Sunday, December 7, 2025
Google search engine
Homeವಿದೇಶಹಮಾಸ್ ಗಾಜಾ ಮುಖ್ಯಸ್ಥ ಮುಹಮದ್ ಸಿನ್ವಾರ್ ಬಲಿ: ಇಸ್ರೇಲ್ ಪ್ರಧಾನಿ ಘೋಷಣೆ

ಹಮಾಸ್ ಗಾಜಾ ಮುಖ್ಯಸ್ಥ ಮುಹಮದ್ ಸಿನ್ವಾರ್ ಬಲಿ: ಇಸ್ರೇಲ್ ಪ್ರಧಾನಿ ಘೋಷಣೆ

ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್ ಗಾಜಾ ಮುಖ್ಯಸ್ಥ ಮುಹಮದ್ ಸಿನ್ವಾರ್ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.

ಮೇ 14ರಂದು ಇಸ್ರೇಲ್ ವಾಯುಪಡೆ ನಡೆಸಿದ ಭೀಕರ ವಾಯುದಾಳಿಯಲ್ಲಿ ಮುಹಮದ್ ಸಿನ್ವಾರ್ ಗಂಭೀರವಾಗಿ ಗಾಯಗೊಂಡಿದ್ದ. ಸಾವಿನ ಕುರಿತು ಖಚಿತ ಮಾಹಿತಿ ಲಭಿಸದ ಕಾರಣ ಇಸ್ರೇಲ್ ಯಾವುದೇ ಘೋಷಣೆ ಮಾಡದೇ ಮೌನ ವಹಿಸಿತ್ತು. ಆದರೆ ಇದೀಗ ಸಾವಿನ ಸುದ್ದಿ ದೃಢಪಡುತ್ತಿದ್ದಂತೆ ಅಧಿಕೃತ ಘೋಷಣೆ ಮಾಡಿದೆ.

ಮಾಜಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸೋದರನಾದ ಮುಹಮದ್ ಸಿನ್ವಾರ್ ಆಗಿದ್ದಾನೆ. ಯಹ್ಯಾ ಸಿನ್ವಾರ್ 3034 ಅಕ್ಟೋಬರ್ ನಲ್ಲಿ ನಡೆಸಿದ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದ. ಯಹ್ಯಾ ಸಿನ್ವಾರ್ 2023 ಅಕ್ಟೋಬರ್ 7ರಂದು ಇಸ್ರೇಲ್ ನಡೆದ ಉಗ್ರರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ. ಈ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧ ಘೋಷಣೆ ಮಾಡಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments