ಅಮೆರಿಕ ದಾಳಿ ಬೆನ್ನಲ್ಲೇ ಇಸ್ರೇಲ್ ಮೇಲೆ ಇರಾನ್ ತನ್ನ ಬತ್ತಳಿಕೆಯಲ್ಲಿದ್ದ ಅತೀ ದೊಡ್ಡ ಕ್ಷಿಪಣಿ ದಾಳಿ ನಡೆಸಿದೆ.
ತನ್ನ ದೇಶದ ಮೂರು ಅಣು ಸ್ಥಾವರಗಳ ಮೇಲೆ ಅಮೆರಿಕ ಬಾಂಬರ್ ಗಳು ನಡಸಿದ ಬೆನ್ನಲ್ಲೇ ಇಸ್ರೇಲ್, ಖೋಮ್ ಶರಾರ್ -4 ಕ್ಷಿಪಣಿ ಬಳಸಿ ದಾಳಿ ಮಾಡಲಾಗಿದೆ ಎಂದು ಇರಾನ್ ರಾಷ್ಟ್ರೀಯ ಸುದ್ದಿ ಸಂಸ್ಥೆ ತಿಳಿಸಿದೆ.

ಭಾನುವಾರ 40 ಕ್ಷಿಪಣಿಗಳ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಲಾಗಿದೆ. ಇದರಲ್ಲಿ ಅತ್ಯಾಧುನಿಕ ಹಾಗೂ ಅತ್ಯಂತ ಪ್ರಬಲ ಕ್ಣಿಪಣಿ ಖೋಮ್ ಶರಾರ್-4 ಕೂಡ ಸೇರಿದೆ.
ಖೋಮ್ ಶರಾರ್ -4 ಕ್ಷಿಪಣಿ 2000 ಕಿ.ಮೀ. ದೂರ ಚಿಮ್ಮಬಲ್ಲದು ಮತ್ತು 1500 ಕೆಜಿ ತೂಕದ ಸಿಡಿಮದ್ದು ಹೊರುವ ಸಿಡಿತಲೆ ಹೊಂದಿದೆ. ಅಲ್ಲದೇ ಏಕಕಾಲದಲ್ಲಿ ಹಲವು ಕಡೆ ದಾಳಿ ನಡೆಸುವ ಸಿಡಿತಲೆಗಳನ್ನು ಹೊಂದಿದೆ ಎಂದು ಕ್ಷಿಪಣಿಯ ಸಾಮರ್ಥ್ಯ ವನ್ನು ವಿವರಿಸಲಾಗಿದೆ.
1980ರಲ್ಲಿ ಇರಾಕ್ ಮತ್ತು ಇರಾನ್ ನಡುವಣ ಯುದ್ಧದ ಸಂದರ್ಭದಲ್ಲಿ ಈ ಕ್ಷಿಪಣಿಗೆ ಖೋಮ್ ಶರಾರ್ ಹೆಸರಿಡಲಾಗಿದೆ.
ಇಸ್ರೇಲ್ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.


