ಮತದಾರರ ಪಟ್ಟಿ ಪರಿಷ್ಕರಿಸಲು ನಿಯೋಜಿಸಲಾದ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ತಳಮಟ್ಟದ ಸಿಬ್ಬಂದಿಗಳ ಸಾವು ಹಾಗೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಏಕಸದಸ್ಯ ಪೀಠ ಗುರುವಾರ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ತಳಮಟ್ಟದ ಸಿಬ್ಬಂದಿಗಳ ಸಾವು ಹಾಗೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತಿರುವುದಕ್ಕೆ ರಾಜ್ಯ ಸರ್ಕಾರಗಳು ಹೊಣೆ ಹೊರಬೇಕು ಎಂದು ಹೇಳಿದೆ.
ಬೂತ್ ಮಟ್ಟದ ಅಧಿಕಾರಿಗಳು ಅಥವಾ ಬಿಎಲ್‌ಒಗಳು ಕೆಲಸದ ಒತ್ತಡ ಎದುರಿಸುತ್ತಿದ್ದು, ಮಾನಸಿಕ ಖಿನ್ನತೆ ಮುಂತಾದ ಕಾರಣಗಳಿಗಾಗಿ ಮಹಿಳೆಯರು ಹಾಗೂ ಪುರುಷರು ಭೇದವಿಲ್ಲದೇ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ಕಳವಳಕಾರಿ ಎಂದು ಹೇಳಿದೆ.
ಮತದಾರರ ಪಟ್ಟಿ ಪರಿಷ್ಕರಣೆಗೆ “10,000 ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ 30 ಸಾವಿರಕ್ಕೆ ಏರಿಕೆ ಯಾಕೆ ಮಾಡಬಾರದು? ಇದರಿಂದ ಕೆಲಸದ ಒತ್ತಡ ಕಡಿಮೆ ಆಗುವುದಲ್ಲದೇ ಬೇಗ ಸಮಸ್ಯೆ ಬಗೆಹರಿಸಬಹುದಲ್ಲವೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು.
ಕರ್ತವ್ಯದಿಂದ ವಿನಾಯಿತಿ ಕೋರುವ ಬಿಎಲ್‌ಒಗಳಿಗೆ, ವಿಶೇಷವಾಗಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರಾ ಅಥವಾ ಅಸಮರ್ಥರಾಗಿದ್ದಾರ? ರಜೆ ಬೇಕಿದ್ದರೆ ನೀಡಬೇಕು ಮತ್ತು ಅವರ ಬದಲಿಗೆ ಬದಲಿ ವ್ಯಕ್ತಿಯನ್ನು ನೇಮಿಸಬೇಕು ಎಂದು ನ್ಯಾಯಾಲಯ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ.
ರಾಜ್ಯ ಸರ್ಕಾರಗಳು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಸೌಲಭ್ಯ ನೀಡದೇ ಇದ್ದರೆ ಅಥವಾ ಪರಿಹಾರ ಮಾರ್ಗ ಕಂಡುಕೊಳ್ಳದೇ ಇದ್ದರೆ ಬಿಎಲ್‌ಒ ಪ್ರಶ್ನಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಮುಂದಿನ ವರ್ಷದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಚೊಚ್ಚಲ ಪ್ರವೇಶ ಮಾಡುವ ನಿರೀಕ್ಷೆಯಿರುವ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು ಅನುಸರಿಸುತ್ತವೆ.


