Sunday, December 7, 2025
Google search engine
Homeಜ್ಯೋತಿಷ್ಯಶಿವನ ಮುಡಿಗೇರಿದ ಹೂವು ಪಾದಕ್ಕೆ ಬೀಳಲಿದೆ: ಸಂಕ್ರಾಂತಿ ನಂತರ ಸಿಎಂ ಬದಲಾಣೆ ಖಚಿತ ಎಂದು ಕೋಡಿಮಠದ...

ಶಿವನ ಮುಡಿಗೇರಿದ ಹೂವು ಪಾದಕ್ಕೆ ಬೀಳಲಿದೆ: ಸಂಕ್ರಾಂತಿ ನಂತರ ಸಿಎಂ ಬದಲಾಣೆ ಖಚಿತ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ

ಬೆಂಗಳೂರು: ಶಿವನ ಮುಡಿ ಸೇರಿದ ಹೂವು ಶಿವನ ಪಾದಕ್ಕೆ ಬೀಳಲೇಬೇಕು ಎಂದು ಹೇಳುವ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಮಂಡ್ಯದ ಕೆಆರ್ ಪೇಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 2026ರ ಸಂಕ್ರಾಂತಿಯ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದಿದ್ದಾರೆ. ಈ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಪಟ್ಟ ಖಚಿತ ಎಂದು ಹೇಳಿದ್ದಾರೆ.

“ಶಿವನ ಮುಡಿ ಸೇರಿದ ಹೂವು ಶಿವನ ಪಾದಕ್ಕೆ ಬೀಳಲೇಬೇಕು” ಎಂಬ ಭವಿಷ್ಯ ನುಡಿದಿರುವ ಶ್ರೀಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಪಟ್ಟ ಖಚಿತ ಎಂಬಂತಹ ಮಾತನ್ನು ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಗೃಹ ಸಚಿವ ಜಿ. ಪರಮೇಶ್ವರ್ ಕೋಡಿಮಠಕ್ಕೆ ತೆರಳಿ ಶ್ರೀಗಳೊಡನೆ ಚರ್ಚೆ ನಡೆಸಿದ್ದು ಇಲ್ಲಿ ಗಮನಾರ್ಹ. ಅದಾದ ನಂತರ ಅವರು ನೀಡಿರುವ ಈ ಭವಿಷ್ಯ ರಾಜ್ಯ ರಾಜಕಾರಣದ ಪಾಳಯದಲ್ಲಿ ಸಂಚಲನ ಉಂಟುಮಾಡಿದೆ.

ಅಂದ ಹಾಗೆ ಇದೇನು ಮೊದಲ ಬಾರಿ ಪಟ್ಟ ಬದಲಾವಣೆಯ ಕುರಿತು ಶ್ರೀಗಳು ನುಡಿದಿಲ್ಲ. ಬದಲಾಗಿ ಕಳೆದ ಜೂನ್‌ನಲ್ಲಿ ಸಂಕ್ರಾಂತಿಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತೆ ಎಂದೂ, ಅಕ್ಟೋಬರ್ 1ನೇ ತಾರೀಕು 2026ರ ಸಂಕ್ರಾಂತಿಯವರೆಗೆ ಸಿದ್ದರಾಮಯ್ಯನವರ ಪಟ್ಟಕ್ಕೆ ಯಾವುದೇ ತೊಂದರೆ ಇಲ್ಲ, ಅದಾದ ಮೇಲೆ ರಾಜಕೀಯ ವಿಪ್ಲವ ಉಂಟಾಗಿ ಪಟ್ಟ ಬದಲಾಗುವುದು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಷ್ಟ್ರ ರಾಜಕಾರಣದ ಬಗ್ಗೆಯೂ ಶ್ರೀಗಳು ಗಂಭೀರ ವಿಷಯಗಳನ್ನು ಮಾತನಾಡಿದ್ದಾರೆ. ಈ ಯುಗಾದಿಯ ನಂತರ ಕೇಂದ್ರದಲ್ಲಿ ಸಮಸ್ಯೆಗಳು ಉಲ್ಬಣವಾಗಲಿವೆ. ದೆಹಲಿಯಲ್ಲಿ ನಡೆದಂತಹ ಬಾಂಬ್ ಸ್ಫೋಟಗಳು ಇನ್ನೂ ಅನೇಕ ಅಹಿತಕರ ಘಟನೆಗಳು ಮುಂದಿನ ಸಂವತ್ಸರದಲ್ಲಿ (ಹಿಂದೂ ವರ್ಷ) ಉಂಟಾಗಲಿವೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments