Friday, September 27, 2024
Google search engine
Homeತಾಜಾ ಸುದ್ದಿಬಾಲಿವುಡ್ ಖ್ಯಾತ ಗಾಯಕಿ ಆಲ್ಕಾ ಯಾಗ್ನಿಕ್ ಗೆ ವಿಚಿತ್ರ ಶ್ರವಣ ಕಾಯಿಲೆ!

ಬಾಲಿವುಡ್ ಖ್ಯಾತ ಗಾಯಕಿ ಆಲ್ಕಾ ಯಾಗ್ನಿಕ್ ಗೆ ವಿಚಿತ್ರ ಶ್ರವಣ ಕಾಯಿಲೆ!

ಬಾಲಿವುಡ್ ಖ್ಯಾತ ಗಾಯಕಿ ಆಲ್ಕಾ ಯಾಗ್ನಿಕ್ ತಮಗೆ ವಿಚಿತ್ರವಾದ ಶ್ರವಣ ದೋಷದ ಕಾಯಿಲೆ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಆಲ್ಕಾ ಯಾಗ್ನಿಕ್ ತಮಗೆ ವಿಚಿತ್ರ ಕಾಯಿಲೆ ಇರುವ ವಿಷಯವನ್ನು ಹಂಚಿಕೊಂಡಿದ್ದು, ಬೆಳಿಗ್ಗೆ ಎದ್ದಾಗ ನನಗೆ ಒಮ್ಮೊಮ್ಮೆ ಏನೂ ಕೇಳಿಸುವುದೇ ಇಲ್ಲ ಎಂದರು.

ನಾನು ಕೆಲವು ವಾರದ ಹಿಂದೆ ವಿಮಾನದಲ್ಲಿ ಪ್ರಯಾಣಿಸುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಏನೂ ಕೇಳಿಸಲಿಲ್ಲ. ಇದರಿಂದ ನಾನು ಒಂಟಿಯಾಗಿ ಇರಲು ಬಯಸಿದ್ದೆ. ನಾನು ಯಾಕೆ ಹೊರಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಆದರೆ ಎಷ್ಟು ದಿನ ಅಂತ ಈ ವಿಷಯ ಮುಚ್ಚಿಡಲಿ ಎಂಬ ಕಾರಣಕ್ಕೆ ನನ್ನ ಎಲ್ಲಾ ಅಭಿಮಾನಿಗಳು, ಸ್ನೇಹಿತರು, ಕುಟುಂದವರಿಗೆ ತಿಳಿಸುವ ಉದ್ದೇಶದಿಂದ ಈ ಪೋಸ್ಟ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನನ್ನ ವೈದ್ಯರಿಗೆ ಈ ವಿಷಯ ಹೇಳಿದಾಗ ಅವರು ಪರಿಶೀಲಿಸಿ ವೈರಸ್ ಸೋಂಕಿನಿಂದ ಈ ರೀತಿ ದಿಢೀರನೆ ಕಿವಿ ಕೇಳಿಸದ ಶ್ರವಣ ದೋಷ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಹಾಗಾಗಿ ನಾನು ಕೆಲವು ಸಮಯ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಆಲ್ಕಾ ಯಾಗ್ನಿಕ್ ವಿವರಿಸಿದ್ದಾರೆ.

ನಾನು ಶ್ರೀಘ್ರದಲ್ಲೇ ಗುಣಮುಖವಾಗುವ ವಿಶ್ವಾಸವಿದೆ. ನನ್ನ ಅಭಿಮಾನಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ ದೊಡ್ಡ ಶಬ್ಧ ಕೇಳಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಎಲ್ಲರನ್ನೂ ಭೇಟಿ ಮಾಡಲು ಕಾತರದಿಂದ ಕಾಯುತ್ತಿದ್ದೇನೆ. ನಿಮ್ಮ ಎಲ್ಲರ ಪ್ರಾರ್ಥನೆ ಇರಲಿ ಎಂದು ಆಶಿಸುತ್ತೇನೆ ಎಂದು ಅವರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments