ಕೊರೊನಾ ವೈರಸ್ ಗೆ ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 5 ತಿಂಗಳ ಮಗು ಸೇರಿ 7 ಮಂದಿ ಅಸುನೀಗಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ನೀಡಿದ ಮಾಹಿತಿ ಅನ್ವಯ ಒಂದು ದಿನದಲ್ಲಿ ಸಕ್ರಿಯ ಪ್ರಕರಣಗಳ 4302ರಿಂದ 4866ಕ್ಕೆ ಜಿಗಿತ ಕಂಡಿದೆ.
ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 105 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಒಂದೇ ದಿನ ಸಕ್ರಿಯ ಪ್ರಕರಣಗಳ ಸಂಖ್ಯೆ 562ಕ್ಕೆ ಏರಿಕೆ ಕಂಡಿದೆ. 5 ತಿಂಗಳ ಮಗು ಹಾಗೂ 87 ವರ್ಷದ ವೃದ್ಧ ಸೇರಿದಂತೆ 2 ಸಾವು ಪ್ರಕರಣಗಳು ವರದಿಯಾಗಿವೆ.
ಕರ್ನಾಟಕಲ್ಲಿ ಎರಡು ಕೋವಿಡ್ ಸಾವು ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ.
ಗುಜರಾತ್ ನಲ್ಲಿ 508, ಕರ್ನಾಟಕದಲ್ಲಿ 436, ಕೇರಳದಲ್ಲಿ 1487, ಮಹಾರಾಷ್ಟ್ರದಲ್ಲಿ 526 ಮತ್ತು ಪಶ್ಚಿಮ ಬಂಗಾಳದಲ್ಲಿ 538 ಸಕ್ರಿಯ ಪ್ರಕರಣಗಳು ಕಂಡು ಬಂದಿದ್ದು, ಈ ರಾಜ್ಯದಲ್ಲಿ ಕೋವಿಡ್ ಅಬ್ಬರ ಹೆಚ್ಚಾಗಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಜ್ಞರು ದೇಶದಲ್ಲಿ ಕೊರೊನಾ ಏರಿಕೆ ಬಗ್ಗೆ ಸೂಕ್ಷ್ಮ ಗಮನ ಹರಿಸಿದ್ದಾರೆ.
ದೇಶದಲ್ಲಿ ಕೋವಿಡ್ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ವೈದ್ಯಕೀಯ ನೆರವು, ಔಷಧ ಮುಂತಾದ ಸವಲತ್ತುಗಳು ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.


