ಬೆಂಗಳೂರಿನ ಸ್ಟಾರ್ಟ್ ಕಂಪನಿ ಅಭಿವೃದ್ಧಿಪಡಿಸಿದ ದೇಶದ ಅತ್ಯಂತ ಶಕ್ತಿಶಾಲಿ ಬಹುಮುಖಿ ರೋಬೊ ಡಾಗ್ ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಎಕ್ಸ್ ಪೋ 2026ರಲ್ಲಿ ಗಮನ ಸೆಳೆಯುತ್ತಿದೆ.
ಚೀನಾದ ರೋಬೊ ಡಾಗ್ ನಮ್ಮದು ಎಂದು ಉತ್ತರ ಪ್ರದೇಶದ ವಿಶ್ವವಿದ್ಯಾಲಯ ಪ್ರದರ್ಶನ ಮಾಡಿ ವಿವಾದ ಸೃಷ್ಟಿಯಾದ ನಂತರ ಭಾರತದ ತಂತ್ರಜ್ಞಾನದ ಬಗ್ಗೆ ಅನುಮಾನ ಮೂಡಿತ್ತು. ಆದರೆ ಇದೀಗ ಬೆಂಗಳೂರಿನ ಸ್ಟಾರ್ಟಪ್ ಕಂಪನಿ ಅಭಿವೃದ್ಧಿಪಡಿಸಿದ ರೊಬೊ ಡಾಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
https://twitter.com/GeneralAutonomy/status/2024086721755779419
ಬೆಂಗಳೂರಿನ ಇಂಜಿನಿಯರ್ ಗಳು ಸ್ಥಳೀಯವಾಗಿ ಕೇವಲ ತಂತ್ರಜ್ಞಾನ ಜೋಡಣೆ ಮಾತ್ರ ಮಾಡಿಲ್ಲ. ಬದಲಾಗಿ ಇದರ ಸಂಪೂರ್ಣ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಇದರ ಕಾರ್ಯವೈಖರಿ ನೋಡಿದ ನಂತರ ಇದು ದೇಶದ ಅತ್ಯಂತ ಪ್ರಭಾವಶಾಲಿ ರೊಬೊ ಡಾಗ್ ಎಂದು ಕರೆಯಲಾಗಿದೆ.
ರೊಬೊ ಡಾಗ್ ಕಾರ್ಯಕ್ಷಮತೆ ಬಗ್ಗೆ ವ್ಯಾಪಕ ಟೀಕೆ ಹಾಗೂ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯ್ಲಿ ಜನರಲ್ ಅಟೊನೊಮಿ ಕಂಪನಿ ಟ್ವೀಟ್ ಮಾಡಿ, ಸಾಕು ಮಾಡಿ. ಈ ರೊಬೊ ಕೇವಲ ಜೋಡಿಸಿದ್ದು ಮಾತ್ರವಲ್ಲ, ಸಂಪೂರ್ಣ ಅಭಿವೃದ್ಧಿ ಪಡಿಸಲಾಗಿದೆ. ಇದು ಭಾರತದ್ದು, ಭಾರತೀಯರದ್ದು. ನಮ್ಮ ದೇಶ, ನಮ್ಮ ಜನರಿಗಾಗಿ ಮಾಡಿದ್ದೇವೆ. ದೇಶದ ಅತ್ಯಂತ ಪ್ರಭಾವಶಾಲಿ ರೊಬೊ ಡಾಗ್ ಆಗಿದೆ ಎಂದು ಹೇಳಿಕೊಂಡಿದೆ.



