Home ತಾಜಾ ಸುದ್ದಿ Suryaghar ಸೂರ್ಯಘರ್ ಯೋಜನೆ ತರಬೇತಿಗೆ 2 ಲಕ್ಷ ತಂತ್ರಜ್ಞರಿಂದ ಅರ್ಜಿ ಆಹ್ವಾನ

Suryaghar ಸೂರ್ಯಘರ್ ಯೋಜನೆ ತರಬೇತಿಗೆ 2 ಲಕ್ಷ ತಂತ್ರಜ್ಞರಿಂದ ಅರ್ಜಿ ಆಹ್ವಾನ

ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜ್ಲಿ ಯೋಜನೆ (PMSGMBY)ಯಲ್ಲಿ 2 ಲಕ್ಷ ತಂತ್ರಜ್ಞರಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು ಅರ್ಜಿ ಆಹ್ವಾನಿಸಿದೆ.

by Editor
0 comments
suryaghar schheme

ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜ್ಲಿ ಯೋಜನೆ (PMSGMBY)ಯಲ್ಲಿ 2 ಲಕ್ಷ ತಂತ್ರಜ್ಞರಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು ಅರ್ಜಿ ಆಹ್ವಾನಿಸಿದೆ.

ಡಿಸ್ಕಾಂಗಳು ಈ ಯೋಜನೆಯಡಿ ಈಗಾಗಲೇ 40000 ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿವೆ. ಮುಂದಿನ 8 ತಿಂಗಳಲ್ಲಿ ಹೆಚ್ಚುವರಿ 2 ಲಕ್ಷ ತಂತ್ರಜ್ಞರಿಗೆ ತರಬೇತಿ ನೀಡಲಾಗುವುದು ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

50,000ಕ್ಕೂ ಹೆಚ್ಚು DISCOM ಇಂಜಿನಿಯರ್ಗಳು ಮೇಲ್ಛಾವಣಿ ಸೌರ ಸ್ಥಾವರಗಳ ಪರಿಶೀಲನೆ ಮತ್ತು ಕಮಿಷನ್ ಮಾಡಲು ಹಾಗೂ ನೆಟ್ ಮೀಟರ್ಗಳನ್ನು ಒದಗಿಸಲು ವಿಶೇಷ ತರಬೇತಿ ಸಹ ಪಡೆಯುತ್ತಿದ್ದಾರೆ.

90ಕ್ಕೂ ಅಧಿಕ ಡಿಸ್ಕಾಂಗಳು ಕಾರ್ಯ ನಿರ್ವಹಣೆ: ದೇಶದಲ್ಲಿ 90ಕ್ಕೂ ಹೆಚ್ಚು ಡಿಸ್ಕಾಂಗಳು ಬ್ಯಾಂಕ್ಗಳು ಮತ್ತು ಮಧ್ಯಸ್ಥಗಾರರನ್ನು ಸಂಯೋಜಿಸಲು ಅನುವಾಗುವಂತೆ ಐಟಿ ವ್ಯವಸ್ಥೆ ನಿರ್ಮಿಸುವಲ್ಲಿ ಕಾರ್ಯಾಚರಣೆ ನಡೆಸಿವೆ.

banner

ಯೋಜನೆ ಪ್ರಾರಂಭವಾದ ಬಳಿಕ ಮೇಲ್ಛಾವಣಿ ಸೌರ ಘಟಕ ಸ್ಥಾಪನೆ ಮಾಸಿಕವಾಗಿ ಹತ್ತು ಪಟ್ಟು ಹೆಚ್ಚಾಗುತ್ತಿವೆ. ೩ ತಿಂಗಳಲ್ಲಿ 10 ಲಕ್ಷ ಮೀರುವ ನಿರೀಕ್ಷೆಯಿದೆ. 2025ರ ಅಕ್ಟೋಬರ್ ವೇಳೆಗೆ 20 ಲಕ್ಷ, 2026ರ ಮಾರ್ಚ್ ವೇಳೆಗೆ 40 ಲಕ್ಷ ಮತ್ತು 2027ರ ಮಾರ್ಚ್ ವೇಳೆಗೆ ಒಂದು ಕೋಟಿ ಗುರಿ ತಲುಪುತ್ತದೆ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ವಿವರಣೆ ನೀಡಿದೆ.

9 ತಿಂಗಳಲ್ಲಿ 6.3 ಲಕ್ಷ ಸ್ಥಾಪನೆ: ಸೂರ್ಯ ಘರ್ ಯೋಜನೆ ಕೇವಲ 9 ತಿಂಗಳಲ್ಲಿ 6.3 ಲಕ್ಷ ಸೌರ ಮೇಲ್ಛಾವಣಿ ಸ್ಥಾಪಿಸಿದೆ. ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಅಸಾಧಾರಣ ಪ್ರಗತಿ ಪ್ರದರ್ಶಿಸಿವೆ.

4 ಲಕ್ಷ ಗ್ರಾಹಕರಿಗೆ ಸಬ್ಸಿಡಿ ಸಂದಾಯ: ನವೆಂಬರ್ 2024ರ ವೇಳೆಗೆ 4 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ 3,100 ರೂ. ಕೋಟಿಗೂ ಹೆಚ್ಚು ಸಬ್ಸಿಡಿ ಹಣ ವಿತರಿಸಲಾಗಿದೆ. ಮಾಸಿಕ ಸರಾಸರಿ 67,000 ಕುಟುಂಬಗಳು ಸಬ್ಸಿಡಿ ಪಡೆದಿವೆ. ಯೋಜನೆ ಅಳವಡಿಸಿಕೊಂಡ ಮನೆಗಳಿಗೆ 15 ದಿನಗಳಲ್ಲೇ ಸಬ್ಸಿಡಿ ಸಿಗುತ್ತಿರುವುದರಿಂದ ಗಣನೀಯ ಪ್ರಮಾಣದಲ್ಲಿ ಅರ್ಜಿಗಳು ಹರಿದು ಬರುತ್ತಿವೆ. ಈಗಾಗಲೇ ಶೇ.28ರಷ್ಟು ಕುಟುಂಬಗಳು ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿವೆ ಎಂದು ಇಂಧನ ಸಚಿವಾಲಯ ಮಾಹಿತಿ ನೀಡಿದೆ.

ಜನ್ ಸಮರ್ಥ್ ಪೋರ್ಟಲ್: ಸೂರ್ಯ ಘರ್ ಯೋಜನೆಯಡಿ ವಿದ್ಯುತ್ ಮಾರಾಟಗಾರರನ್ನು ಪ್ರೋತ್ಸಾಹಿಸಲು 3kW ವರೆಗಿನ ಸಿಸ್ಟಮ್ಗಳಿಗಾಗಿ “ಜನ್ ಸಮರ್ಥ್ ಪೋರ್ಟಲ್” ಆರಂಭಿಸಿದ್ದು, ಫಲಾನುಭವಿಗಳಿಗೆ ಇದು ಕೈಗೆಟುಕುವ ಹಣಕಾಸು ಸೌಲಭ್ಯ ಆಯ್ಕೆ ಮಾಡಿಕೊಳ್ಳಲು ಪೂರಕವಾಗಿದೆ.

ಡಿಜಿಟಲಿಕರಣ-ಗ್ರಾಹಕ ಪ್ರಕ್ರಿಯೆ ಸರಳೀಕರಣ: ಗ್ರಾಹಕರ ನೋಂದಣಿ ಪ್ರಕ್ರಿಯೆ ಸರಳಗೊಳಿಸಲಾಗಿದೆ. ಸೂರ್ಯ ಘರ್ ಯೋಜನೆ ನೋಂದಣಿಗೆ ಈ ಹಿಂದೆ, ಅರ್ಜಿದಾರರು ಬಹು ದಾಖಲೆಗಲೊಂದಿಗೆ ಡಿಸ್ಕಾಂ ಕಚೇರಿಗಳಿಗೆ ಅಲೆಯಬೇಕಿತ್ತು. ಈಗ ಆ ತಾಪತ್ರಯವಿಲ್ಲ. ಎಲ್ಲದನ್ನೂ ಡಿಜಿಟಲೀಕರಣಗೊಳಿಸುವ ಮೂಲಕ ಪ್ರಕ್ರಿಯೆ ಸರಳಗೊಳಿಸಲಾಗಿದೆ.

ಐದೇ ನಿಮಿಷದಲ್ಲಿ ಅರ್ಜಿ ಸಲ್ಲಿಸಿ: ಸೂರ್ಯ ಘರ್ ಯೋಜನೆ ಆಕಾಂಕ್ಷಿಗಳು ವೆಬ್ ಸೈಟ್ ಅಲ್ಲಿ ನೇರವಾಗಿ ಮತ್ತು ಅಷ್ಟೇ ತ್ವರಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. www.pmsuryaghar.gov.in ನಲ್ಲಿ ಈಗ ಐದೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ತಮ್ಮ ಮೇಲ್ಛಾವಣಿಯನ್ನು ನೋಡಲು ಮತ್ತು ಮೇಲ್ಛಾವಣಿಯ ಸೌರವ್ಯೂಹದ ಸಾಮರ್ಥ್ಯವನ್ನು ಯೋಜಿಸಲು ಪೋರ್ಟಲ್ನ ಜಿಐಎಸ್ ವೈಶಿಷ್ಟ್ಯವನ್ನು ಸಹ ಬಳಸಬಹುದು. ಅಲ್ಲದೇ, ಶೇ.7ರ ಬಡ್ಡಿ ದರದಲ್ಲಿ ಸಾಲವನ್ನು ಸಹ ಈ ಪೋರ್ಟಲ್ನಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅನುಸ್ಥಾಪನೆ ನಂತರ ವಿವರಗಳನ್ನು ನಿಮಿಷಗಳಲ್ಲಿ ಅಪ್ಲೋಡ್ ಮಾಡಬಹುದು.
ಪೋರ್ಟಲ್ ಸ್ವಯಂ ಚಾಲಿತವಾಗಿ ಡಿಸ್ಕಾಂಗೆ ಪರಿಶೀಲಿಸಲು ತಿಳಿಸುತ್ತದೆ. ನಂತರ ಅರ್ಜಿದಾರರು ಪೋರ್ಟಲ್ನಲ್ಲಿ ಸಬ್ಸಿಡಿ ಪಡೆದುಕೊಳ್ಳಬಹುದು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಮೈಸೂರು ಚಾಮುಂಡೇಶ್ವರಿ ಉಡುಗೊರೆ ಕಾಳಸಂತೆಯಲ್ಲಿ ಮಾರಾಟ: ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಕೊಡಗು-ಹಾಸನ ಬಳಿ ಆನೆಗಳ ವಿಹಾರಧಾಮ ಸ್ಥಾಪನೆ: ಸಚಿವ ಈಶ್ವರ್ ಖಂಡ್ರೆ ಘೋಷಣೆ World news 1500 ಕ್ರಿಮಿನಲ್ ಗಳಿಗೆ ಕ್ಷಮಾದಾನ ಘೋಷಿಸಿದ ಜೋ ಬಿಡೈನ್! 22,000 ಕೋಟಿ ವೆಚ್ಚದಲ್ಲಿ Su-30 ಫೈಟರ್ ಜೆಟ್ಸ್, ಕೆ-9 ಹೌಥಿಜೆರ್ಸ್ ಖರೀದಿಗೆ ಕೇಂದ್ರ ಸಂಪುಟ ಅಸ್ತು! Cricket ರಹಾನೆ-ಶಾ ಮಿಂಚಿನಾಟ: ವಿಶ್ವದಾಖಲೆ ಬರೆದ ಮುಂಬೈ! 18 ವರ್ಷದ ಭಾರತದ ಗುಕೇಶ್ ವಿಶ್ವ ಚೆಸ್ ಚಾಂಪಿಯನ್! ಪತ್ನಿ ಹಾರಿದ ಬಾವಿಗೆ ಹಾರಿ ಪತಿ ಆತ್ಮಹತ್ಯೆ: ಸಾವಿನಲ್ಲೂ ಒಂದಾದ ದಂಪತಿ! ಬಿಜೆಪಿ ಮುಖಂಡ ಯತ್ನಾಳ್, ತೇಜಸ್ವಿ ಸೂರ್ಯ ಎಫ್ ಐಆರ್ ರದ್ದು! ಸತೀಶ್ ಜಾರಕಿಹೊಳಿಗೆ ಬಿಗ್ ರಿಲೀಫ್: ‘ಹಿಂದೂ ಪದ ಅಶ್ಲೀಲ’ ಹೇಳಿಕೆಯ ಕೇಸು ರದ್ದುಗೊಳಿಸಿದ ಹೈಕೋರ್ಟ್ BREAKING ಸಚಿವ ಈಶ್ವರ್ ಖಂಡ್ರೆ ಕಚೇರಿ ಮುಂದೆ ವಿಷ ಸೇವಿಸಿ ರೈತರಿಂದ ಆತ್ಮಹತ್ಯೆಗೆ ಯತ್ನ!