Tuesday, September 17, 2024
Google search engine
Homeಆರೋಗ್ಯಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ ಸಮಸ್ಯೆಗೆ ಈ ಆಹಾರ ಪದ್ಧತಿ ಅನುಸರಿಸಿ!

ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ ಸಮಸ್ಯೆಗೆ ಈ ಆಹಾರ ಪದ್ಧತಿ ಅನುಸರಿಸಿ!

ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಆಗಿರುವ ಬದಲಾವಣೆಗಳಿಂದ ಜೀರ್ಣ ಕ್ರಿಯೆ ಸಮಸ್ಯೆ, ಮಲಬದ್ಧತೆ ಹೆಚ್ಚಿನವರನ್ನು ಕಾಡುತ್ತಿದೆ. ಆಹಾರದಲ್ಲಿ ಅಗತ್ಯ ಪ್ರಮಾಣದ ನಾರಿನಾಂಶದ ಕೊರತೆ, ತೇವಾಂಶ ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಮಲಬದ್ಧತೆಗೆ ಸಾಮಾನ್ಯ ಕಾರಣ ಎನ್ನಲಾಗುತ್ತದೆ.

ಮಲಬದ್ಧತೆಯ ಸಮಸ್ಯೆಗೆ ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು. ಅದರಲ್ಲಿ ನೆಲ್ಲಿಕಾಯಿಯೂ ಒಂದು, ಇದರಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ವಿಟಮಿನ್ ಸಿ ಮತ್ತು ನಾರಿನಾಂಶವು ಇದ್ದು ಕರುಳಿನ ಚಟುವಟಿಕೆ ವೃದ್ಧಿಸಿ ಮಲಬದ್ದತೆ ನಿವಾರಿಸುವುದು. ಹಸಿ ನೆಲ್ಲಿಕಾಯಿ ಸೇವನೆ, ನೆಲ್ಲಿಕಾಯಿ ಜ್ಯೂಸ್ ನ್ನು ಸೇವನೆ ಮಾಡಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಪಪ್ಪಾಯಿ ಹಣ್ಣಿನ ಸೇವನೆ ಮಲಬದ್ಧತೆ ನಿವಾರಣೆಗೆ ಪರಿಣಾಮಕಾರಿ ಔಷಧಿ. ನಾರಿನಾಂಶ ಅಧಿಕವಾಗಿ ಇರುವ ಕಾರಣ ಕರುಳಿನ ಕ್ರಿಯೆಯು ಸರಾಗವಾಗುವುದು. ಒಣಗಿದ ಅಂಜೂರದಲ್ಲಿ ಒಳ್ಳೆಯ ನಾರಿನಾಂಶ ಇದೆ. ಅಂಜೂರವನ್ನು ರಾತ್ರಿ ವೇಳೆ ನೆನೆಯಲು ಹಾಕಬೇಕು ಮತ್ತು ಬೆಳಗ್ಗೆ ಎದ್ದ ಬಳಿಕ ಸೇವನೆ ಮಾಡಿದರೆ ಆಗ ಇದರಿಂದ ಕರುಳಿನ ಚಟುವಟಿಕೆ ಉತ್ತಮವಾಗುವುದು.  ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಮತ್ತು ಖನಿಜಾಂಶಗಳು ಉತ್ತಮ ಪ್ರಮಾಣದಲ್ಲಿದೆ.

ತ್ರಿ.ಫಲ ಚೂರ್ಣದಲ್ಲಿ ನೆಲ್ಲಿಕಾಯಿ, ಬಿಭಿತಕಿ ಮತ್ತು ಹರಿತಕಿಯು ಇದೆ. ಇದು ನಿರ್ವಿಷಕಾರಿ ಮತ್ತು ಕರುಳನ್ನು ಶುಚಿ ಮಾಡುವ ಗುಣ ಹೊಂದಿದೆ. ತ್ರಿಫಲ ಚೂರ್ಣದ ಬಳಕೆಯಿಂದ ಮಲಬದ್ಧತೆ ಕಡಿಮೆ ಆಗುವುದು. ಒಂದು ಚಮಚ ತ್ರಿಫಲ ಚೂರ್ಣವನ್ನು ಬಿಸಿ ನೀರಿಗೆ ಹಾಕಿ, ರಾತ್ರಿ ಮಲಗುವ ಮೊದಲು ಇದನ್ನು ಸೇವಿಸಬೇಕು.

ಅಗಸೆ ಬೀಜದಲ್ಲಿ ಅತ್ಯಧಿಕ ಪ್ರಮಾಣದ ನಾರಿನಾಂಶ ಮತ್ತು ಒಮೆಗಾ-3 ಕೊಬ್ಬಿನಾಮ್ಲವಿದ್ದು, ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿ ಮಲಬದ್ಧತೆ ನಿವಾರಣೆ ಮಾಡುವುದು. ಅಗಸೆ ಬೀಜವನ್ನು ಸ್ಮೂಥಿ, ಮೊಸರು ಅಥವಾ ಬೇರೆ ರೀತಿಯಲ್ಲಿ ಬಳಕೆ ಮಾಡಬಹುದು.

ಮೊಸರಿನಲ್ಲಿರುವ ಪ್ರೊಬಯೋಟಿಕ್ ಅಂಶವು ಜೀರ್ಣಕ್ರಿಯೆ ಉತ್ತಮಗೊಳಿಸುವುದು, ಆದರೆ ಹುಳಿ ಮೊಸರು ಸೇವನೆ ಬೇಡ, ಪಾಲಕ್‌ ಮತ್ತು ಬಸಳೆ ಸೊಪ್ಪು ಅತ್ಯಧಿಕ ನಾರಿನಾಂಶ, ವಿಟಮಿನ್ ಮತ್ತು ಖನಿಜಾಂಶ ಹೊಂದಿದ್ದು, ಮಲಬದ್ಧತೆ ತಡೆಯುವುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments