Sunday, December 7, 2025
Google search engine
Homeದೇಶಜಾರ್ಖಂಡ್ ಸಿಎಂ ಹೆಸರಲ್ಲಿ ಡಿಕೆ ಶಿವಕುಮಾರ್ ದಂಪತಿಗೆ ಕರೆ ಮಾಡಿ ಕಿರುಕುಳ: ಎಫ್ ಐಆರ್ ದಾಖಲು

ಜಾರ್ಖಂಡ್ ಸಿಎಂ ಹೆಸರಲ್ಲಿ ಡಿಕೆ ಶಿವಕುಮಾರ್ ದಂಪತಿಗೆ ಕರೆ ಮಾಡಿ ಕಿರುಕುಳ: ಎಫ್ ಐಆರ್ ದಾಖಲು

ಬೆಂಗಳೂರು: ಜಾರ್ಖಂಡ್  ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೆಸರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅವರ ಪತ್ನಿಗೆ ದುಷ್ಕರ್ಮಿಯೊಬ್ಬ ಕರೆ ಮಾಡಿ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ.

ಶನಿವಾರ ತಡರಾತ್ರಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಅನ್ವಯ ರಾಂಚಿಯ ಗೊಂಡಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಹೆಸರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಪತ್ನಿಗೆ ಫೋನ್ ಕರೆ ಮಾಡಿದ ದುಷ್ಕರ್ಮಿ ಕಿರುಕುಳ ನೀಡಿದ್ದಾನೆ. ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸೊರೆನ್​ ಅವರ ಆಪ್ತ ಸಹಾಯಕ ಜೈ ಪ್ರಸಾದ್ ಅವರು ಗೊಂಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಕರೆ ಮಾಡಲು ಬಳಸಿದ ಅದೇ ಸಂಖ್ಯೆಯನ್ನು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರಿಗೂ ಕಿರುಕುಳ ನೀಡಲು ಸಹ ಬಳಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಮುಖ್ಯಮಂತ್ರಿ ಕಚೇರಿಯು ಇದನ್ನು ಮುಖ್ಯಮಂತ್ರಿಯವರ ವರ್ಚಸ್ಸಿಗೆ ಕಳಂಕ ತರುವ ಮತ್ತು ವಿಐಪಿಯೊಬ್ಬರಿಗೆ ಕಿರುಕುಳ ನೀಡುವ ಗಂಭೀರ ಕೃತ್ಯ ಎಂದು ಪರಿಗಣಿಸಲಾಗಿದೆ.

ದೂರವಾಣಿಯಲ್ಲಿ, ಪೆನ್ ಡ್ರೈವ್‌ನಲ್ಲಿ ಫೋನ್ ಕರೆಯ ರೆಕಾರ್ಡಿಂಗ್ ಲಭ್ಯವಿದ್ದು, ಅದರಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಆರೋಪಿಯು ಅಸಭ್ಯ ಮತ್ತು ಅನುಮಾನಾಸ್ಪದ ರೀತಿಯಲ್ಲಿ ಮಾತನಾಡಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ ಎಂದು ವರದಿಯಾಗಿದೆ.

ರಾಂಚಿ ಪೊಲೀಸರ ಸೈಬರ್ ಸೆಲ್ ಮತ್ತು ತಾಂತ್ರಿಕ ತಂಡಗಳು ಜಂಟಿಯಾಗಿ ತನಿಖೆಯಲ್ಲಿ ತೊಡಗಿಸಿಕೊಂಡಿವೆ. ಆರೋಪಿಯನ್ನು ಆದಷ್ಟು ಬೇಗ ಗುರುತಿಸಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ರಾಂಚಿ ಪೊಲೀಸರಿಗೆ ಮುಖ್ಯಮಂತ್ರಿ ಸೊರೆನ್​ ಅವರು ಸೂಚಿಸಿದ್ದಾರೆ.

ಪೊಲೀಸ್ ತಂಡವು ಫೋನ್ ಸ್ಥಳ, ಕರೆ ದಾಖಲೆಗಳು ಮತ್ತು ಸಿಮ್ ಕಾರ್ಡ್ ವಿವರಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

“ವಿಷಯ ಬೆಳಕಿಗೆ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ತನಿಖೆಯ ನಂತರ ವಿವರವಾದ ಮಾಹಿತಿಯನ್ನು ಒದಗಿಸಲಾಗುವುದು.” ಸಂಜೀವ್ ಬೆಸ್ರಾ, ಸದರ್ ಡಿಎಸ್ಪಿ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments