ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧವನ್ನು ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 60ನೇ ಬಾರಿ ಪುನರುಚ್ಚರಿಸಿದ್ದಾರೆ.
ಸೌದಿ ಅರೆಬಿಯಾದ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಜೊತೆ ಸೌದಿ ಅರೆಬಿಯಾ ಮತ್ತು ಅಮೆರಿಕ ನಡುವಣ ಬಂಡವಾಳ ಹೂಡಿಕೆ ಕುರಿತ ಚರ್ಚೆಯ ವೇಳೆ ಡೊನಾಲ್ಡ್ ಟ್ರಂಪ್ ಈ ವಿಷಯ ಮತ್ತೆ ಪ್ರಸ್ತಾಪಿಸಿದರು.
ಪಾಕಿಸ್ತಾನದ ಮೇಲೆ ಭಾರತ ಆರಂಭಿಸಿದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ನಿಲ್ಲಿಸದೇ ಇದ್ದರೆ ಶೇ.350ರಷ್ಟು ತೆರಿಗೆ ವಿಧಿಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಭಾರತ ಯುದ್ಧದಿಂದ ಹಿಂದೆ ಸರಿಯಿತು ಎಂದು ಟ್ರಂಪ್ ಹೇಳಿದ್ದಾರೆ.
ಪಾಕಿಸ್ತಾನ ಮೇಲಿನ ಯುದ್ಧವನ್ನು ನಿಲ್ಲಿಸಿದ್ದಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ಖರೇ ಮಾಡಿ ನಾವು ಪಾಕಿಸ್ತಾನ ಮೇಲಿನ ಯುದ್ಧವನ್ನು ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.
ನಾನು ಎರಡು ದೇಶಗಳ ನಡುವಣ ಭಿನ್ನಮತಕ್ಕೆ ಅಂತ್ಯ ಹಾಡುವುದರಲ್ಲಿ ನಿಸ್ಸೀಮನಾಗಿದ್ದೇನೆ. ಈ ವಿಷಯದಲ್ಲಿ ಹಲವಾರು ವರ್ಷಗಳಿಂದ ನಾನು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇನೆ. ನಾನು ಹಲವಾರು ರೀತಿಯ ಯುದ್ಧಗಳನ್ನು ನೋಡಿದ್ದೇನೆ. ಭಾರತ, ಪಾಕಿಸ್ತಾನ ಎರಡೂ ದೇಶಗಳು ಅಣ್ವಸ್ತ್ರ ಹೊಂದಿವೆ. ಈ ದೇಶಗಳ ನಡುವಣ ಯುದ್ಧ ಒಳ್ಳೆಯದಲ್ಲ ಎಂದು ಅವರು ಸ್ಪಷ್ಟಪಡಿಸಿದರು.


