Sunday, December 7, 2025
Google search engine
Homeದೇಶಕೇರಳದ ಬೇಬಿ ಸಿಪಿಐಎಂ ನೂತನ ಸಾರಥಿ

ಕೇರಳದ ಬೇಬಿ ಸಿಪಿಐಎಂ ನೂತನ ಸಾರಥಿ

ಕೊಲ್ಲಂ: ಕೇರಳದ ಮಾಜಿ ಸಚಿವ ಎಂ.ಎ. ಬೇಬಿ ಅವರನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) (ಸಿಪಿಐ(ಎಂ)) ಪಕ್ಷದ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಮದುರೈನಲ್ಲಿ ನಡೆದ ಪಕ್ಷದ 24ನೇ ಕಾಂಗ್ರೆಸ್ನಲ್ಲಿ ಈ ಘೋಷಣೆ ಮಾಡಲಾಯಿತು.

ಸೀತಾರಾಂ ಯೆಚೂರಿ ಅವರ ನಿಧನದ ನಂತರ, ಪ್ರಧಾನ ಕಾರ್ಯದರ್ಶಿಯ ಸ್ಥಾನ ಖಾಲಿಯಾಗಿತ್ತು. ಪ್ರಕಾಶ್ ಕಾರಟ್ ಅವರು ಮಧ್ಯಂತರ ಕಾರ‍್ಯದರ್ಶಿಯಾಗಿ ಆಗಿದ್ದರು. ಈಗ ಎಂ.ಎ. ಬೇಬಿ ಆ ಪ್ರಮುಖ ಹುದ್ದೆಯ ಹೊಣೆಗಾರಿಕೆಯನ್ನು ವಹಿಸಲಿದ್ದಾರೆ.

ಎಂ.ಎ. ಬೇಬಿ 1954ರಲ್ಲಿ ಕೇರಳದ ಪ್ರಕ್ಕುಳಂನಲ್ಲಿ ಜನಿಸಿದರು. ಅವರು ತಮ್ಮ ಶಾಲಾ ದಿನಗಳಲ್ಲಿ ಕೇರಳ ಸ್ಟೂಡೆಂಟ್ಸ್ ಫೆಡರೇಶನ್ (ಕೆಎಸ್ಎಫ್) ಮೂಲಕ ರಾಜಕೀಯ ಪ್ರವೇಶಿಸಿದರು, ಇದು ನಂತರ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಸ್ಎಫ್ಐ) ಆಗಿ ರೂಪಾಂತರಗೊಂಡಿತು.

ಎಂ.ಎ. ಬೇಬಿ 1968 ರಿಂದ 1998ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ೨೦೧೨ರಲ್ಲಿ ಸಿಪಿಐ(ಎಂ) ಪಕ್ಷದ ಅತ್ಯುನ್ನತ ನಿರ್ಧಾರಕ ಸಂಸ್ಥೆಯಾದ ಪೊಲಿಟ್ಬ್ಯೂರೋಗೆ ಸೇರ್ಪಡೆಗೊಂಡರು. ಎಂ.ಎ. ಬೇಬಿ ಅವರು ಕೇರಳದ ಶಿಕ್ಷಣ ಸಚಿವರಾಗಿ 2006 ರಿಂದ 2011ರವರೆಗೆ ಸೇವೆ ಸಲ್ಲಿಸಿದರು.

ಅವರ ಕಾರ್ಯಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದರು. ಅವರು ೨೦೧೪ರಲ್ಲಿ ಕೊಲ್ಲಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು.

ಈ ನೇಮಕದಿಂದ, ಎಂ.ಎ. ಬೇಬಿ ಅವರು ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಎರಡನೇ ಕೇರಳದ ನಾಯಕರಾಗಿದ್ದಾರೆ; ಈ ಹಿಂದೆ ಇಎಂಎಸ್ ನಂಬೂದಿರಿಪಾಡ್ ಈ ಹುದ್ದೆಯನ್ನು ವಹಿಸಿದ್ದರು.

ಸಿಪಿಐ (ಎಂ) ಅನ್ನು ಮುನ್ನಡೆಸಿದ ಮೂರನೇ ಮಲಯಾಳಿ ಮತ್ತು ಎರಡನೇ ಕೇರಳೀಯರಾಗಿ, ಬೇಬಿ ಅವರು ಇಎಂಎಸ್ ನಂಬೂದಿರಿಪಾಡ್ ಅವರ ಪರಂಪರೆ ಮತ್ತು ಪ್ರಕಾಶ್ ಕಾರಟ್ ಅವರ ಸೈದ್ಧಾಂತಿಕ ದೃಢತೆಯನ್ನು ಹೊಂದಿದ್ದಾರೆ.

ಕಾರಟ್ ಅವರಂತಲ್ಲದೆ, ಬೇಬಿಯ ನಾಯಕತ್ವದ ಶೈಲಿಯು ತಳಮಟ್ಟದ ಕಾರ‍್ಯಕರ್ತರನ್ನು ಸಜ್ಜುಗೊಳಿಸುವಲ್ಲಿ ನೆಲೆಗೊಂಡಿದೆ. ಎಸ್ಎಫ್ಐ ಇದಕ್ಕೆ ನಿದರ್ಶನವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments