Sunday, December 7, 2025
Google search engine
Homeದೇಶಡ್ರೀಮ್ 11 ಸೇರಿ ಆನ್‌ ಲೈನ್‌ ಗೇಮಿಂಗ್‌ ನಿಷೇಧಕ್ಕೆ ಕೇಂದ್ರ ಚಿಂತನೆ: ದಿಕ್ಕೆಟ್ಟ 9.1 ಬಿಲಿಯನ್...

ಡ್ರೀಮ್ 11 ಸೇರಿ ಆನ್‌ ಲೈನ್‌ ಗೇಮಿಂಗ್‌ ನಿಷೇಧಕ್ಕೆ ಕೇಂದ್ರ ಚಿಂತನೆ: ದಿಕ್ಕೆಟ್ಟ 9.1 ಬಿಲಿಯನ್ ಡಾಲರ್‌ ಉದ್ಯಮ!

ನವದೆಹಲಿ: ದೇಶದಲ್ಲೊ ವ್ಯಾಪಕವಾಗುತ್ತಿರುವ ಗೇಮಿಂಗ್ ಆಪ್ ನಿಷೇಧಕ್ಕೆ ಕೇಂದ್ರ‌ ಸರ್ಕಾರ ಮುಂದಾಗಿರುವುದು ವಾರ್ಷಿಕ 9.1 ಬಿಲಿಯನ್ ಡಾಲರ್‌ ವಹಿವಾಟು ನಡೆಸುವ ಉದ್ಯಮಕ್ಕೆ ಭಾರೀ ಆಘಾತ ತಂದಿದೆ.

ಗೇಮಿಂಗ್‌ ಆಪ್‌ ನಿಷೇಧಿಸುವ ಮಸೂದೆ ಸಂಸತ್ತಿನಲ್ಲಿ ಅಂಗೀಕೃತವಾದರೆ, ಹಣ ಆಧಾರಿತ ಆನ್‌ ಲೈನ್‌ ಗೇಮಿಂಗ್‌ (ಕೌಶಲ್ಯ ಆಧಾರಿತವಾಗಿರಲಿ ಅಥವಾ ಅದೃಷ್ಟ ಆಧಾರಿತವಾಗಿರಲಿ) ಸಂಪೂರ್ಣವಾಗಿ ಕಾನೂನುಬಾಹಿರವಾಗಲಿದೆ.

ಇಂತಹ ವೇದಿಕೆಗಳನ್ನು ಪ್ರಚಾರ ಮಾಡುವ ಜಾಹೀರಾತುಗಳಿಗೆ ನಿಷೇಧವಿದ್ದು, ಇವುಗಳಿಗೆ ಸಂಬಂಧಿಸಿದ ಎಲ್ಲ ಹಣಕಾಸು ವ್ಯವಹಾರಗಳನ್ನು ಬ್ಯಾಂಕುಗಳು ಮತ್ತು ಪೇಮೆಂಟ್ ಗೇಟ್‌ ವೇಗಳು ಪ್ರಕ್ರಿಯೆಗೊಳಿಸುವುದನ್ನೂ ನಿಲ್ಲಿಸಲಾಗುತ್ತದೆ.

ನಿಯಮ ಉಲ್ಲಂಘಿಸಿದವರು ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ಎದುರಿಸಬೇಕಾಗುತ್ತದೆ.

ಕಂಪನಿಗಳಿಗೆ ಅಸ್ತಿತ್ವದ ಪ್ರಶ್ನೆ

ಡ್ರೀಮ್ 11, ಗೇಮ್ಸ್ 24X7, ವಿನ್ಜೋ, ಗೇಮ್ಸ್‌ ಕ್ರಾಫ್ಟ್‌, 99 ಗೇಮ್ಸ್, ಖೇಲೋ ಫ್ಯಾಂಟಸಿ ಮತ್ತು ಮೈ11ಸರ್ಕಲ್ ಮುಂತಾದ ಪ್ರಮುಖ ಕಂಪನಿಗಳು ಈಗ ಅಸ್ತಿತ್ವದ ಸಂಕಷ್ಟ ಎದುರಿಸುತ್ತಿವೆ.

ಪ್ರಸ್ತುತ ಭಾರತದ ಆನ್‌ ಲೈನ್ ಗೇಮಿಂಗ್ ಮಾರುಕಟ್ಟೆ ‌3.7 ಶತಕೋಟಿ ಡಾಲರ್ ಮೌಲ್ಯದಿದ್ದು, 2029ರೊಳಗೆ 9.1 ಬಿಲಿಯನ್ ಡಾಲರ್‌ಗೆ ಏರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಇಂದಿನ ಆದಾಯದ 86% ನಗದು ಆಧಾರಿತ ಆಟಗಳಿಂದ ಬರುತ್ತಿದೆ. ಅದನ್ನು ಸಂಪೂರ್ಣ ತೆಗೆದುಹಾಕಿದರೆ, ಕೈಗಾರಿಕೆಯ ಆರ್ಥಿಕ ಹೃದಯವೇ ನಿಂತಂತೆ ಆಗುತ್ತದೆ.

ಕೈಗಾರಿಕೆಯ ಆಕ್ರೋಶ ಮತ್ತು ಎಚ್ಚರಿಕೆ

ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಸಂಪೂರ್ಣ ನಿಷೇಧ ಕೈಗಾರಿಕೆಗೆ ಅಪಾರ ಹಾನಿ ಉಂಟುಮಾಡಲಿದೆ ಎಂದು ಎಚ್ಚರಿಸಿದೆ.

