ರಸ್ತೆ ಸುರಕ್ಷತೆ ಖಾತರಿ ಪಡಿಸಲು ಸಾರಿಗೆ ನಿಯಮಗಳ ದೋಷಗಳನ್ನು ಸರಿಪಡಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ 6 ತಿಂಗಳ ಗುಡುವು ನೀಡಿದೆ.
ತಳಮಟ್ಟದಲ್ಲಿ ನಿಯಮಗಳನ್ನು ಜಾರಿಗೆ ತರುವುದರ ಮೇಲೆ ರಸ್ತೆ ಸುರಕ್ಷತೆ ಅಡಗಿದೆ ಎಂಬುದನ್ನು ಅರಿತ ಸುಪ್ರೀಂಕೋರ್ಟ್ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಸೂಚಿಸಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲೇ ಇತರೆ ಸಂಪರ್ಕ ರಸ್ತೆಗಳ ಗುಣಮಟ್ಟ ಹಾಗೂ ವಿನ್ಯಾಸ ಮುಂತಾದವುಗಳ ಬಗ್ಗೆಯೂ ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿದೆ.
ನ್ಯಾಯಮೂರ್ತಿ ಜೆಪಿ ಪರ್ದಿವಾಲಾ ನೇತೃತ್ವದ ಏಕಸದಸ್ಯ ಪೀಠ ಮಂಗಳವಾರ ಈ ಆದೇಶ ಹೊರಡಿಸಿದ್ದು, ಸಾರ್ವಜನಿಕ ರಸ್ತೆಗಳ ವಾಹನ ಸಂಚಾರ ಮಾರ್ಗಸೂಚಿಗಳನ್ನು ಪ್ರಕಟಿಸಬೇಕು ಹಾಗೂ ಯಾವ ವಾಹನಗಳಿಗೆ ಯಾವ ಮಾರ್ಗ ನಿಷೇಧಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ತಿಳಿಸಿದ್ದಾರೆ.


