Thursday, December 11, 2025
Google search engine
Homeದೇಶಬಿಹಾರ ಮತದಾನೋತ್ತರ ಸಮೀಕ್ಷೆ: ಎನ್ ಡಿಎ ಮೈತ್ರಿಕೂಟಕ್ಕೆ ಜಯ

ಬಿಹಾರ ಮತದಾನೋತ್ತರ ಸಮೀಕ್ಷೆ: ಎನ್ ಡಿಎ ಮೈತ್ರಿಕೂಟಕ್ಕೆ ಜಯ

ಬಿಹಾರ ವಿಧಾನಸಭೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ಮುಕ್ತಾಯಗೊಂಡಿದ್ದು, ಸಂಜೆ 5.30ರ ವೇಳೆಗೆ ಶೇ.67.14ರಷ್ಟು ಮತದಾನವಾಗಿದೆ.

ಬಿಹಾರ ವಿಧಾನಸಭೆಯ 243 ವಿಧಾನಸಭಾ ಕ್ಷೇತ್ರಗಳಿಗೆ 121 ಸ್ಥಾನಗಳಿಗೆ ಮೊದಲ ಹಂತದ ಚುನಾವಣೆ ನಡೆದಿದ್ದು, ಶೇ.61 ಹಾಗೂ ಮಂಗಳವಾರ 122 ಸ್ಥಾನಗಳಿಗೆ ಎರಡನೇ ಹಂತದ ಮತದಾನವಾಗಿದ್ದು, ಶೇ.67.14ರಷ್ಟು ಮತದಾನ ಆಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ದೈನಿಕ್ ಭಾಸ್ಕರ್ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಆಡಳಿತಾರೂಢ ಎನ್ ಡಿಎ ಮೈತ್ರಿಕೂಟಕ್ಕೆ ಜಯ ದೊರೆಯಲಿದ್ದು, ಇಂಡಿಯಾ ಮೈತ್ರಿಕೂಟ ಗೆಲುವಿನ ಹೊಸ್ತಿಲಲ್ಲಿ ಎಡವಿದೆ.

ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಮ್ಯಾಜಿಕ್ ನಂಬರ್ 122 ಆಗಿದೆ. ದೈನಿಕ್ ಭಾಸ್ಕರ್ ಸಮೀಕ್ಷೆ ಪ್ರಕಾರ ಎನ್ ಡಿಎ ಮೈತ್ರಿಕೂಟಕ್ಕೆ 145-160 ಸ್ಥಾನ ಪಡೆದು ಬಹುಮ ಪಡೆಯಲಿದೆ. ಇಂಡಿಯಾ ಮೈತ್ರಿಕೂಟ 73-81 ಸ್ಥಾನದೊಂದಿಗೆ ಗೆಲುವಿನ ಹೊಸ್ತಿಲಲ್ಲಿ ಎಡವಿದೆ.

ಎನ್ ಡಿಎ ಮೈತ್ರಿಕೂಟದ ಪಕ್ಷಗಳಾದ ಬಿಜೆಪಿಗೆ 80, ಜೆಡಿಯುಗೆ 45 ಸ್ಥಾನಗಳು ದೊರೆಯಲಿದ್ದರೆ, ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ 19 ಹಾಗೂ ಆರ್ ಜೆಡಿ ಪಕ್ಷಕ್ಕೆ 77 ಸ್ಥಾನಗಳು ದೊರೆಯಲಿವೆ ಎಂದು ಹೇಳಲಾಗಿದೆ.

ದೈನಿಕ್ ಭಾಸ್ಕರ್

ಎನ್ ಡಿಎ 145-160, ಮಹಾಘಟಬಂಧನ್ 73-91, ಜೆಎಸ್ ಪಿ 0-3, ಇತರೆ 5-7

ಮಾರ್ಟಿನೆಜ್

ಎನ್ ಡಿಎ 147-167, ಮಹಾಘಟಬಂಧನ್ 70-90, ಜೆಎಸ್ ಪಿ 0-2, ಇತರೆ 2-8

ಪೀಪಲ್ಸ್ ಇನ್ ಸೈಟ್

ಎನ್ ಡಿಎ 133-148, ಮಹಾಘಟಬಂಧನ್ 87-102, ಜೆಎಸ್ ಪಿ 0-2, ಇತರೆ 3-6

ಪೀಪಲ್ಸ್ ಪಲ್ಸ್

ಎನ್ ಡಿಎ 133-159, ಮಹಾಘಟಬಂಧನ್ 75-101, ಜೆಎಸ್ ಪಿ 0-5, ಇತರೆ 2-8

ಚಾಣಕ್ಯ

ಎನ್ ಡಿಎ 128-134, ಮಹಾಘಟಬಂಧನ್ 102-108, ಜೆಎಸ್ ಪಿ 0-3, ಇತರೆ 5-9

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments