ಪ್ರೇಯಸಿ ಹಾಗೂ ಅವರ ಕುಟುಂಬದ ನಾಲ್ವರನ್ನು ಬೇರೆ ಬೇರೆ ಜಾಗಗಳಲ್ಲಿ ಕೊಲೆ ಮಾಡಿದ ಪಾಗಲ್ ಪ್ರೇಮಿ ವಿಷ ಸೇವಿಸಿ ಪೊಲೀಸ್ ಠಾಣೆಗೆ ಬಂದು ಶರಣಾದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.
23 ವರ್ಷದ ಆಫನ್ ತಿರುವನಂಪುರದಲ್ಲಿ ಸೋಮವಾರ ಬೆಳಿಗ್ಗೆ ಪೊಲೀಸ್ ಠಾಣೆಗೆ ಆಗಮಿಸಿ ತಾನು 6 ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು 5 ಕೊಲೆ ಪ್ರಕರಣ ನಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ. ಇನ್ನೊಂದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಆಫನ್ ಗೆಳತಿ ಫರ್ಸಾನಾ, ಆಕೆಯ 13 ವರ್ಷದ ಸೋದರ ಅಹಸಾನ್, ಅಜ್ಜಿ ಸಲ್ಮಾ ಬೀವಿ, ಅಂಕಲ್ ಲತೀಫ್, ಆಂಟಿ ಶಹೀನಾ ಅವರನ್ನು ಕೊಲೆ ಮಾಡಿದ್ದಾನೆ. ಗೆಳತಿಯ ತಾಯಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
6 ಮಂದಿಯನ್ನು ಪ್ರತ್ಯೇಕ ಜಾಗಗಳಲ್ಲಿ ಕೊಲೆ ಮಾಡಿರುವ ಆಫನ್ ಪೊಲೀಸ್ ಠಾಣೆಗೆ ಬಂದು ಶರಣಾಗುವ ಮೊದಲು ವಿಷ ಸೇವಿಸಿದ್ದಾನೆ ಎಂಬುದು ತಿಳಿದು ಬಂದಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಚೇತರಿಸಿಕೊಂಡ ನಂತರ ವಿಚಾರಣೆ ನಡೆಸಿ ಇಡೀ ಪ್ರಕರಣದ ಮಾಹಿತಿ ಪಡೆಯಲು ಪೊಲೀಸರು ಉದ್ದೇಶಿಸಿದ್ದಾರೆ.
ಒಟ್ಟು ಮೂರು ಮನೆಗಳಲ್ಲಿ ಐದು ಶವಗಳು ಪತ್ತೆಯಾಗಿವೆ. ಮಾರಣಾಂತಿಕ ದಾಳಿಗೆ ತುತ್ತಾಗಿ ನರಳುತ್ತಿದ್ದ ಅಫಾನ್ ತಾಯಿಯನ್ನು ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಬದುಕುಳಿದಿದ್ದಾಳೆ.
ತಿರುವನಂತಪುರಂನ ಉಪನಗರವಾದ ಅಫಾನ್ ವೆಂಜರಮೂಡಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಅಫಾನ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಗುರಿಪಡಿಸಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ತನಗೆ ಯಾರೂ ಸಹಾಯ ಮಾಡದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಅಫಾನ್ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ದುಬೈನಲ್ಲಿ ಅಂಗಡಿ ಹೊಂದಿರುವ ತನ್ನ ತಂದೆ 75 ಲಕ್ಷ ರೂ ಸಾಲ ಮಾಡಿದ್ದರಿಂದ, ತಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗಿ ಅಫಾನ್ ಹೇಳಿದ್ದಾನೆ. ಅಲ್ಲದೇ ಈ ಆರ್ಥಿಕ ಸಂಕಷ್ಟದಿಂದ ತನ್ನನ್ನು ಪಾರು ಮಾಡುವಲ್ಲಿ ಯಾರೂ ಸಹಾಯ ಮಾಡದಿದ್ದಾಗ ಅವರೆಲ್ಲರನ್ನೂ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಗಿ ಅಫಾನ್ ಪೊಲೀಸರಿಗೆ ತಿಳಿಸಿದ್ದಾನೆ.
ಅಫಾನ್ ತನ್ನ ಕುಟುಂಬದವರನ್ನು ಮತ್ತು ಗೆಳತಿಯನ್ನು ಕೊಲೆ ಮಾಡಿರುವ ಸುದ್ದಿ, ವೆಂಜರಮೂಡಿನ ಜನರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಅಫಾನ್ ಮೃದುಭಾಷಿಯ ಉತ್ತಮ ವ್ಯಕ್ತಿಯಾಗಿದ್ದ ಎನ್ನುವ ಸ್ಥಳೀಯರು, “ತನ್ನ 13 ವರ್ಷದ ತಮ್ಮನನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ಅಫಾನ್, ಆತನನ್ನು ಕೊಲೆ ಮಾಡಿರುವುದನ್ನು ನಂಬಲಾಗುತ್ತಿಲ್ಲ..” ಎಂದು ಹೇಳುತ್ತಾರೆ.


