Sunday, December 7, 2025
Google search engine
Homeದೇಶಶಶಿ ತರೂರ್ ಅಸಮಾಧಾನ: ಕೇರಳ ಬಿಕ್ಕಟ್ಟು ಶಮನಕ್ಕೆ ಕಾಂಗ್ರೆಸ್ ಸಭೆ

ಶಶಿ ತರೂರ್ ಅಸಮಾಧಾನ: ಕೇರಳ ಬಿಕ್ಕಟ್ಟು ಶಮನಕ್ಕೆ ಕಾಂಗ್ರೆಸ್ ಸಭೆ

ನವದೆಹಲಿ: ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಕೇರಳದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಕಾಂಗ್ರೆಸ್ ಪಕ್ವು ಮುಂದಾಗಿದ್ದು, ಇದೇ 28ರಂದು ಸಭೆ ಕರೆದಿದೆ.

ಶುಕ್ರವಾರ ನಡೆಯಲಿರುವ ಸಭೆಯು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಹೊಸ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ನಡೆಯಲಿದೆ. ಕೇರಳ ರಾಜ್ಯದಲ್ಲಿ ನಿರ್ಣಾಯಕ ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಆಂತರಿಕ ಕಲಹವನ್ನು ಶಮನಗೊಳಿಸುವ ಮಾರ್ಗಗಳನ್ನು ಚರ್ಚಿಸುವ ಸಾಧ್ಯತೆಯಿದೆ.

ರಾಜ್ಯದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿ ತರೂರ್, ಕೋಡಿಕುನ್ನಿಲ್ ಸುರೇಶ್, ರಮೇಶ್ ಚೆನ್ನಿಟಾಲ, ಮತ್ತು ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್, ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇತರ ಹಿರಿಯ ನಾಯಕರಾದ ಮುಲ್ಲಪ್ಪಳ್ಳಿ ರಾಮಚಂದ್ರನ್, ಯುಡಿಎಫ್ ಸಂಚಾಲಕ ಎಂ ಎಂ ಹಸನ್ ಮತ್ತು ವಿ ಎಂ ಸುಧೀರನ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಕಳೆದ ವಾರ ರಾಹುಲ್ ಗಾಂಧಿ ಅವರೊಂದಿಗೆ ತರೂರ್ ಅವರ ವೈಯಕ್ತಿಕ ಸಭೆಯ ನಂತರ ಇದು ಈ ಬೆಳವಣಿಗೆ ನಡೆದಿದೆ. ರಾಷ್ಟ್ರಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿರುವುದಕ್ಕೆ ತರೂರ್ ತಮ್ಮ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

ಆದಾಗ್ಯೂ, ರಾಹುಲ್ ಗಾಂಧಿ ಜೊತೆಗಿನ ಸಭೆಯಲ್ಲಿ ಏನಾಯಿತು ಎಂಬುದನ್ನು ತರೂರ್ ಈ ವರೆಗೂ ಬಹಿರಂಗಪಡಿಸಿಲ್ಲ. ಈ ವಾರದ ಆರಂಭದಲ್ಲಿ, ಕೇರಳ ರಾಜ್ಯ ಘಟಕದಲ್ಲಿ ನಾಯಕತ್ವದ ನಿರ್ವಾತದ ಬಗ್ಗೆ ತರೂರ್ ಅವರ ಸಾರ್ವಜನಿಕ ಟೀಕೆ ಮತ್ತು ೨೦೨೬ ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದ ಮುಖವಾಗಿ ಅವರನ್ನು ಬಿಂಬಿಸಿಕೊಳ್ಳುತ್ತಿರುವುದು ಪಕ್ಷವನ್ನು ಕೆರಳಿಸಿದೆ.

ಏತನ್ಮಧ್ಯೆ, ಸಭೆಯು ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷದ ಸಿದ್ಧತೆಗಳ ಮೇಲೆ ಕೇಂದ್ರೀಕರಿಸುತ್ತದೆ. ನಾಯಕತ್ವವು ಬಣಗಳ ನಡುವಿನ ಕಲಹ ಮತ್ತು ಉನ್ನತ ನಾಯಕರ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆಯೂ ಚರ್ಚಿಸಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ.

ಪಕ್ಷಕ್ಕೆ ತಮ್ಮ ಸೇವೆಗಳು ಅಗತ್ಯವಿಲ್ಲದಿದ್ದರೆ ತಮಗೆ ಇತರ ‘ಆಯ್ಕೆಗಳು’ ಇವೆ ಎಂದು ಶಶಿ ಇತ್ತೀಚೆಗೆ ಹೇಳಿದ್ದರು. ಅವರ ಈ ಹೇಳಿಕೆಗಳು ಈಗಾಗಲೇ ಸದಸ್ಯರಲ್ಲಿ ತೀವ್ರ ಒಳಜಗಳವನ್ನು ಎದುರಿಸುತ್ತಿರುವ ಕಾಂಗ್ರೆಸ್ ಶಿಬಿರದಲ್ಲಿ ಸಂಚಲನ ಮೂಡಿಸಿದೆ.

ನಾಲ್ಕು ಬಾರಿ ಸಂಸದರಾಗಿರುವ ಶಶಿ ತರೂರ್ ರಾಜ್ಯ ಘಟಕದಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದಾಗ್ಯೂ, ತರೂರ್ ತಮ್ಮ ಲೇಖನದಲ್ಲಿ ಯಾವುದೇ ರಾಜಕೀಯ ಉಲ್ಲೇಖಗಳಿಲ್ಲ ಮತ್ತು ಅವರ ಗಮನವು ಕೇರಳದ ಬೆಳವಣಿಗೆಯ ಮೇಲೆ ಮಾತ್ರ ಎಂದು ಹೇಳಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments