚಾಗುತ್ತದೆ, ಸಿಟ್ಟಿನವರು ಹೆಚ್ಚಾಗುತ್ತಾರೆ. ವ್ಯಾಪಾರಸ್ಥರಿಗೆ ಮಧ್ಯಮ ಫಲವಿದೆ. ಮಳೆ ಬೆಳೆ ಫಲ ಸಸಿಗಳು ಖಂಡ ಮಂಡಳವಾಗುತ್ತದೆ. ಧವಸ ಧಾನ್ಯಗಳು ರಸಗಳು ಮಾರಾಟವಾಗುತ್ತವೆ ಎಂದು ಭವಿಷ್ಯ ನುಡಿಯಲಾಗಿದೆ.
ಉತ್ತರ ಭಾಗಕ್ಕೆ ಬರಗಾಲ ಹಾಗೂ ಕೇಡಾಗುತ್ತದೆ. ದೊಡ್ಡ ದೊಡ್ಡ ಮಹಾನರ ಯೋಗ ಅಳಿಯಲಿವೆ. ಕುಲ ಜಾತಿಗಳಲ್ಲಿ ಕಹ ಜಾಸ್ತಿ ಇರಲಿದೆ. ಶಿಶುಗಳಿಗೆ ಆರೋಗ್ಯ ಬಾಧೆ ಹೆಚ್ಚಾಗುತ್ತದೆ. ಆಡಂಬರದ ಜೀವನ ನಡೆಸುವವರು ಸಾಲದ ಬಾಧೆ ಎದುರಿಸಬೇಕಾಗುತ್ತದೆ. ಸಕ್ಕರೆ, ಬೆಣ್ಣೆ, ಕುಸುಬೆ, ಸೇಂಗಾ ಬೆಲೆ ಹೆಚ್ಚುತ್ತವೆ ಎಂದು ಕಾಲಜ್ಞಾನ ಭವಿಷ್ಯದಲ್ಲಿ ನುಡಿಯಲಾಗಿದೆ.