ಇಸ್ರೇಲ್ ನ ಡೂಮ್ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಇರಾನ್ ಕ್ಷಿಪಣಿಗಳು ಇಸ್ರೇಲ್ ರಕ್ಷಣಾ ಪಡೆಯ ಮುಖ್ಯ ಕಚೇರಿಯನ್ನು ಧ್ವಂಸಗೊಳಿಸಿವೆ. ಈ ಮೂಲಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇಸ್ರೇಲ್ ಗುರುವಾರ ತಡರಾತ್ರಿ ನಡೆಸಿದ 200 ಡ್ರೋಣ್ ದಾಳಿ ಬೆನ್ನಲ್ಲೇ ಪ್ರತೀಕಾರದ ಕ್ರಮದ ಎಚ್ಚರಿಕೆ ನೀಡಿದ್ದ ಇರಾನ್ ಶುಕ್ರವಾರ 100 ಡ್ರೋಣ್ ದಾಳಿ ನಡೆಸಿತ್ತು. ಆದರೆ ಶನಿವಾರ ತಡರಾತ್ರಿ ನಡೆಸಿದ ಭೀಕರ ಕ್ಷಿಪಣಿ ದಾಳಿ ಇರಾನ್ ನ ರಕ್ಷಣಾ ಕೋಟೆಯನ್ನು ಯಶಸ್ವಿಯಾಗಿ ಭೇದಿಸಿ ರಕ್ಷಣಾ ಇಲಾಖೆಯ ಮುಖ್ಯ ಕಚೇರಿಯನ್ನು ಧ್ವಂಸಗೊಳಿಸಿದೆ.

ಟೆಲ್ ಅವಿವ್ ನಲ್ಲಿರುವ ರಕ್ಷಣಾ ಸಾಮಾಗ್ರಿಗಳ ಸಂಗ್ರಹ ಸೇರಿದಂತೆ ಹಲವು ಮಹತ್ವದ ಶಸ್ತ್ರಾಸ್ತ ಸಂಗ್ರಹಿಸಿರುವ ಇಸ್ರೇಲ್ ರಕ್ಷಣಾ ಮುಖ್ಯ ಕಚೇರಿ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
19 ಸೆಕೆಂಡ್ ಗಳ ವೀಡಿಯೋದಲ್ಲಿ ಇರಾನ್ ನ ಡೂಮ್ ರಕ್ಷಣಾ ವ್ಯವಸ್ಥೆಗಳು ದಾಳಿಯನ್ನು ವಿಫಲಗೊಳಿಸಲು ಸಾಕಷ್ಟು ಪ್ರಯತ್ನಗಳು ನಡೆಸಿದರೂ ಕೆಲವು ಕ್ಷಿಪಣಿಗಳು ರಕ್ಷಣೆಯನ್ನು ಭೇದಿಸಿ ಯಶಸ್ವಿಯಾಗಿ ದಾಳಿ ನಡೆಸಿದೆ.


