ಕಣ್ಣಿಗೆ ಖಾರದ ಪುಡಿ ಎರಚಿ ಕಳ್ಳತನಕ್ಕೆ ಯತ್ನಿಸಿದ ಮಹಿಳೆಗೆ ಚಿನ್ನದಂಗಡಿ ಮಾಲೀಕ ಕೇವಲ 20 ಸೆಕೆಂಡ್ ನಲ್ಲಿ 17 ಬಾರಿ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಜರಾತ್ ರಾಜಧಾನಿ ಅಹ್ಮದಾಬಾದ್‌ನ ರಾಣಿಪ್ ಪ್ರದೇಶದ ನಕ್ದಂಡ್ ಆಭರಣ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ಆಭರಣ ಖರೀದಿ ನೆಪದಲ್ಲಿ ಮುಸುಕುಧಾರಿ ಮಹಿಳೆ ಅಂಗಡಿ ಮಾಲೀಕನ ಜೊತೆ ಮಾತನಾಡುತ್ತಿದ್ದಂತೆ ಆತನ ಕಣ್ಣಿಗೆ ಖಾರದ ಪುಡಿ ಎರಚಿದ್ದಾಳೆ. ಕೂಡಲೇ ಎಚ್ಚೆತ್ತ ಅಂಗಡಿ ಮಾಲೀಕ ಆಕೆಯ ಕೈ ಹಿಡಿದು ರಪ್ಪರಪ್ಪನೆ ಕಪಾಳಕ್ಕೆ ಸತತವಾಗಿ ಬಾರಿಸಿದ್ದಾನೆ.
ಅಂಗಡಿ ಮಾಲೀಕ ಕೇವಲ 20 ಸೆಕೆಂಡ್ ನಲ್ಲಿ 17 ಬಾರಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ಮಹಿಳೆ ಪರಾರಿಯಾಗಲು ಯತ್ನಿಸಿದರೂ ಆಕೆಯನ್ನು ಹಿಂಬಾಲಿಸಿದ ಮಾಲೀಕ ಹಿಡಿಯಲು ಯತ್ನಿಸಿದ್ದಾನೆ. ಆದರೆ ಆಕೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮಹಿಳೆ ಕಣ್ಣಿಗೆ ಖಾರದಪುಡಿ ಎರಚಿದ್ದು ಹಾಗೂ ಮಾಲೀಕ ಹಲ್ಲೆ ಮಾಡಿದ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ರಾನಿಪ್ ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ರಾಣಿಪ್ ಪೊಲೀಸ್ ಠಾಣೆಯ ಪಿಐ ಕೇತನ್ ವ್ಯಾಸ್ ಹೇಳಿದ್ದಾರೆ.
ಆಭರಣ ವ್ಯಾಪಾರಿ ದೂರು ದಾಖಲಿಸಲು ನಿರಾಕರಿಸುತ್ತಿದ್ದರೂ ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಹಿಳೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಕಣ್ಣಿಗೆ ಖಾರದ ಪುಡಿ ಎರಚಿ ಕಳ್ಳತನಕ್ಕೆ ಯತ್ನಿಸಿದ ಮಹಿಳೆಗೆ ಚಿನ್ನದಂಗಡಿ ಮಾಲೀಕ ಕೇವಲ 20 ಸೆಕೆಂಡ್ ನಲ್ಲಿ 18 ಬಾರಿ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.#Ahmedabad #jewelleryshop #robbery #ViralVideo
Read more here: https://t.co/zhfdffFALr pic.twitter.com/W6D7gnIaxH
— kannadaprabha (@KannadaPrabha) November 7, 2025


