ಜಮ್ಮು ಕಾಶ್ಮೀರದ ಪೆಹಲ್ಗಾವ್ ನಲ್ಲಿ ಪ್ರವಾಸಿಗರನ್ನು ಹತ್ಯೆಗೈದ ಉಗ್ರರಿಗೆ ಚೆನ್ನೈ- ಕೊಲಂಬೊ ವಿಮಾನದಲ್ಲಿ ಭದ್ರತಾ ಪಡೆಗಳು ತಪಾಸಣೆ ನಡೆಸಿದ ಘಟನೆ ಶನಿವಾರ ನಡೆದಿದೆ.
ಪೆಹಲ್ಗಾವ್ ನಲ್ಲಿ ದಾಳಿ ನಡೆಸಿದ ಉಗ್ರರು ಚೆನ್ನೈ ಮೂಲಕ ಶ್ರೀಲಂಕಾಗೆ ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ದಿಢೀರನೆ ಭದ್ರತಾ ಸಿಬ್ಬಂದಿ ಚೆನ್ನೈ- ಕೊಲಂಬೊ ವಿಮಾನದಲ್ಲಿ ತಪಾಸಣೆ ನಡೆಸಿದ್ದಾರೆ.
ಶ್ರೀಲಂಕಾ ಏರ್ ಲೈನ್ಸ್ ನಲ್ಲಿ ಶ್ರೀಲಂಕಾಗೆ ಪರಾರಿ ಆಗಿದ್ದಾರೆ ಎಂದು ಚೆನ್ನೈ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಕೂಡಲೇ ಮಾಹಿತಿ ರವಾನಿಸಿ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಉಗ್ರರಿಗೆ ತಪಾಸಣೆ ನಡೆಸಲಾಗಿದೆ.
ಪೆಹಲ್ಗಾವ್ ನಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದ ಲಷ್ಕರೆ ಇ-ತೋಯ್ಬಾದ ಉಗ್ರರನ್ನು ತಡೆಯುವಂತೆ ಇ-ಮೇಲ್ ಸಂದೇಶ ಬಂದಿದೆ. ಆದರೆ ಇ-ಮೇಲ್ ಸಂದೇಶ ತಲುಪವ ವೇಳೆಗೆ ವಿಮಾನ ಕೊಲಂಬೊಗೆ ಪ್ರಯಾಣ ಬೆಳೆಸಿತ್ತು. ಈ ಹಿನ್ನೆಲೆಯಲ್ಲಿ ಕೊಲಂಬೊದಲ್ಲಿರುವ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿ ತಪಾಸಣೆ ನಡೆಸುವಂತೆ ಸೂಚಿಸಲಾಗಿತ್ತು.
ಶ್ರೀಲಂಕಾ ಭದ್ರತಾ ಸಿಬ್ಬಂದಿ ವಿಮಾನದಲ್ಲಿರುವ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಆದರೆ ಉಗ್ರರು ವಿಮಾನದಲ್ಲಿ ಇದ್ದರೆ ಅಥವಾ ಇಲ್ಲವೇ ಎಂಬ ಮಾಹಿತಿ ಬಹಿರಂಗಪಡಿಸಿಲ್ಲ.


