ಪ್ರತಿ ವರ್ಷ ಆಸ್ತಿ ವಿವರ ನೀಡಬೇಕು ಎಂಬ ನಿಯಮವಿದ್ದರೂ ರಾಜ್ಯದ 5 ಸಚಿವರು, 66 ಶಾಸಕರು ಹಾಗೂ 27 ಮೇಲ್ಮನೆ ಸದಸ್ಯರು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಿಲ್ಲ!
2024-25ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದ ಸಚಿವರು ಹಾಗೂ ಶಾಸಕರ ಪಟ್ಟಿಯನ್ನು ಲೋಕಾಯುಕ್ತ ಬಿಡುಗಡೆ ಮಾಡಿದೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆ – 1984ರಂತೆ ಪ್ರತಿಯೊಬ್ಬ ಶಾಸಕ ತನ್ನ ಹಾಗೂ ಕುಟುಂಬದ ಆಸ್ತಿ ವಿವರನ್ನು ಸಲ್ಲಿಸಬೇಕು. ಕಳೆದ ಸಾಲಿನಲ್ಲಿ ಆಸ್ತಿ ಪ್ರಮಾಣಪತ್ರ ಸಲ್ಲಿಸುವಂತೆ ಸಕ್ಷಮ ಪ್ರಾಧಿಕಾರ ಎರಡು ತಿಂಗಳು ಕಾಲಾವಕಾಶ ನೀಡಿದರೂ ಆಸ್ತಿ ವಿವರ ಸಲ್ಲಿಸಿಲ್ಲ.
ಸಚಿವರಾದ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್, ರಹೀಂ ಖಾನ್, ಕೆ.ವೆಂಕಟೇಶ್ ಆಸ್ತಿ ವಿವರ ಸಲ್ಲಿಸದ ಸಚಿವರಾಗಿದ್ದಾರೆ. ಮಾಜಿ ಸಚಿವ ಕೆ.ಎನ್.ರಾಜಣ್ಣ, ಎಚ್.ಡಿ.ರೇವಣ್ಣ, ವಿಧಾನಸಭೆ ಸಚೇತಕ ಅಶೋಕ್ ಪಟ್ಟಣ್, ಮುಖ್ಯಮಂತ್ರಿಗಳ ಆರ್ಥಿಕ ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ, ಲಕ್ಷ್ಮಣ್ ಸವದಿ, ನಯನ ಮೋಟ್ಟಮ್ಮ, ಎನ್.ಎ.ಹ್ಯಾರೀಸ್, ದರ್ಶನ್ ಪುಟ್ಟಣಯ್ಯ, ರವಿಕುಮಾರ ಗೌಡ (ಗಣಿಗ) ಸೇರಿ 66 ಪ್ರಮುಖ ಸ್ಥಾನದಲ್ಲಿರುವ ಸಂಪುಟ ಸ್ಥಾನಮಾನ ಹೊಂದಿರುವ ಹುದ್ದೆಗಳನ್ನು ಅಲಂಕರಿಸಿರುವ ಕಾಂಗ್ರೆಸ್ ಮುಖಂಡರು ಆಸ್ತಿ ವಿವರ ಸಲ್ಲಿಸಿಲ್ಲ.
ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮದ್, ಅಡಗೂರು ಎಚ್.ವಿಶ್ವನಾಥ್, ಐವಾನ್ ಡಿಸೋಜಾ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶರವಣ, ಸೂರಜ್ ರೇವಣ್ಣ ಸೇರಿ 28 ಮೇಲ್ಮನೆ ಸದಸ್ಯರು ಆಸ್ತಿ ಘೋಷಿಸಿಲ್ಲ. ಸಚಿವ – ಶಾಸಕರು ಒಳಗೊಂಡಂತೆ 100 ಮಂದಿ ಮಂದಿ ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸದ ನಾಯಕರು.
ಆಸ್ತಿ ಘೋಷಿಸದ ಶಾಸಕರು
ಲಕ್ಷ್ಮಣ ಸಂಗಪ್ಪ ಸವದಿ, ಅಶೋಕ ಮಹಾದೇವಪ್ಪ ಪಟ್ಟಣ್, ಮೇಟಿ ಹುಲ್ಲಪ್ಪ ಯಮನಪ್ಪ, ಕಾಶಪ್ಪನವರ ವಿಜಯಾನಂದ, ಶಿವಶಂಕರಪ್ಪ, ಕಟಕದೊಂಡ ವಿಠಲ ದೊಂಡಿಬಾ, ಎಂ.ವೈ. ಪಾಟೀಲ್, ಕನೀಜ್ ಫಾತಿಮಾ, ಶರಣು ಸಲಗರ, ಸಿದ್ದು ಪಾಟೀಲ್, ಬಸನಗೌಡ ತುರುವಿಹಾಳ, ಜಿ.ಜನಾರ್ದನ ರೆಡ್ಡಿ, ಬಸವರಾಜ್ ರಾಯರೆಡ್ಡಿ, ರಾಘವೇಂದ್ರ ಬಸವರಾಜ ಹಿಟ್ನಾಳ್, ಗುರುಪಾದಗೌಡ ಸಂಗನಗೌಡ ಪಾಟೀಲ್,ಎನ್.ಹೆಚ್. ಕೋನರೆಡ್ಡಿ, ವಿನಯ್ ಕುಲಕರ್ಣಿ, ಸತೀಶ್ ಕೃಷ್ಣ ಸೈಲ್, ದಿನಕರ್ ಕೇಶವ ಶೆಟ್ಟಿ , ಬಸವರಾಜ ನೀಲಪ್ಪ ಶಿವಣ್ಣನವರ್.
ಜೆ.ಎನ್. ಗಣೇಶ್, ಎನ್.ವೈ. ಗೋಪಾಲಕೃಷ್ಣ, ಎಂ.ಚಂದ್ರಪ್ಪ, ಲತಾ ಮಲ್ಲಿಕಾರ್ಜುನ, ಕೆ.ಎಸ್ ಬಸವಂತಪ್ಪ, ಶಾರದಾ ಪೂರ್ಯ ನಾಯ್ಕ್, ಬಿ.ಕೆ.ಸಂಗಮೇಶ್ವರ್, ಟಿ.ಡಿ.ರಾಜೇಗೌಡ, ನಯನಾ ಮೊಟಮ್ಮ, ಆನಂದ ಕೆ.ಎಸ್, ಸಿ.ಬಿ.ಸುರೇಶ್ ಬಾಬು, ಡಾ. ಹೆಚ್.ಡಿ.ರಂಗನಾಥ್, ಬಿ. ಸುರೇಶ್ ಗೌಡ, ಹೆಚ್.ವಿ.ವೆಂಕಟೇಶ್, ಕೆ.ಹೆಚ್ ಪುಟ್ಟಸ್ವಾಮಿ ಗೌಡ, ಎಸ್.ಎನ್.ಸುಬ್ಬಾರೆಡ್ಡಿ, ಬಿ.ಎನ್.ರವಿಕುಮಾರ್, ಜಿ.ಕೆ.ವೆಂಕಟಶಿವ ರೆಡ್ಡಿ, ಸಮೃದ್ಧಿ ವಿ ಮಂಜುನಾಥ್, ರೂಪಕಲಾ ಎಂ,ಕೆ.ವೈ.ನಂಜೇಗೌಡ, ಕೆ.ಗೋಪಾಲಯ್ಯ, ಎ.ಸಿ.ಶ್ರೀನಿವಾಸ್, ಎನ್.ಎ.ಹ್ಯಾರೀಸ್, ಬಿ.ಶಿವಣ್ಣ ಶ್ರೀನಿವಾಸಯ್ಯ ಎನ್, ಹೆಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್.
ಉದಯ ಕೆ.ಎಂ, ದರ್ಶನ್ ಪುಟ್ಟಣ್ಣಯ್ಯ, ರವಿಕುಮಾರ್ ಗೌಡ(ಗಣಿಗ), ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಸಿ.ಎನ್.ಬಾಲಕೃಷ್ಣ, ಹೆಚ್.ಕೆ.ಸುರೇಶ್ (ಹುಲ್ಲಹಳ್ಳಿ ಸುರೇಶ್), ಹೆಚ್.ಡಿ ರೇವಣ್ಣ, ಎ.ಮಂಜು, ಸಿಮೆಂಟ್ ಮಂಜು, ಡಾ.ಭರತ್ ಶೆಟ್ಟಿ ವೈ, ಭಾಗೀರಥಿ ಮುರುಳ್ಯ, ರವಿಶಂಕರ್ ಡಿ, ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಎಂ.ಆರ್ ಮಂಜುನಾಥ್, ಎ.ಆರ್.ಕೃಷ್ಣ ಮೂರ್ತಿ, ಸಿ. ಪುಟ್ಟರಂಗಶೆಟ್ಟಿ.
ಆಸ್ತಿ ವಿವರ ಸಲ್ಲಿಸದ ವಿಧಾನ ಪರಿಷತ್ ಸದಸ್ಯರು
ಸಲೀಂ ಅಹಮದ್, ಅಡಗೂರು ಹೆಚ್ ವಿಶ್ವನಾಥ್, ಕೆ. ಅಬ್ದುಲ್ ಜಬ್ಬರ್, ಎಂ.ಎಲ್.ಅನಿಲ್ ಕುಮಾರ್, ಬಸನಗೌಡ ಬಾದರ್ಲಿ, ಗೋವಿಂದರಾಜು, ಐವನ್ ಡಿ’ಸೋಜಾ, ಟಿ.ಎನ್. ಜವರಾಯಿ ಗೌಡ, ಸಿ.ಎನ್.ಮಂಜೇಗೌಡ, ಎಂ.ಜಿ.ಮುಳೆ, ಎನ್.ನಾಗರಾಜ್ (ಎಂಟಿಬಿ), ನಸೀರ್ ಅಹ್ಮದ್, ಕೆ.ಎಸ್.ನವೀನ್, ಪ್ರದೀಪ್ ಶೆಟ್ಟರ್, ಪಿಹೆಚ್ ಪೂಜಾರ್, ರಾಜೇಂದ್ರ ರಾಜಣ್ಣ, ರಾಮೋಜಿಗೌಡ, ಶಶೀಲ್ ಜಿ ನಮೋಶಿ, ಎಸ್.ವಿ.ಸಂಕನೂರ, ಸುನೀಲ್ ವಲ್ಯಾಪುರ್, ಸುನೀಲ್ ಗೌಡ ಪಾಟೀಲ್, ವೈ. ಎಂ. ಸತೀಶ್, ಸೂರಜ್ ರೇವಣ್ಣ, ಹೆಚ್.ಪಿ.ಸುಧಾಮ್ ದಾಸ್, ತಿಪ್ಪಣ್ಣಪ್ಪ ಕಮಕನೂರ ಡಾ.ಡಿ. ತಿಮ್ಮಯ್ಯ ಹಾಗೂ ಕೆ.ವಿವೇಕಾನಂದ.


