Sunday, December 7, 2025
Google search engine
Homeದೇಶಒಂದೇ ದಿನ 8 ಏರ್ ಇಂಡಿಯಾದ ಡ್ರೀಮ್ ಲೈನರ್ ವಿಮಾನ ಸಂಚಾರ ರದ್ದು

ಒಂದೇ ದಿನ 8 ಏರ್ ಇಂಡಿಯಾದ ಡ್ರೀಮ್ ಲೈನರ್ ವಿಮಾನ ಸಂಚಾರ ರದ್ದು

ಅಹಮದಾಬಾದ್ ವಿಮಾನ ದುರಂತ ನಡೆದ ನಂತರ ಒಂದೇ ದಿನ 8 ಏರ್ ಇಂಡಿಯಾ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ವಿಶೇಷ ಅಂದರೆ ಡ್ರೀಮ್ ಲೈನರ್ ಬೋಯಿಂಗ್ 787-8 ವಿಮಾನಗಳೇ ರದ್ದುಗೊಂಡಿರುವುದು.

ದೆಹಲಿ-ದುಬೈ (ಎಐ-915), ದೆಹಲಿ-ವಿಯೆನ್ನಾ (ಎಐ 153), ದೆಹಲಿ-ಪ್ಯಾರಿಸ್ (ಎಐ-143), ಅಹಮದಾಬಾದ್-ಲಂಡನ್ (ಎಐ 159), ಲಂಡನ್-ಅಮೃತಸರ (ಎಐ 170) ನಡುವಣ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.

ಡ್ರೀಮ್ ಲೈನರ್ ಆಪರೇಟಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಎಐ 315 ವಿಮಾನವನ್ನು ಪೈಲೆಟ್ ದಾರಿ ಮಧ್ಯೆದಲ್ಲೇ ಹಾಂಕಾಂಗ್ ನಿಂದ ವಾಪಸ್ ದೆಹಲಿಗೆ ವಿಮಾನ ಇಳಿಸಿದ್ದಾರೆ.

ಇದಕ್ಕೂ ಮುನ್ನ ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಮುಂಬೈ ನಡುವಣ ವಿಮಾನದಲ್ಲಿ ತಾಂತ್ರಿಕ ದೋಷದ ಕಾರಣ ಕೋಲ್ಕತಾದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಎಲ್ಲಾ ಪ್ರಯಾಣಿಕರನ್ನು ಮತ್ತೊಂದು ವಿಮಾನದ ಮೂಲಕ ಪ್ರಯಾಣ ಮುಂದುವರಿಸಲು ಅವಕಾಶ ನೀಡಲಾಗಿದೆ.

ಇದೇ ವೇಳೆ ಲುಫ್ತಾನ್ಸಾ- ಬ್ರಿಟಿಷ್ ಏರ್ ವೇಸ್ ಗೆ ಸೇರಿದ ಫ್ರಾಂಕ್ ಫ್ರುಟ್ -ಲಂಡನ್ ಮತ್ತು ಹೈದರಾಬಾದ್ – ಚೆನ್ನೈ ನಡುವಣ ವಿಮಾನ ಸಂಚಾರವನ್ನು ಕೂಡ ರದ್ದುಗೊಳಿಸಿ ಮೂಲ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಲಾಗಿದೆ.

ಇದಕ್ಕೂ ಮುನ್ನ ಕಾರ್ಯಾಚರಣೆಯಲ್ಲಿ ಕಂಡು ಬಂದ ದೋಷದ ಕಾರಣ ಅಹಮದಾಬಾದ್ ಮತ್ತು ಲಂಡನ್ ನಡುವೆ ಸಂಚರಿಸಬೇಕಿದ್ದ ಏರ್ ಇಂಡಿಯಾ ಎಐ159 ವಿಮಾನ ಸಂಚಾರವನ್ನು ಕೊನೆಯ ಗಳಿಗೆಯಲ್ಲಿ ರದ್ದುಗೊಳಿಸಲಾಗಿದೆ.

ನಾನು ಲಂಡನ್ ಗೆ ಹೊರಟ್ಟಿದ್ದೆ. ಆದರೆ ವಿಮಾನ ಸಂಚಾರವನ್ನು ಕೊನೆಯ ಗಳಿಗೆಯಲ್ಲಿ ರದ್ದು ಮಾಡಲಾಗಿದೆ ಎಂದು ಪ್ರಯಾಣಿಕರೊಬ್ಬರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಮಂಗಳವಾರ ಮಧ್ಯಾಹ್ನ 1.10ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದುಗೊಳಿಸಲಾಗಿಲ್ಲ. ಬದಲಾಗಿ ಪುನರ್ ಸಮಯ ನಿಗದಿ ಮಾಡಲಾಗಿದ್ದು, 3 ಗಂಟೆಗೆ ಹೊರಡಲಿದೆ ಎಂದು ಹೇಳಲಾಗಿದೆ. ಆದರೆ ವಿಮಾನ ಸಂಸ್ಥೆ 1.45ಕ್ಕೆ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದೆ.

ಅಹಮದಾಬಾದ್ ನಲ್ಲಿ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಸೇರಿದಂತೆ 274 ಮಂದಿ ಮೃತಪಟ್ಟ ಘಟನೆ ನಡೆದ ಕೆಲವೇ ದಿನಗಳಲ್ಲಿ ಇದೇ ಮಾರ್ಗದ ವಿಮಾನದಲ್ಲಿ ದೋಷ ಕಂಡು ಬಂದಿದ್ದು, ವಿಮಾನ ಸಂಚಾರ ರದ್ದುಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments