Sunday, December 7, 2025
Google search engine
Homeದೇಶಪತ್ನಿ, ತಾಯಿ ಜೊತೆ ಜಿಎಸ್ ಟಿ ಅಧಿಕಾರಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ!

ಪತ್ನಿ, ತಾಯಿ ಜೊತೆ ಜಿಎಸ್ ಟಿ ಅಧಿಕಾರಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ!

ಸೋದರಿ ಹಾಗೂ ತಾಯಿಯ ಜೊತೆ ಜಿಎಸ್ ಟಿ ಹೆಚ್ಚುವರಿ ಕಮಿಷನರ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಕೇರಳದ ಕೊಚ್ಚಿಯ ಮನೆಯೊಂದರಲ್ಲಿ ಪತ್ತೆಯಾಗಿದೆ.

ಜಾರ್ಖಂಡ್ ಮೂಲದ 44 ವರ್ಷದ ಮನೀಶ್ ವಿಜಯ್ ಸುಂಕ ಇಲಾಖೆಯಲ್ಲಿ ಹೆಚ್ಚುವರಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿಜಯ್, 35 ವರ್ಷದ ಸೋದರಿ ಶಾಲಿನಿ ಮತ್ತು ತಾಯಿ ಶಕುಂತಲಾ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.

ಕಳೆದ ಒಂದೂವರೆ ವರ್ಷದಿಂದ ಕೇರಳದಲ್ಲಿ ಸರ್ಕಾರ ನೀಡಿದ ಕ್ವಾರ್ಟರ್ಸ್ ನಲ್ಲಿ ವಾಸವಾಗಿದ್ದ ಕುಟುಂಬ ಅಕ್ಕಪಕ್ಕದ ಮನೆಯವರ ಜೊತೆ ಮಾತುಕತೆ ತುಂಬಾ ಕಡಿಮೆ ಇತ್ತು ಎಂದು ಹೇಳಲಾಗಿದ್ದು, ಮನೀಶ್ ವಿಜಯ್ ನಾಲ್ಕು ದಿನಗಳ ರಜೆ ಪಡೆದಿದ್ದರು ಎಂದು ಹೇಳಲಾಗಿದೆ.

ನಾಲ್ಕು ದಿನಗಳ ರಜೆ ಮುಗಿದಿದ್ದರೂ ಕಚೇರಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳದ ಕಾರಣ ಅಧಿಕಾರಿಗಳು ಸಾಕಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸದ ಕಾರಣ ಮನೆಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಕಿಟಕಿಯಲ್ಲಿ ಶವಗಳು ನೇತಾಡುತ್ತಿರುವುದನ್ನು ನೋಡಿ ಸಹದ್ಯೋಗಿಗಳು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಮನೆ ಬಾಗಿಲು ಒಡೆದು ನೋಡಿದಾಗ ಶವದ ವಾಸನೆ ಬರುತ್ತಿತ್ತು. ಕುಟುಂಬದ ಮೂವರು ಸದಸ್ಯರು ಆತ್ಮಕತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ತ್ರಿಕಕ್ಕಾರ ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶವಗಳು ಸಂಪೂರ್ಣವಾಗಿ ಕೊಳತೆ ಸ್ಥಿತಿಯಲ್ಲಿದ್ದು ಗುರುತು ಹಿಡಿಯಲಾಗದಂತೆ ಆಗಿವೆ.

ತಾಯಿಯ ಶವ ಹಾಸಿಗೆಯ ಮೇಲೆ ಪತ್ತೆಯಾಗಿದ್ದರೆ ಇಬ್ಬರ ಶವಗಳು ಒಂದೊಂದು ಕೊಣೆಯಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಮನೀಷ್ ಇದಕ್ಕೂ ಮುನ್ನ ಕೋಜಿಕೋಡ್ ನ ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ವರ್ಗಾವಣೆ ಆಗಿ ಕೊಚ್ಚಿಗೆ ಬಂದಿದ್ದರು. ಸೋದರಿ ಶಾಲಿನಿ ಜಾರ್ಖಂಡ್ ನಲ್ಲಿ ಯಾವುದೋ ಕೇಸ್ ಇದ್ದಿದ್ದರಿಂದ ನಾಲ್ಕು ದಿನ ರಜೆ ಹಾಕಿದ್ದರು ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments