ನವದೆಹಲಿ: ಭಾರತಿ ಏರ್‌ಟೆಲ್ ಮತ್ತು ಆಪಲ್, ಎರಡೂ ಜೊತೆಗೂಡಿ ಏರ್‌ಟೆಲ್ ಗ್ರಾಹಕರಿಗಾಗಿ ಅತ್ಯಧಿಕ ಜನಪ್ರಿಯ ಆಪಲ್ ಟಿವಿ+ ಸ್ಟ್ರೀಮಿಂಗ್ ಸೇವೆಗಳು ಮತ್ತು ಆಪಲ್ ಮ್ಯೂಸಿಕ್ ತರಲು ಒಂದು ಕಾರ್ಯತಾಂತ್ರಿಕ ಪಾಲುದಾರಿಕೆ ಮಾಡಿಕೊಂಡಿದೆ.
999 ರೂ. ರಿಂದ ಆರಂಭವಾಗುವ ಎಲ್ಲಾ ಹೋಮ್ ವೈಫೈ ಪ್ಲಾನ್ ಗಳಲ್ಲಿ ಅನೇಕ ಸಾಧನಗಳಲ್ಲಿ ಆನ್ಲೈನ್ ಕಂಟೆಂಟ್ ನೋಡುವ ಆಯ್ಕೆಯೊಂದಿಗೆ ಆಪಲ್ ಟಿವಿ+ನ ಆಕರ್ಷಕ ಕಂಟೆಂಟ್ ನೋಡುವ ಅವಕಾಶ ಸಿಗುತ್ತದೆ. ಇದಲ್ಲದೆ, ರೂ. 999ಗಳ ಪೋಸ್ಟ್ ಪೇಯ್ಡ್ ಪ್ಲಾನ್ ಹೊಂದಿರುವ ಗ್ರಾಹಕರು ಸಹ ಆಪಲ್ ಟಿವಿ+ ನೋಡಬಹುದು ಮತ್ತು ಭಾರತೀಯ ಹಾಗೂ ಜಾಗತಿಕ ಸಂಗೀತ ಸೇರಿದಂತೆ ವಿಸ್ತೃತ ಕ್ಯಾಟಲಾಗ್ ಒಳಗೊಂಡಿರುವ ಆಪಲ್ ಮ್ಯೂಸಿಕ್ ಅನ್ನು ಸಹ ಉಚಿತವಾಗಿ 6 ತಿಂಗಳವರೆಗೆ ಆನಂದಿಸಬಹುದು.
ಆಪಲ್ ನೊಂದಿಗಿನ ಈ ಕಾರ್ಯತಾಂತ್ರಿಕ ಪಾಲುದಾರಿಕೆಯು ಏರ್‌ಟೆಲ್ ಗ್ರಾಹಕರಿಗೆ ಪ್ರೀಮಿಯಂ, ಡ್ರಾಮಾ ಮತ್ತು ಹಾಸ್ಯ ಸರಣಿಗಳು, ಸಾಕ್ಷ್ಯ ಚಿತ್ರಗಳು, ಅತ್ಯದ್ಭುತ ಡಾಕುಮೆಂಟರಿಗಳು, ಮಕ್ಕಳು ಹಾಗೂ ಕೌಟುಂಬಿಕ ಮನೋರಂಜನೆಯನ್ನು ನೋಡುವ ಅವಕಾಶ ನೀಡುತ್ತದೆ. ಇದಲ್ಲದೆ, ಇಂಗ್ಲಿಷ್, ಹಿಂದಿ, ಮತ್ತು ಹೆಚ್ಚಿನ ರೀತಿಯ ಅನೇಕ ಭಾಷೆಗಳಾದ್ಯಂತ ಸಾಟಿಯಿಲ್ಲದ ಆಡಿಯೋ ಅನುಭವವನ್ನು ನೀಡುವ ಆಪಲ್ ಮ್ಯೂಸಿಕ್ ಸಹ ಆನಂದಿಸಬಹುದಾಗಿದೆ.
ಭಾರತಿ ಏರ್‌ಟೆಲ್ ನ ಕನೆಕ್ಟೆಡ್ ಹೋಮ್ಸ್ ವಿಭಾಗದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮತ್ತು ಸಿಇಒ ಆಗಿರುವ ಸಿದ್ಧಾರ್ಥ್ ಶರ್ಮಾ ಅವರು ಮಾತನಾಡಿ, “ಆಪಲ್ ನೊಂದಿಗೆ ಜೊತೆಗೂಡಿ ಅವರ ಅತ್ಯಂತ ಜನಪ್ರಿಯ ವಿಡಿಯೋ ಮತ್ತು ಸಂಗೀತವನ್ನು ನಮ್ಮ ಗ್ರಾಹಕರಿಗಾಗಿ ತರಲು ಅವರೊಂದಿಗೆ ಮಾಡಿಕೊಳ್ಳುವ ಈ ಕ್ರಾಂತಿಕಾರಿ ಪಾಲುದಾರಿಕೆಯ ಬಗ್ಗೆ ನಾವು ಬಹಳ ಉತ್ಸುಕರಾಗಿದ್ದೇವೆ. ಈ ಸಹಯೋಗವು ನಮ್ಮ ಸಹಸ್ರಾರು ಹೋಮ್ ವೈಫೈ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರಿಗಾಗಿ ಅಸಾಧಾರಣ ಅವಕಾಶವನ್ನು ಒದಗಿಸುವ ಮೂಲಕ ಅವರಿಗೆ ಆಪಲ್ ನ ಪ್ರೀಮಿಯಂ ಕಂಟೆಂಟ್ ಕ್ಯಾಟಲಾಗ್ ಗೆ ಉಚಿತ ಪ್ರವೇಶವನ್ನು ಸಹ ನೀಡಲಿದೆ. ಗ್ರಾಹಕರ ಮನೋರಂಜನೆ ಅನುಭವಗಳಲ್ಲಿ ಹೊಸ ಮಾನದಂಡವನ್ನು ರಚಿಸುವ ಮೂಲಕ ಈ ಪಾಲುದಾರಿಕೆಯು ಕಂಟೆಂಟ್ ಬಳಕೆಯ ವಿಧಾನವನ್ನು ಹೊಸದಾಗಿ ಮರುವ್ಯಾಖ್ಯಾನಿಸುತ್ತದೆ ಎಂದು ನಮಗೆ ಭರವಸೆ ಇದೆ. ಒಟ್ಟಾಗಿ ನಾವು ನಮ್ಮ ಮೌಲ್ಯಯುತ ಗ್ರಾಹಕರಿಗಾಗಿ ಪ್ರೀಮಿಯಂ ಮನೋರಂಜನೆ ಪರಿಸರವ್ಯವಸ್ಥೆಯನ್ನು ಒದಗಿಸಲು ಉದ್ದೇಶಿಸಿದ್ದೇವೆ.” ಎಂದರು.
ಆಪಲ್ ಇಂಡಿಯಾದ ಕಂಟೆಂಟ್ ಮತ್ತು ಸೇವೆಗಳ ನಿರ್ದೇಶಕಿಯಾಗಿರುವ ಶಾಲಿನಿ ಪೊದ್ದಾರ್, “ಭಾರತದಾದ್ಯಂತ ಪ್ರೇಕ್ಷಕರಿಗಾಗಿ ಸಾಧ್ಯತೆಗಳನ್ನು ಮರುವ್ಯಾಖ್ಯಾನಗೊಳಿಸುತ್ತಾ ಸಹಸ್ರಾರು ಬಳಕೆದಾರರಿಗೆ ಅತ್ಯುತ್ತಮ ದರ್ಜೆಯ ಸಂಗೀತ ಸೇವೆ, ಪ್ರೀಮಿಯಂ ಟಿವಿ ಸರಣಿ ಮತ್ತು ಚಲನಚಿತ್ರಗಳನ್ನು ಒದಗಿಸಲು ಏರ್‌ಟೆಲ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದಕ್ಕಾಗಿ ನಮಗೆ ಬಹಳ ಸಂತೋಷವಾಗುತ್ತಿದೆ. ಈ ಪಾಲುದಾರಿಕೆಯು ಪ್ರತಿಯೊಬ್ಬರಿಗೂ ಏನಾದರೂ ನೋಡುವ ಅವಕಾಶದೊಂದಿಗೆ ನಮ್ಮ ಪ್ರಶಸ್ತಿ ವಿಜೇತ ಕಂಟೆಂಟ್, ಕಥೆಗಳು ಮತ್ತು ಮನೋರಂಜನೆಯನ್ನು ಸಿದ್ಧಪಡಿಸುವ ನಮ್ಮ ಕಾರ್ಯತಾಂತ್ರಿಕ ಗುರಿಯೊಂದಿಗೆ ಹೋಲುತ್ತದೆ.” ಎಂದರು.
ಈ ಪಾಲುದಾರಿಕೆಯೊಂದಿಗೆ, ಗ್ರಾಹಕರು ಎಲ್ಲಾ ಆಪಲ್ ಟಿವಿ+ ಒರಿಜಿನಲ್ ಸರಣಿಗಳು ಮತ್ತು ಚಲನಚಿತ್ರಗಳಿಗೆ ಜಾಹಿರಾತು-ಮುಕ್ತ ಪ್ರವೇಶ ಪಡೆಯುವ ಜೊತೆಗೆ “ಟೆಡ್ ಲಾಸ್ಸೊ,” “ಸೆವೆರೆನ್ಸ್,” “ದಿ ಮಾರ್ನಿಂಗ್ ಶೋ,” “ಸ್ಲೋ ಹಾರ್ಸಸ್” “ಸಿಲೋ,” “ಶ್ರಿಂಕಿಂಗ್” ಮತ್ತು “ಡಿಸ್ಕ್ಲೈಮರ್” ನಂತಹ ಜಾಗತಿಕ ಪ್ರಶಸ್ತಿ ವಿಜೇತ ಹಿಟ್ ಸರಣಿಗಳು ಹಾಗೂ “ವೂಲ್ಫ್ಸ್” ಮತ್ತು “ದಿ ಜಾರ್ಜ್” ನಂತಹ ಇತ್ತೀಚಿನ ಚಲನಚಿತ್ರಗಳನ್ನು ಸಹ ನೋಡಿ ಆನಂದಿಸಬಹುದು. ಇದಲ್ಲದೆ, ಗ್ರಾಹಕರು ಪ್ರಶಸ್ತಿ ವಿಜೇತ ಆಪಲ್ ಮ್ಯೂಸಿಕ್ ಅನ್ನು 6 ತಿಂಗಳವರೆಗೆ ಉಚಿತವಾಗಿ ಬಳಸಬಹುದು, ಇದು ಭಾರತೀಯ ಮತ್ತು ಜಾಗತಿಕ ಸಂಗೀತದ ಅತಿದೊಡ್ಡ ಸಂಗ್ರಹಗಳಲ್ಲಿ ಒಂದಾಗಿದ್ದು ಪರಿಣಿತರ ಕ್ಯುರೇಟೆಡ್ ಪ್ಲೇಲಿಸ್ಟ್ ಗಳು ಮತ್ತು ಕಲಾವಿದರ ಸಂದರ್ಶನಗಳನ್ನು ಹೊಂದಿದೆ. ಇದು ಆಪಲ್ ಮ್ಯೂಸಿಕ್ ರೇಡಿಯೋ ಜೊತೆಗೆ ಆಪಲ್ ಮ್ಯೂಸಿಕ್ ಸಿಂಗ್ ಮತ್ತು ಸಮಯ-ಸಿಂಕ್ ಮಾಡಿದ ಸಾಹಿತ್ಯ ಹಾಗೂ ಅದ್ಭುತ ಆಡಿಯೊ ಅನುಭವ ಮತ್ತು ಇಮ್ಮರ್ಸಿವ್ ಸ್ಪಾಟಿಯಲ್ ಆಡಿಯೊದಂತಹ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ಹೋಮ್ ವೈಫೈ ಪ್ಲಾನ್ಸ್:
ಪ್ಲಾನ್ಸ್ ವೇಗ ಜೊತೆಗಿನ ಟಿವಿ ಲಾಭಗಳು ಓಟಿಟಿ ಲಾಭಗಳು
ರೂ. 999 200 Mbps ವರೆಗೆ ಆಪಲ್ ಟಿವಿ+, ಜೀ5, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, 23+ ಓಟಿಟಿ ಗಳು ಮತ್ತು ಇನ್ನೂ ಅಧಿಕ
ರೂ. 1099 200 Mbps ವರೆಗೆ 350+ ಟಿವಿ ಚಾನೆಲ್ಸ್ (HD ಒಳಗೊಂಡಿದೆ) ಆಪಲ್ ಟಿವಿ+, ಜೀ5, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, 23+ ಓಟಿಟಿ ಗಳು ಮತ್ತು ಇನ್ನೂ ಅಧಿಕ
ರೂ. 1599 300 Mbps ವರೆಗೆ 350+ ಟಿವಿ ಚಾನೆಲ್ಸ್ (HD ಒಳಗೊಂಡಿದೆ)
ಆಪಲ್ ಟಿವಿ+, ಜೀ5, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, 23+ ಓಟಿಟಿ ಗಳು ಮತ್ತು ಇನ್ನೂ ಅಧಿಕ
ರೂ. 3999 1 Gbps ವರೆಗೆ 350+ ಟಿವಿ ಚಾನೆಲ್ಸ್ (HD ಒಳಗೊಂಡಿದೆ) ಆಪಲ್ ಟಿವಿ+, ಜೀ5, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, 23+ ಓಟಿಟಿ ಗಳು ಮತ್ತು ಇನ್ನೂ ಅಧಿಕ
ಪೋಸ್ಟ್ ಪೇಯ್ಡ್ ಪ್ಲಾನ್ಸ್:
ಪ್ಲಾನ್ಸ್ ಡೇಟಾ ಲಾಭ ಆಡ್-ಆನ್ ಸಿಮ್ ಗಳು OTT ಲಾಭಗಳು
ರೂ.999 150 GB 2 ಆಪಲ್ ಟಿವಿ+, ಆಪಲ್ ಮ್ಯೂಸಿಕ್, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, ಎಕ್ಸ್‌ಸ್ಟ್ರೀಮ್ ಪ್ಲೇ ಅನ್‌ಲಿಮಿಟೆಡ್ (20+ ಓಟಿಟಿಗಳು) ಮತ್ತು ಇನ್ನೂ ಅಧಿಕ
ರೂ. 1199 190 GB 3 ಆಪಲ್ ಟಿವಿ+, ಆಪಲ್ ಮ್ಯೂಸಿಕ್, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, ಎಕ್ಸ್‌ಸ್ಟ್ರೀಮ್ ಪ್ಲೇ ಅನ್‌ಲಿಮಿಟೆಡ್ (20+ ಓಟಿಟಿಗಳು) ಮತ್ತು ಇನ್ನೂ ಅಧಿಕ
ರೂ. 1399 240 GB 3 ಆಪಲ್ ಟಿವಿ+, ಆಪಲ್ ಮ್ಯೂಸಿಕ್, ನೆಟ್‌ಫ್ಲಿಕ್ಸ್ ಬೇಸಿಕ್ ಅನ್ಲಿಮಿಟೆಡ್, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, ಎಕ್ಸ್‌ಸ್ಟ್ರೀಮ್ ಪ್ಲೇ ಅನ್‌ಲಿಮಿಟೆಡ್ (20+ ಓಟಿಟಿಗಳು) ಮತ್ತು ಇನ್ನೂ ಅಧಿಕ
ರೂ. 1749 320 GB 4 ಆಪಲ್ ಟಿವಿ+, ಆಪಲ್ ಮ್ಯೂಸಿಕ್, ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್ ಅನ್ಲಿಮಿಟೆಡ್, ಅಮೆಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್, ಎಕ್ಸ್‌ಸ್ಟ್ರೀಮ್ ಪ್ಲೇ ಅನ್‌ಲಿಮಿಟೆಡ್ (20+ ಓಟಿಟಿಗಳು) ಮತ್ತು ಇನ್ನೂ ಅಧಿಕ
ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಜೀ5 ಮತ್ತು ಜಿಯೋ ಹಾಟ್‌ಸ್ಟಾರ್ ರೀತಿಯ ಪ್ರಮುಖ ಸ್ಟ್ರೀಮಿಂಗ್ ಸಂಸ್ಥೆಗಳೊಂದಿಗಿನ ಪ್ರಸ್ತುತ ಪಾಲುದಾರಿಕೆಯ ಜೊತೆಯಲ್ಲಿ ಆಪಲ್ ಟಿವಿ+ ಮತ್ತು ಆಪಲ್ ಮ್ಯೂಸಿಕ್ ನ ಹೊಸ ಸೇರ್ಪಡೆಯಿಂದ ಈಗ ಏರ್‌ಟೆಲ್ ವೈಫೈ ಗ್ರಾಹಕರು ಸಾಟಿಯಿಲ್ಲದ ಸಮೃದ್ಧ ಮನೋರಂಜನೆ ಚಟುವಟಿಕೆಗಳನ್ನು ನಿಮಿಷಾರ್ಧದಲ್ಲಿ ಪಡೆಯಬಹುದು. ಈ ಮೂಲಕ ಏರ್‌ಟೆಲ್ ತನ್ನ ಗ್ರಾಹಕರಿಗೆ ಸಮಗ್ರ ಮತ್ತು ಸಮೃದ್ಧ ಡಿಜಿಟಲ್ ಜೀವನಶೈಲಿಯ ಅನುಭವವನ್ನು ಒದಗಿಸುವಲ್ಲಿ ಮಂಚೂಣಿ ಸ್ಥಾನವನ್ನು ಭದ್ರಗೊಳಿಸಿದೆ.


