ಮೂರು ಬಾರಿಯ ಮಾಜಿ ಶಾಸಕ ಹಾಗೂ ಬಿಆರ್ ಪಕ್ಷದ ಮಾಜಿ ನಾಯಕ ಚೆನ್ನಮನೆನಿ ರಮೇಶ್ ಜರ್ಮನಿ ಪೌರತ್ವ ಪಡೆದಿದ್ದು, ಭಾರತೀಯ ಪ್ರಜೆ ಎಂದು ನಕಲಿ ಸೃಷ್ಟಿಸಿ ಚುನಾವಣೆಗೆ ಸ್ಪರ್ಧಿಸಿರುವುದು ನ್ಯಾಯಾಲಯದಲ್ಲಿ ದೃಢಪಟ್ಟಿದೆ.
ಕಾಂಗ್ರೆಸ್ ಶಾಸಕ ಆದಿ ಶ್ರೀನಿವಾಸ್ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ನಲ್ಲಿ ಚೆನ್ನಮನೆನಿ ರಮೇಶ್ ಭಾರತೀಯ ಎಂಬುದನ್ನು ದೃಢಪಡಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ 30 ಲಕ್ಷ ರೂ. ದಂಡ ವಿಧಿಸಿದೆ.
ಜರ್ಮನ್ ರಾಜತಾಂತ್ರಿಕ ಕಚೇರಿ ಚೆನ್ನಮನೆನಿ ರಮೇಶ್ ತಮ್ಮ ದೇಶದ ಪೌರತ್ವ ಪಡೆದಿರುವ ಬಗ್ಗೆ ದಾಖಲೆಗಳು ನೀಡಿತ್ತು. ನ್ಯಾಯಾಲಯ 30 ಲಕ್ಷ ರೂ. ದಂಡ ವಿಧಿಸಿದ್ದರೆ, ರಮೇಶ್ 25 ಲಕ್ಷ ರೂ. ದಂಡ ಪಾವತಿಸುವುದಾಗಿ ಮನವಿ ಮಾಡಿದ್ದಾರೆ.
ವೆಮುಲಾವಾಡ ಕ್ಷೇತ್ರದಿಂದ ತೆಲುಗು ದೇಶಂ ಪಕ್ಷದಿಂದ 2009ರಲ್ಲಿ ಮೊದಲ ಬಾರಿ ಶಾಸಕರಾಗಿದ್ದರು. ಒಟ್ಟು ನಾಲ್ಕು ಬಾರಿ ಶಾಸಕರಾಗಿದ್ದ ರಮೇಶ್ 2010ರಿಂದ 2018ರ ಅವಧಿಯಲ್ಲಿ ಪಕ್ಷಾಂತರ ಮಾಡಿದ್ದರಿಂದ ಹಾಗೂ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಸಂವಿಧಾನದ ಪ್ರಕಾರ ಚುನಾವಣೆಯಲ್ಲಿ ಭಾರತೀಯ ಪ್ರಜೆಗಳು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. 2023ರವರೆಗೂ ರಮೇಶ್ ಜರ್ಮನ್ ಪಾಸ್ ಪೋರ್ಟ್ ಹೊಂದಿದ್ದರು.