ಇಸ್ರೇಲ್ ವಿರುದ್ಧ ಯುದ್ಧ 10ನೇ ದಿನಕ್ಕೆ ಕಾಲಿಡುತ್ತಿದ್ದು, ಅಮೆರಿಕ ಕೂಡ ದಾಳಿ ನಡೆಸುವ ಭೀತಿ ಹಿನ್ನೆಲೆಯಲ್ಲಿ ಇರಾನ್ ಸುಪ್ರೀಂ ಅಯತ್ತುಲ್ಲಾ ಅಲಿ ಖಮೈನಿ ಅಡಗುದಾಣಕ್ಕೆ ತೆರಳಿದ್ದಾರೆ.
ಅಣು ಸ್ಥಾವರ ಧ್ವಂಸ ಮಾಡುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ ಖಮೈನಿ ಅತ್ಯಂತ ಆಳವಾದ ಬಂಕರು ಸೇರಿಕೊಂಡಿದ್ದಾರೆ. ತಮ್ಮ ಸುತ್ತ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಸುಳಿಯದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೇ ವೇಳೆ ಇಸ್ರೇಲ್ ಅಣು ಸ್ಥಾವರದ ಮೇಲೆ ಉಗ್ರ ದಾಳಿ ನಡೆಸಿದ್ದು, ಇರಾನ್ ನ ಡ್ರೋಣ್ ದಾಳಿಯ ಉಸ್ತುವಾರಿ ಸೇನಾಧಿಕಾರಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ
ದಾಳಿ ಮತ್ತಷ್ಟು ಭೀಕರವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಖಮೈನಿ ಇರಾನ್ ಉತ್ತರಾಧಿಕಾರಿಯಾಗಿ ಮೂವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
ಪ್ರಸ್ತುತ ಯುದ್ಧದ ಮುಂದಾಳತ್ವ ವಹಿಸಿರುವ ಖಮೈನಿ ಪುತ್ರ ಮಜ್ತಾಬಾ ಅವರ ಹೆಸರನ್ನು ಕೈ ಬಿಡಲಾಗಿದೆ ಎಂದು ಹೇಳಲಾಗಿದೆ. ಆದರೆ ಉತ್ತರಾಧಿಕಾರಿಯ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.
ಇದೇ ವೇಳ ಅಮೆರಿಕ ಬಿ-2 ಬಾಂಬರ್ ವಿಮಾನ ಪ್ರಯಾಣ ಆರಂಭಿಸಿದ್ದು 13 ಸಾವಿರ ಕೆಜಿ ತೂಕದ ಬಾಂಬ್ ಇರಾನ್ ಅಣು ಸ್ಥಾವರ ದ ಮೇಲೆ ಹಾಕಲು ಸಜ್ಜಾಗಿದೆ. ಈ ಬಾಂಬ್ 200 ಅಡಿ ಆಳದ ಬಂಕರ್ ನಾಶ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.