ಪ್ರಗತಿಪರ ನಿಯಂತ್ರಣದ ಬದಲು ಸಂಪೂರ್ಣ ನಿಷೇಧವು ಕಾನೂನುಬದ್ದ ಆಟಗಾರರನ್ನು ಅಕ್ರಮ ಗ್ಯಾಂಬ್ಲಿಂಗ್ ನೆಟ್‌ ವರ್ಕ್‌ ಗಳತ್ತ ತಳ್ಳಬಹುದು ಎಂದು ಎಚ್ಚರಿಸಿದೆ. “ಈ ಮಸೂದೆ ಪ್ರಸ್ತುತ ರೂಪದಲ್ಲೇ ಅಂಗೀಕೃತವಾದರೆ, ಅದು ಕಾನೂನುಬದ್ದ ಕೈಗಾರಿಕೆಗೆ `ಮರಣ ಘಂಟೆ” ಎಂದು ಫೆಡರೇಶನ್ ಹೇಳಿದೆ.

“ಸಂಪೂರ್ಣ ನಿಷೇಧ ಭಾರತೀಯರನ್ನು ರಕ್ಷಿಸುವುದಿಲ್ಲ, ಬದಲಾಗಿ ಅವರಿಗೆ ಹಾನಿ ಮಾಡುತ್ತದೆ. ಇದು ಉದ್ಯೋಗ ಕೊಲ್ಲುತ್ತದೆ, ಬಳಕೆದಾರರನ್ನು ಅಕ್ರಮ ಜೂಜಾಟದತ್ತ ತಳ್ಳುತ್ತದೆ ಮತ್ತು ಆರ್ಥಿಕತೆಗೆ ಹೊಡೆತ ಬೀಳುತ್ತದೆ” ಎಂದು ಈ ವಲಯದ ಪ್ರಮುಖರು ಎಚ್ಚರಿಸಿದ್ದಾರೆ.

ಮಸೂದೆಯ ಮುಖ್ಯಾಂಶ

ಈ ಮಸೂದೆ ಯಾವುದೇ ಅಸ್ಪಷ್ಟತೆಯನ್ನು ಬಿಟ್ಟುಕೊಟ್ಟಿಲ್ಲ. ಹಣ ಆಧಾರಿತ ಆಟಗಳು ಕೌಶಲ್ಯ ಅಥವಾ ಅದೃಷ್ಟ ಆಧಾರಿತವಾಗಿರಲಿ, ಎಲ್ಲವನ್ನೂ ನಿಷೇಧಿಸಲಾಗಿದೆ. ಬ್ಯಾಂಕುಗಳು ಹಾಗೂ ಪೇಮೆಂಟ್ ಗೇಟ್ವೇಗಳಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ಪ್ರಕ್ರಿಯೆಗೊಳಿಸುವುದನ್ನು ತಡೆಯಲಾಗಿದೆ.

ಇಂತಹ ಆಟಗಳ ಜಾಹೀರಾತು ಕೂಡ ಕಾನೂನುಬಾಹಿರ. ಆದರೆ ಬಳಕೆದಾರರು ಉಚಿತ ಅಥವಾ ಸಬ್ಸಿ÷್ಕçಪ್ಷನ್ ಆಧಾರಿತ ಆಟಗಳನ್ನು ಆಡುವಂತೆಯೇ ಇರುತ್ತದೆ. ಆದರೆ ಅದರಲ್ಲಿ ಹಣದ ಪಣವಿಲ್ಲ. ಸಾವಿರಾರು ಉದ್ಯೋಗ, ಸಾವಿರಾರು ಕೋಟಿ ಹೂಡಿಕೆ ಅಪಾಯದಲ್ಲಿ ಕೈಗಾರಿಕಾ ತಜ್ಞರ ಪ್ರಕಾರ, “ಸಂಪೂರ್ಣ ನಿಷೇಧವು ಭಾರತೀಯರನ್ನು ರಕ್ಷಿಸುವುದಿಲ್ಲ. ಬದಲಿಗೆ ಅದು ಉದ್ಯೋಗ ನಾಶಗೊಳಿಸುತ್ತದೆ, ಬಳಕೆದಾರರನ್ನು ಅಕ್ರಮ ಜೂಜಾಟದತ್ತ ತಳ್ಳುತ್ತದೆ ಮತ್ತು ಸಂವಿಧಾನವನ್ನೇ ಉಲ್ಲಂಘಿಸುತ್ತದೆ.

ಇದು ದೇಶದ ದೊಡ್ಡ ಭದ್ರತಾ ಅಪಾಯವಾಗಿರುವ ಅಕ್ರಮ ವಿದೇಶಿ ಆಪರೇಟರ್ಗಳನ್ನು ಮಾತ್ರ ಬಲಪಡಿಸುತ್ತದೆ” ಎಂದು ಎಚ್ಚರಿಸಿದ್ದಾರೆ.

ಕಾನೂನುಮಟ್ಟದ ವಿಚಾರವೂ ಕೈಗಾರಿಕೆಯ ಪ್ರತಿರೋಧದ ಕೇಂದ್ರವಾಗಿದೆ. ಕಳೆದ 70 ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳು ಕೌಶಲ್ಯ ಆಧಾರಿತ ಆಟಗಳು ಜೂಜು ಅಲ್ಲವೆಂದು ಅನೇಕ ಬಾರಿ ತೀರ್ಪು ನೀಡಿದ್ದರೂ, ಈ ಮಸೂದೆ ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments