Sunday, December 7, 2025
Google search engine
Homeವಿದೇಶ60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ: ಡೊನಾಲ್ಡ್ ಟ್ರಂಪ್

60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಯುದ್ಧಪೀಡಿತ ಗಾಜಾದಲ್ಲಿ 60 ದಿನಗಳ ಕದನ ವಿರಾಮವನ್ನು ಅಂತಿಮಗೊಳಿಸಲು ಇಸ್ರೇಲ್ ಅಗತ್ಯ ಷರತ್ತುಗಳಿಗೆ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಹಮಾಸ್ ಈ ಷರತ್ತುಗಳಿಗೆ ಒಪ್ಪಿಕೊಳ್ಳುತ್ತದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್ನಲ್ಲಿ ಟ್ರಂಪ್ ಬರೆದಿದ್ದಾರೆ, ನನ್ನ ಪ್ರತಿನಿಧಿಗಳು ಇಂದು ಗಾಜಾದಲ್ಲಿ ಇಸ್ರೇಲಿಗಳೊಂದಿಗೆ ದೀರ್ಘ ಮತ್ತು ಉತ್ಪಾದಕ ಸಭೆ ನಡೆಸಿದರು. 60 ದಿನಗಳ ಕದನ ವಿರಾಮವನ್ನು ಅಂತಿಮಗೊಳಿಸಲು ಅಗತ್ಯವಾದ ಷರತ್ತುಗಳಿಗೆ ಇಸ್ರೇಲ್ ಒಪ್ಪಿಕೊಂಡಿದೆ, ಆ ಸಮಯದಲ್ಲಿ ನಾವು ಯುದ್ಧವನ್ನು ಕೊನೆಗೊಳಿಸಲು ಎಲ್ಲಾ ಪಕ್ಷಗಳೊಂದಿಗೆ ಕೆಲಸ ಮಾಡುತ್ತೇವೆ. ಎಂದು ಹೇಳಿದ್ದಾರೆ.

ಶಾಂತಿಯನ್ನು ತರಲು ಬಹಳ ಶ್ರಮಿಸಿದ ಕತಾರಿಗಳು ಮತ್ತು ಈಜಿಪ್ಟಿನವರು ಈ ಅಂತಿಮ ಪ್ರಸ್ತಾಪವನ್ನು ಮಂಡಿಸುತ್ತಾರೆ. ಮಧ್ಯಪ್ರಾಚ್ಯದ ಒಳಿತಿಗಾಗಿ, ಹಮಾಸ್ ಈ ಒಪ್ಪಂದವನ್ನು ಒಪ್ಪಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದವರು ಹೇಳಿದ್ದಾರೆ.

ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು!” ಎಂದು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅರಬ್ ಮಧ್ಯಸ್ಥಿಕೆ ರಾಷ್ಟ್ರದ ಅಧಿಕಾರಿಯೊಬ್ಬರು, ಕೆಲವು ಪ್ರಮುಖ ಅಡೆತಡೆಗಳು ಉಳಿದಿರುವುದಾಗಿ ಮತ್ತು ಒಪ್ಪಂದಕ್ಕೆ ಸಾಮೀಪ್ಯ ಮಾತುಕತೆಗಳು ಇನ್ನೂ ಅಗತ್ಯವೆಂದು ತಿಳಿಸಿದ್ದಾರೆ.

ಮಾನವೀಯ ನೆರವಿನ ವಿತರಣೆಗೆ ಹಳೆಯ ಕಾರ್ಯವಿಧಾನಕ್ಕೆ ಮರಳುವುದು ಅಥವಾ ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ನ ಪ್ರಸ್ತುತ ವ್ಯವಸ್ಥೆಯನ್ನು ಬದಲಾಯಿಸುವುದು ಹಮಾಸ್ನ ಬೇಡಿಕೆಗಳಲ್ಲಿ ಸೇರಿವೆ ಎಂದು ರಾಜತಾಂತ್ರಿಕರು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದಿನ ವಾರ ಶ್ವೇತಭವನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ನೆತನ್ಯಾಹು, ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿದೇಶಾಂಗ ಕಾರ್ಯದಶರ್ಿ ಮಾಕರ್ೊ ರೂಬಿಯೊ, ರಕ್ಷಣಾ ಕಾರ್ಯದಶರ್ಿ ಪೀಟ್ ಹೆಗ್ಸೆತ್, ಮಧ್ಯಪ್ರಾಚ್ಯಕ್ಕೆ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್, ವಾಣಿಜ್ಯ ಕಾರ್ಯದಶರ್ಿ ಹೊವಾಡರ್್ ಲುಟ್ನಿಕ್, ಮತ್ತು ಹಿರಿಯ ಶಾಸಕರನ್ನು ಭೇಟಿಯಾಗಲಿದ್ದಾರೆ.

ಇರಾನ್ನೊಂದಿಗಿನ ಇಸ್ರೇಲ್ನ ಇತ್ತೀಚಿನ ಸಂಘರ್ಷದ ಬಳಿಕ, ಇಸ್ರೇಲ್ ಸಚಿವ ರಾನ್ ಡರ್ಮರ್ ವಾಷಿಂಗ್ಟನ್ನಲ್ಲಿ ಪ್ರಾದೇಶಿಕ ರಾಜತಾಂತ್ರಿಕತೆ ಮತ್ತು ಗಾಜಾದ ಬಗ್ಗೆ ಚಚರ್ೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆೆ. ಭದ್ರತೆಗೆ ಸಂಬಂಧಿಸಿದ ವಿಷಯಗಳು ಮತ್ತು ವ್ಯಾಪಾರ ಒಪ್ಪಂದಗಳನ್ನು ಚಚರ್ಿಸಲು ನೆತನ್ಯಾಹು ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments