Home ಕಾನೂನು Law News ಸಂಬಂಧ ಮುರಿದರೆ ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Law News ಸಂಬಂಧ ಮುರಿದರೆ ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸಂಬಂಧ ಮುರಿಯುವುದು ಭಾವನಾತ್ಮಕವಾಗಿ ಯಾತನೆಯಿಂದ ಕೂಡಿರುತ್ತದೆ. ಆದರೆ ಅದರಿಂದ ಆತ್ಮಹತ್ಯೆಗೆ ಪ್ರಚೋದನಕಾರಿಯಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

by Editor
0 comments
supreme court

ಸಂಬಂಧ ಮುರಿಯುವುದು ಭಾವನಾತ್ಮಕವಾಗಿ ಯಾತನೆಯಿಂದ ಕೂಡಿರುತ್ತದೆ. ಆದರೆ ಅದರಿಂದ ಆತ್ಮಹತ್ಯೆಗೆ ಪ್ರಚೋದನಕಾರಿಯಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಸಂಬಂಧ ಮುರಿದಿದ್ದು ಆತ್ಮಹತ್ಯೆಗೆ ಪ್ರಚೋದನೆ ಎಂಬ ಕಾರಣಕ್ಕಾಗಿ ಕಮರುದ್ದೀನ್ ದಸ್ತಗಿರಿ ಸನಾದಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿತು.

ಇದು ಸಂಬಂಧ ಮುರಿದ ಪ್ರಕರಣ ಹೊರತು ಕ್ರಿಮಿನಲ್ ಅಪರಾಧ ಪ್ರಕರಣವಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.

ಮದುವೆ ಆಗುವುದಾಗಿ ನಂಬಿಸಿದ್ದ ಕಮರುದ್ದೀನ್ ದಸ್ತಗಿರಿ ಸನಾದಿ ನಂತರ ನಿರಾಕರಿಸಿದ್ದರಿಂದ ೨೧ ವರ್ಷದ ಮಗಳು ೨೦೦೭ ಆಗಸ್ಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೊಟ್ಟ ಭರವಸೆ ಉಳಿಸಿಕೊಳ್ಳದ ಕಮರುದ್ದೀನ್ ವಿರುದ್ಧ ಮೃತಳ ತಾಯಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

banner

ವಿಚಾರಣೆ ನಡೆಸಿದ ಹೈಕೋರ್ಟ್ ಸೆಕ್ಷನ್ ೪೧೭ [ವಂಚನೆ], ಷೆಕ್ಷನ್ ೩೦೬ [ಆತ್ಮಹತ್ಯೆಗೆ ಪ್ರಚೋದನೆ] ಮತ್ತು ಸೆಕ್ಷನ್ ೩೭೬ [ಅತ್ಯಾಚಾರ] ಅಡಿ ಆರೋಪಿಗೆ ೫ ವರ್ಷ ಶಿಕ್ಷೆ ಹಾಗೂ ೨೫ ಸಾವಿರ ರೂ. ದಂಡ ವಿಧಿಸಿತ್ತು.

೧೭ ಪುಟಗಳ ಸುದೀರ್ಘ ತೀರ್ಪು ಪ್ರಕಟಿಸಿದ ನ್ಯಾಯಾಲಯ ಎಲ್ಲಾ ಆರೋಪಗಳಿಂದ ಕಮರುದ್ದೀನ್ ನನ್ನು ದೋಷ ಮುಕ್ತಗೊಳಿಸಿದ್ದು, ಮೃತಳ ಜೊತೆ ಆತ ಯಾವುದೇ ದೈಹಿಕ ಸಂಬಂಧ ಹೊಂದಿರಲಿಲ್ಲ ಎಂದು ತಿಳಿಸಿದೆ. ಅಲ್ಲದೇ ಸಂಬಂಧಗಳು ಬೇರ್ಪಟ್ಟಾಗ ಅತೀವ ನೋವಾಗುತ್ತದೆ. ಆದರೆ ಅದು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
Fengal Cyclone ನಾಳೆ ಮಧ್ಯಾಹ್ನ ಫೆಂಗಲ್ ಚಂಡಮಾರುತ ತಮಿಳುನಾಡು ಪ್ರವೇಶ! Law News ಸಂಬಂಧ ಮುರಿದರೆ ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಚಂದ್ರಶೇಖರ್ ಸ್ವಾಮೀಜಿಗೆ ಸಂಕಷ್ಟ: ಡಿ.2ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ! ಒಕ್ಕಲಿಗ ಸ್ವಾಮೀಜಿ ಮುಟ್ಟಿದರೆ ಸಮುದಾಯ ತಿರುಗಿ ಬೀಳಲಿದೆ: ಆರ್.ಅಶೋಕ ಎಚ್ಚರಿಕೆ ಅದಾನಿ ಬಂಧನಕ್ಕೆ ಅಮೆರಿಕದಿಂದ ಮನವಿ ಬಂದಿಲ್ಲ: ಕೇಂದ್ರ ಸರ್ಕಾರ Belagavi ಲವ್ ಸೆಕ್ಸ್ ಧೋಖಾ: ಮಹಿಳಾ ಹೋರಾಟಗಾರ್ತಿಗೆ ವಂಚಿಸಿದ ಯೋಧ! Karnataka ಪ್ರಧಾನಿ ಮುಂದೆ 5 ಪ್ರಮುಖ ಬೇಡಿಕೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ! ಲಂಚ ಕೊಡದಿದ್ದರೆ ಹೆರಿಗೆನೂ ಇಲ್ಲ, ತಾಯಿ ಕಾರ್ಡ್ ಕೊಡಲ್ಲ: ಲೋಕಾಯುಕ್ತ ದಾಳಿ ವೇಳೆ ಕೆಸಿ ಜನರಲ್ ಆಸ್ಪತ್ರೆಯ ರೋಗಿಗಳ ಅಳ... ಜಿಮ್ ಮಾಡುವಾಗಲೇ ಜೀವ ತೆತ್ತ 28 ವರ್ಷದ ಪ್ರಶಸ್ತಿ ವಿಜೇತ ಬಾಡಿಬಿಲ್ಡರ್! 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು: ರಾಹುಲ್, ಪ್ರಿಯಾಂಕಾ ಅಭಿನಂದನೆ