Saturday, November 23, 2024
Google search engine
Homeಜಿಲ್ಲಾ ಸುದ್ದಿಕುಮಾರಸ್ವಾಮಿ ಕರಿಯಾ ಅಂತ ಹೇಳಿದ್ದಕ್ಕೆ ಕ್ಷಮೆಯಾಚಿಸಿದ ಸಚಿವ ಜಮೀರ್ ಅಹ್ಮದ್

ಕುಮಾರಸ್ವಾಮಿ ಕರಿಯಾ ಅಂತ ಹೇಳಿದ್ದಕ್ಕೆ ಕ್ಷಮೆಯಾಚಿಸಿದ ಸಚಿವ ಜಮೀರ್ ಅಹ್ಮದ್

Zameer Ahmed Khan, H.D. Kumaraswamy, Kariya, apology, Karnataka housing minister, political controversy, Kannada news, political apology, Karnataka news

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯಾ ಎಂದು ಕರೆದಿದ್ದಕ್ಕೆ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಹೆಳಿದ್ದಾರೆ.

hd kumarswamy
hd kumarswamy

ಮೈಸೂರಿನಲ್ಲಿ ಮಂಗಳವಾರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಹಾಗೂ ನಾನು 24 ಗಂಟೆಯಲ್ಲಿ 16 ತಾಸು ಜತೆಗೆ ಇದ್ದ ಆತ್ಮೀಯರು. ಈ ಕಾರಣದಿಂದಲೇ ಅವರು ನನ್ನನ್ನು ಕುಳ್ಳ ಎನ್ನುತ್ತಿದ್ದರೂ ನಾನು ಅವರನ್ನು ಕರಿಯಣ್ಣ ಎನ್ನುತ್ತಿದ್ದೇ ಅಷ್ಟೇ. ಇಂದು ವಿಶೇಷವಾಗಿ ಎನೂ ಕರೆದಿಲ್ಲ ಹಿಂದಿನಿಂದಲೂ ಹಾಗೇ ಕರೆಯುವ ಆತ್ಮೀಯತೆ ನಮ್ಮಿಬ್ಬರದ್ದಾಗಿದೆ. ಹಾಗೊಂದು ವೇಳೆ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದರು.

ಇನ್ನೂ ನನ್ನ ಹೇಳಿಕೆಯಿಂದ ಯಾವುದೇ ರೀತಿ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದರು. ವಕ್ಫ್ ಆಸ್ತಿ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಈಗಾಗಲೇ ಸಿಎಂ‌ ಕಚೇರಿಯಿಂದಲೇ ಅಧಿಕೃತ ಆದೇಶ ಹೊರಬಿದ್ದಿದ್ದು ಈ ಬಗ್ಗೆ ನಾನು ಪ್ರತಿಕ್ರಯಿಸಲ್ಲ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments